ಶ್ರೀಲಂಕಾ(ಏ.08): ಶ್ರೀಲಂಕಾದ ಜನಪ್ರಿಯ ಮಿಸಸ್‌ ಶ್ರೀಲಂಕಾ ಸೌಂದರ್ಯ ಸ್ಪರ್ಧೆಯ ಪ್ರಶಸ್ತಿ ಪ್ರಧಾನ ಸಮಾರಂಭದ ವೇದಿಕೆ ಮೇಲೆ ಭಾರೀ ಜಟಾಪಟಿ ನಡೆದ ಘಟನೆ ಭಾನುವಾರ ಸಂಭವಿಸಿದೆ. ಘಟನೆಯಲ್ಲಿ ಪ್ರಶಸ್ತಿ ವಿಜೇತೆ ಪುಷ್ಪಿಕಾ ಡಿ ಸಿಲ್ವಾರ ತಲೆ ಪೆಟ್ಟು ಬಿದ್ದಿದೆ.

ಭಾನುವಾರ ನಡೆದ ಕಾರ‍್ಯಕ್ರಮದಲ್ಲಿ ಪುಶ್ಪಿಕಾ ವಿಜೇತರಾಗಿ ಕಿರೀಟವನ್ನೂ ಧರಿಸಿ ವಾಕ್‌ ಮಾಡಿದ್ದರು. ಈ ವೇಳೆ ಸ್ಪರ್ಧೆಯ ರನ್ನರ್‌ ಅಪ್‌ ಕರೋಲಿನ್‌ ಜೂರಿ, ನಿಯಮದ ಪ್ರಕಾರ ವಿಚ್ಛೇದಿತ ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗವಹಿವಂತಿಲ್ಲ ಎಂದು ಶಿಲ್ವಾ ಅವರ ತಲೆಯ ಮೇಲಿದ್ದ ಕಿರೀಟ ಎಳೆದು ಕಸಿದುಕೊಂಡಿದ್ದರು. ಬಳಿಕ ಪುಶ್ವಿಕಾ ವೇದಿಕೆಯಿಂದ ಕೆಳಗಿಳಿದು ಹೋಗಿದ್ದರು.

ಬಳಿಕ ಭಾನುವಾರ ನಡೆದ ಘಟನೆಯಿಂದ ತಮ್ಮ ತಲೆಗೆ ಏಟು ಬಿದ್ದಿದಾಗಿ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಈ ಬೆನ್ನಲ್ಲೇ ಪುಶ್ಪಿಕಾ ವಿಚ್ಛೇದಿತ ಮಹಿಳೆ ಅಲ್ಲ, ಹಾಗಾಗಿ ಕಿರೀಟವನ್ನು ಹಿಂದಿರುಗಿಸಬೇಕೆಂದು ಸ್ಪರ್ಧೆಯ ಆಯೋಜಕರು ತಿಳಿಸಿದ್ದರು. ಬಳಿಕ ಮಂಗಳವಾರ ಕಿರೀಟವನ್ನು ಹಿಂದಿರುಗಿಸಲಾಗಿದೆ.