ಇಸ್ಲಾಮಾಬಾದ್(ಡಿ.22): ಧರ್ಮ ನಿಂದನೆ ಆರೋಪದ ಮೇಲೆ ಪಾಕಿಸ್ತಾನದ ವಿವಿ ಪ್ರೋಫೆಸರ್‌ವೋರ್ವರಿಗೆ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪ್ರವಾದಿ ಮೊಹ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ 33 ವರ್ಷದ ಜುನೈದ್ ಹಫೀಜ್ ಎಂಬ ಪ್ರೋಫೆಸರ್‌ಗೆ ನ್ಯಾಯಾಲಯ ಗಲ್ಲುಶಿಕ್ಷ ವಿಧಿಸಿದೆ.

ಧರ್ಮ ನಿಂದನೆಯನ್ನು ಪಾಕಿಸ್ತಾನದಲ್ಲಿ ಗುರುತರ ಆರೋಪ ಎಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮೊಹ್ಮದ್ ಪೈಗಂಬರ್ ಅವರನ್ನು ಅಪಮಾನಿಸಿದ ಜುನೈದ್ ಹಫೀಜ್ ಅವರಿಗೆ ಗಲ್ಲು ಸೂಕ್ತ ಎಂದು ನ್ಯಾಯಾಲಯ ಹೇಳಿದೆ.

ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್‌ಗೆ ಗಲ್ಲು ಶಿಕ್ಷೆ!

ಜುನೈದ್ ಹಫೀಜ್ ಅವರಿಗೆ ಗಲ್ಲುಶಿಕ್ಷೆ ಪ್ರಕಟಿಸುತ್ತಿದ್ದಂತೇ, ಸರ್ಕಾರಿ ವಕೀಲ ಅಜೀಮ್ ಚೌಧರಿ ಕೋರ್ಟ್ ಆವರಣದಲ್ಲಿ  ಸಿಹಿ ಹಂಚಿದರಲ್ಲದೇ, ಧರ್ಮ ನಿಂದನೆ ಮಾಡುವವರಿಗೆ ಪಾಕಿಸ್ತಾನದಲ್ಲಿ ಸಾವೇ ಗತಿ ಎಂದು ಗುಡುಗಿದರು.