ವೆಲ್ಲಿಂಗ್ಟನ್‌ (ಏ.09): ಭಾರತದಲ್ಲಿ ಕೋವಿಡ್‌ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್‌ ಇದೇ ಮೊದಲ ಬಾರಿಗೆ ತನ್ನ ದೇಶದವರೂ ಸೇರಿ ಭಾರತದಿಂದ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೆ ನಿಷೇಧ ಹೇರಿದೆ.

 ಏ.11ರಿಂದ 2 ವಾರಗಳ ಕಾಲ ನಿಷೇಧ ಹೇರಿದೆ. ನಿಷೇಧ ಭಾನುವಾರದಿಂದ ಏ.28ರ ವರೆಗೆ ಜಾರಿಯಲ್ಲಿರಲಿದೆ.

ಬ್ರೇಕಿಂಗ್ : ಕೊರೊನಾಗೆ ಹೊಸ ಔಷಧ, ಮಹಾಮಾರಿಯ ಮರಣಶಾಸನ! ..

 ನ್ಯೂಜಿಲೆಂಡ್‌ನಲ್ಲಿ ಗುರುವಾರ ಹೊಸದಾಗಿ 23 ಜನರಿಗೆ ಕೋವಿಡ್‌ ಸೋಂಕು ದೃಢಪಟ್ಟಿದ್ದು, ಈ ಪೈಕಿ 17 ಮಂದಿ ಭಾರತೀಯರಾಗಿದ್ದಾರೆ.

ಭಾರತದಲ್ಲಿ ಈಗಾಗಲೇ ಪ್ರತಿದಿನವೂ ಸಾವಿರಾರು ಪ್ರಕರಣಗಳು ಹೆಚ್ಚಾಗುತ್ತಿವೆ. ಮೊದಲ ಅಲೆಗಿಂತ ಎರಡನೆ ಅಲೆ ಹೆಚ್ಚು ವ್ಯಾಪಕವಾಗಿ ಹರಡುತ್ತಿದ್ದು ಆತಂಕ ಮನೆ ಮಾಡಿದೆ. ಅಲ್ಲದೇ ಈಗಾಗಲೇ ಸಾಕಷ್ಟು ಕಠಿಣ ಕ್ರಮಗಳನ್ನು ಜಾರಿ ಮಾಡಲಾಗಿದೆ.