ಮುಂಬೈ ದಾಳಿ ಸಂಚುಕೋರಗೆ 10 ವರ್ಷ ಜೈಲು

 ಜಮಾತ್‌-ಉದ್‌-ದವಾ (ಜೆಯುಡಿ) ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ಗೆ ಪಾಕಿಸ್ತಾನದ ಲಾಹೋರ್‌ನಲ್ಲಿರುವ ಭಯೋತ್ಪಾದನೆ ನಿಗ್ರಹ ಕೋರ್ಟ್‌ 10 ವರ್ಷಗಳ ಜೈಲುಶಿಕ್ಷೆ ನೀಡಿದೆ

mumbai Terror Attack Mastermind hafiz gets 10 Year Jail snr

ಲಾಹೋರ್‌ (ನ.20): 26/11 ಮುಂಬೈ ದಾಳಿಯ ಸಂಚುಕೋರ ಹಾಗೂ ಜಮಾತ್‌-ಉದ್‌-ದವಾ (ಜೆಯುಡಿ) ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ಗೆ ಪಾಕಿಸ್ತಾನದ ಲಾಹೋರ್‌ನಲ್ಲಿರುವ ಭಯೋತ್ಪಾದನೆ ನಿಗ್ರಹ ಕೋರ್ಟ್‌ 10 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.

ಕಳೆದ ವರ್ಷದ ಜುಲೈನಲ್ಲಿ ಹಫೀಜ್‌ ಸಯೀದ್‌ನನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಪೂರೈಸಿದ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಬಂಧಿಸಲಾಗಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಎರಡು ಪ್ರಕರಣಗಳಲ್ಲಿ ಆತನಿಗೆ 11 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿತ್ತು. ಸದ್ಯ ಆತ ಲಾಹೋರ್‌ನ ಬಿಗಿ ಭದ್ರತೆಯ ಲಖಪತ್‌ ಜೈಲಿನಲ್ಲಿದ್ದಾನೆ. ಇದೀಗ ಮತ್ತೆರಡು ಪ್ರಕರಣಗಳಲ್ಲಿ ಆತನ ವಿರುದ್ಧ ಗುರುವಾರ ತೀರ್ಪು ಪ್ರಕಟವಾಗಿದ್ದು, 10 ವರ್ಷಗಳ ಶಿಕ್ಷೆ ವಿಧಿಸಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಉಗ್ರ ದಾಳಿಗೆ ಬಿಗ್ ಪ್ಲಾನ್, ಇಬ್ಬರು 'ಕಸಬ್' ಅರೆಸ್ಟ್! ...

ಸಯೀದ್‌ನ ಜೊತೆಗೆ ಆತನ ಇಬ್ಬರು ಸಹಚರರಾದ ಜಫರ್‌ ಇಕ್ಬಾಲ್‌ ಹಾಗೂ ಯಾಹ್ಯಾ ಮುಜಾಹಿದ್‌ಗೂ 10 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ. ಸಯೀದ್‌ನ ಭಾವ ಅಬ್ದುಲ್‌ ರೆಹಮಾನ್‌ ಮಕ್ಕಿಗೆ ಆರು ತಿಂಗಳ ಜೈಲುಶಿಕ್ಷೆ ವಿಧಿಸಲಾಗಿದೆ. ಸಯೀದ್‌ ಹಾಗೂ ಜೆಯುಡಿ ವಿರುದ್ಧ ಒಟ್ಟು 41 ಪ್ರಕರಣಗಳು ಪಾಕಿಸ್ತಾನದಲ್ಲಿ ದಾಖಲಾಗಿವೆ. ಅವುಗಳಲ್ಲಿ 24 ಪ್ರಕರಣಗಳು ಇತ್ಯರ್ಥಗೊಂಡಿದ್ದು, ನಾಲ್ಕರಲ್ಲಿ ಸಯೀದ್‌ಗೆ ಶಿಕ್ಷೆಯಾಗಿದೆ. ಇನ್ನುಳಿದ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿಯಿವೆ.

ಕುಖ್ಯಾತ ಲಷ್ಕರ್‌-ಎ-ತೊಯ್ಬಾ ಸಂಘಟನೆಯ ಅಂಗ ಸಂಘಟನೆ ಜೆಯುಡಿ ಆಗಿದ್ದು, ಇದೇ ಸಂಘಟನೆ 2008ರಲ್ಲಿ ಮುಂಬೈನಲ್ಲಿ ಸರಣಿ ಭಯೋತ್ಪಾದಕ ದಾಳಿ ನಡೆಸಿ 166 ಜನರ ಸಾವಿಗೆ ಕಾರಣವಾಗಿತ್ತು. ಅಮೆರಿಕ ಸರ್ಕಾರ ಹಾಗೂ ವಿಶ್ವಸಂಸ್ಥೆಗಳು ಜೆಯುಡಿ ಹಾಗೂ ಸಯೀದ್‌ನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿವೆ. ಅಮೆರಿಕ ಸರ್ಕಾರ ಈತನ ತಲೆಗೆ 72 ಕೋಟಿ ರು. ಬಹುಮಾನ ಘೋಷಿಸಿದೆ.

Latest Videos
Follow Us:
Download App:
  • android
  • ios