'ಇದು ಮುಸ್ಲಿಂ ದೇಶವಲ್ಲವೇ'? ಮಹಿಳೆಯಿಂದ ಗಣೇಶ ವಿಗ್ರಹ ಕುಟ್ಟಿ ಪುಡಿಪುಡಿ!
ಗಣೇಶನ ವಿಗ್ರಹ ಪುಡಿ ಪುಡಿ ಮಾಡಿದ ಮಹಿಳೆ/ ಅಂಗಡಿಯಲ್ಲಿ ಮಾರಾಟಕ್ಕೆಂದು ಇಟ್ಟಿದ್ದ ವಿಗ್ರಹ/ ಇದು ಮುಸ್ಲಿಂ ದೇಶವಲ್ಲವೇ ಎಂದು ಪ್ರಶ್ನೆ/ ಬಹರೇನ್ ನಲ್ಲಿ ಘಟನೆ
ಮನಮಾ(ಆ. 17): ಬೆಹರೇನ್ ಮಹಿಳೆಯೊಬ್ಬರು ಆಕ್ರೋಶದದಿಂದ ಗಣೇಶನ ವಿಗ್ರಹವನ್ನು ಪುಡಿ ಪುಡಿ ಮಾಡುತ್ತಿರುವ ವೈರಲ್ ಆಗುತ್ತಿದೆ.
ಅಂಗಡಿಯೊಂದಕ್ಕೆ ಬಂದ ಮಹಿಳೆ ಇಂಥ ಕೆಲಸ ಮಾಡಿದ್ದು ಅಂತಾರಾಷ್ಟ್ರೀಯ ಮಟ್ಟದ ಚರ್ಚೆಗೆ ಕಾರಣವಾಗಿದೆ. ಮನಮಾದ ರಾಜಧಾನಿ ಜುಫೈರ್ ನಲ್ಲಿ ಈ ಘಟನೆ ನಡೆದಿದ್ದು 54 ವರ್ಷದ ಮಹಿಳೆಗೆ ಸಮನ್ಸ್ ನೀಡಲಾಗಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ಮಹಿಳೆ ಮೇಲೆ ದೂರು ದಾಖಲಾಗಿದೆ. ಮಹಿಳೆ ಸಹ ತಪ್ಪು ಒಪ್ಪಿಕೊಂಡಿದ್ದಾರೆ. ಮಹಿಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
'ಪೊಲೀಸ್ ಠಾಣೆಗೆ ಕಲ್ಲು ಹೊಡೆಯಿರಿ ಎಂದು ಇಸ್ಲಾಂ ಧಮರ್ಮ ಹೇಳಿಲ್ಲ'
ಆಕ್ರೋಶಗೊಂಡ ಒಬ್ಬ ಮಹಿಳೆ ಮಾರಾಟಕ್ಕೆಂದು ಇಟ್ಟಿದ್ದ ಗಣೇಶ ವಿಗ್ರವನ್ನು ಪುಡಿಪುಡಿ ಮಾಡುತ್ತಾರೆ. 'ಇದು ಮುಸ್ಲಿಂ ದೇಶವಲ್ಲವೇ?, ಇಲ್ಲಿ ಈ ದೇವರನ್ನು ಯಾರೂ ಪೂಜೆ ಮಾಡುತ್ತಾರೆ.. ನಡಿ ಪೊಲೀಸ್ ಅಧಿಕಾರಿಯನ್ನು ಕರೆ' ಎಂದು ಮತ್ತೊಬ್ಬ ಮಹಿಳೆ ಅಂಗಡಿಯವನನ್ನು ಪ್ರಶ್ನೆ ಮಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಘಟನೆಗೆ ವ್ಯಾಪಕ ಆಕ್ರೋಶ ಕೇಳಿಬಂದಿದೆ. ಬಹರೇನ್ ರಾಜನ ಸಲಹೆಗಾರ ಕಲೀದ್ ಅಲ್ ಕಲೀಫಾ ಮಹಿಳೆಯ ವರ್ತನೆ ಸಹಿಸಲು ಅಸಾಧ್ಯ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
"
ದೇವರ ಮೂರ್ತಿ ಭಂಗ ಮಾಡುವುದು ಬಹರೇನ್ ಸಂಸ್ಕೃತಿ ಅಲ್ಲ, ಇಲ್ಲಿ ಎಲ್ಲರೂ ಒಂದಾಗಿ ಬಾಳುತ್ತಿದ್ದಾರೆ. ಇದೊಂದು ಅಪಪರಾಧ ಎಂದು ಹೇಳಿದ್ದಾರೆ. ಸಾವಿರಾರು ಭಾರತೀಯರು ಉದ್ಯೋಗ ಸೇರಿದಂತೆ ನಾನಾ ಕಾರಣದಿಂದ ಬಹರೇನ್ ನಲ್ಲಿ ನೆಲೆ ನಿಂತಿದ್ದಾರೆ.