ವುಹಾನ್‌ (ಡಿ.12): ಕೊರೋನಾ ವೈರಸ್‌ನ ಉಗಮಸ್ಥಾನ ಎಂದೇ ಹೇಳಲಾದ ಚೀನಾದ ವುಹಾನ್‌ನ ಪ್ರಾಣಿ ಮಾರುಕಟ್ಟೆಬಂದ್‌ ಆಗಿ ಒಂದು ವರ್ಷವಾಗಿದ್ದು, ಈಗಲೂ ತೆರೆದಿಲ್ಲ.

ಹೌದು. ತರಹೇವಾರಿ ಚಿತ್ರ ವಿಚಿತ್ರ ಸಮುದ್ರ ಖಾದ್ಯಗಳು ಹಾಗೂ ಮಾಂಸಗಳು ಲಭಿಸುತ್ತಿದ್ದ ವುಹಾನ್‌ ಪೇಟೆಯಲ್ಲಿ ಮೊತ್ತಮೊದಲ ಬಾರಿಗೆ ಕೊರೋನಾ ವೈರಸ್‌ ಕಂಡುಬಂದಿದ್ದು 2019ರ ಡಿಸೆಂಬರ್‌ 31ರಂದು. ಅಂದು ನಿಗೂಢ ಕಾಯಿಲೆಯ 4 ಪ್ರಕರಣಗಳು ಮಾರುಕಟ್ಟೆಯಲ್ಲಿ ಪತ್ತೆಯಾದವು. ಮುಂದೆ ಇದು ಕೊರೋನಾ ವೈರಸ್‌ ಎಂದು ಖಚಿತಪಟ್ಟಿತು.

ಚೀನಾ ಲ್ಯಾಬ್‌ನಿಂದ ಕೊರೋನಾ ಬಂದಿದೆ: ಮತ್ತೊಮ್ಮೆ ಸತ್ಯ ಬಿಟ್ಟಿಟ್ಟ ಚೀನಾ ವೈರೊಲಜಿಸ್ಟ್!

ಬಳಿಕ 76 ದಿವಸಗಳ ಕಾಲ ನಗರ ಲಾಕ್‌ಡೌನ್‌ ಆಯಿತು. ಅದಾದ ನಂತರ ಕೊರೋನಾ ಪ್ರಭಾವ ವಿಶ್ವದೆಲ್ಲೆಡೆ ವ್ಯಾಪಿಸಿದರೂ ವುಹಾನ್‌ನಲ್ಲಿ ನಿಯಂತ್ರಣಕ್ಕೆ ಬಂದಿದೆ. ಲಾಕ್‌ಡೌನ್‌ ಅಂತ್ಯದ ಬಳಿಕ ಜನಜೀವನ ಸಹಜವಾಗಿದೆ. ಆದರೂ ಅಂದಿನಿಂದ ಇಂದಿನವರೆಗೆ ಕೊರೋನಾ ಮೂಲವಾದ ವುಹಾನ್‌ ಮಾರುಕಟ್ಟೆತೆರೆದಿಲ್ಲ.

ಅಲ್ಲದೆ, ಮಾರುಕಟ್ಟೆಯನ್ನು ಧ್ವಂಸ ಕೂಡ ಮಾಡಿಲ್ಲ. ಈ ಸ್ಥಳಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಜ್ಞರು ಇನ್ನೂ ಭೇಟಿ ನೀಡಿಲ್ಲ. ಅವರು ಭೇಟಿ ನೀಡಿ ಅಧ್ಯಯನ ನಡೆಸುವವರೆಗೆ ಇದು ತೆರವಾಗಲಿಕ್ಕಿಲ್ಲ ಎಂದು ಹೇಳಲಾಗಿದೆ.

ಕೊರೋನಾ ನಿಯಂತ್ರಣ ಮಾಡಲು ಭಾರತದ ನೆರವು ವಿಶ್ವಕ್ಕೆ ಅಗತ್ಯವಿದೆ: ಬಿಲ್ ಗೇಟ್ಸ್!

ಆದರೆ ‘ವುಹಾನ್‌ ಅನ್ನು ಸುಖಾಸುಮ್ಮನೇ ಟಾರ್ಗೆಟ್‌ ಮಾಡಲಾಗಿದೆ. ಕೊರೋನಾದ ಉಗಮ ಸ್ಥಾನ ವುಹಾನ್‌ ಅಲ್ಲ. ಬೇರೆಯದೇ ದೇಶ. ವುಹಾನ್‌ ಬಲಿಪಶು ಮಾತ್ರ’ ಎಂಬುದು ಚೀನೀಯರ ವಾದ.