ಲಂಡನ್(ಏ.19)‌: ಕೊರೋನಾ ಸಾವಿನ ನರ್ತನಕ್ಕೆ ಬಳಲಿರುವ ಬ್ರಿಟನ್‌ನಲ್ಲಿ ಈಗ ವೈರಸ್‌ ಭಾದಿತ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಧರಿಸಲು ಸರ್ಜಿಕಲ್‌ ಗೌನ್‌ಗಳ ಕೊರತೆಯುಂಟಾಗಿದೆ.

ದಿನಕ್ಕೆ ಸಾವಿರದಷ್ಟುಮಂದಿಗೆ ಸೋಂಕು ತಟ್ಟುತ್ತಿದ್ದು, ಚಿಕಿತ್ಸೆಗೆ ವೈದ್ಯಕೀಯ ಪರಿಕರಗಳ ಕೊರತೆ ಎದುರಾಗಿದೆ. ಹಾಗಾಗಿ ಸರ್ಜಿಕಲ್‌ ಗೌನ್‌ ಬದಲಿಗೆ ಏಪ್ರನ್‌ (ಅಡುಗೆ ಮಾಡುವ ವೇಳೆ ಬಳಸುವ) ಧರಿಸಿ ಶುಶ್ರೂಷೆ ಮಾಡಿ ಎಂದು ಸರ್ಕಾರವೇ ವೈದ್ಯಕೀಯ ಸಿಬ್ಬಂದಿಗಳಿಗೆ ಹೇಳಿದೆ. ಸರ್ಜಿಕಲ್‌ ಗೌನ್‌ಗಳ ಕೊರತೆ ಎದುರಾಗಿದೆ.

ಕೆಲಸ, ಹಣ ಇಲ್ಲದೇ ಮೊಬೈಲ್‌ ಮಾರಿ ಕೊನೆಗೆ ಆತ್ಮಹತ್ಯೆಗೆ ಶರಣು!

ಹೊಸ ದಾಸ್ತಾನು ಬರಬೇಕಿದೆ ಎಂದು ಬ್ರಿಟನ್‌ ಆರೋಗ್ಯ ಸಚಿವ ಮ್ಯಾಟ್‌ ಹ್ಯಾಂಕಾಂಕ್‌ ಹೇಳಿದ್ದಾರೆ. ಏಕ ಬಳಕೆಯ ಕೈ ಗ್ಲೌಸ್‌ಗಳನ್ನು ಶುಚಿಗೊಳಿಸಿ ಮತ್ತೆ ಬಳಸಿ ಎಂದು ವೈದ್ಯರಿಗೆ ಸೂಚನೆ ನೀಡಲಾಗಿದೆ.