ಆಸ್ಟ್ರಾ, ಫೈಝರ್‌ ಮಿಶ್ರಣದಿಂದ ಹೆಚ್ಚಿನ ರೋಗ ನಿರೋಧಕ ಶಕ್ತಿ!

* ಆಕ್ಸಫರ್ಡ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಂಶೋಧನೆ

* ಒಂದೇ ಕಂಪನಿಯ ಎರಡು ಡೋಸ್‌ ಪಡೆಯುವ ಬದಲು. ಎರಡು ಬೇರೆ ಬೇರೇ ಕಂಪನಿಗಳ ಡೋಸ್‌ 

* ಆಸ್ಟ್ರಾ, ಫೈಝರ್‌ ಮಿಶ್ರಣದಿಂದ ಹೆಚ್ಚಿನ ರೋಗ ನಿರೋಧಕ ಶಕ್ತಿ

Mixing Astra and Pfizer Shots Creates Strong Immune Response pod

ಲಂಡನ್‌(ಜೂ.30): ಒಂದೇ ಕಂಪನಿಯ ಎರಡು ಡೋಸ್‌ ಪಡೆಯುವ ಬದಲು. ಎರಡು ಬೇರೆ ಬೇರೇ ಕಂಪನಿಗಳ ಡೋಸ್‌ ಅನ್ನು ಪಡೆಯುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿ ಆಗಲಿದೆ. ಉದಾಹರಣೆಗೆ ಫೈಝರ್‌ನ ಮೊದಲ ಡೋಸ್‌ ಪಡೆದುಕೊಂಡಿದ್ದ ವ್ಯಕ್ತಿಗೆ ನಾಲ್ಕು ವಾರಗಳ ಅಂತರದಲ್ಲಿ ಆಸ್ಟ್ರಾಜೆನೆಕಾದ 2ನೇ ಡೋಸ್‌ ನೀಡುವುದರಿಂದ ಪ್ರತಿಕಾಯಗಳ ಸಾಂದ್ರತೆ ಹೆಚ್ಚಿನ ಪ್ರಮಾಣದಲ್ಲಿರಲಿದೆ ಎಂದು ಲಾನ್ಸೆಟ್‌ ಮೆಡಿಕಲ್‌ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ತಿಳಿಸಿದೆ.

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಎರಡು ಡೋಸ್‌ಗಳ ಮಿಶ್ರಣದಿಂದ ಆಗುವ ದೇಹದ ಮೇಲೆ ಆಗುವ ಪರಿಣಾಮವನ್ನು ಅಧ್ಯಯನ ನಡೆಸಿದ ವೇಳೆ ಉತ್ತಮ ಫಲಿತಾಂಶ ಕಂಡುಬಂದಿದೆ. ಫೈಝರ್‌ ಬಳಿಕ ಆಸ್ಟ್ರಾ ಲಸಿಕೆ ಪಡೆಯುವುದಕ್ಕಿಂತಲೂ ಆಸ್ಟ್ರಾ ಬಳಿಕ ಫೈಝರ್‌ ಲಸಿಕೆ ಪಡೆದರೆ ಹೆಚ್ಚು ಉತ್ತಮ ಎಂದು ವಿಜ್ಸಾನಿಗಳು ತಿಳಿಸಿದ್ದಾರೆ.

ಇದರಿಂದಾಗಿ ಲಸಿಕೆಯ ಕೊರತೆ ಎದುರಿಸುತ್ತಿರುವ ಬಡ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲಿ ತುರ್ತಾಗಿ ಲಭ್ಯವಿರುವ ಲಸಿಕೆಗಳನ್ನು ಬಳಕೆಮಾಡಿಕೊಳ್ಳಲು ಅನುಕೂಲವಾಗಲಿದೆ. ಅಲ್ಲದೇ 2 ಡæೂೕಸ್‌ ಲಸಿಕೆಯ ನಡುವಿನ ಅಂತರವನ್ನು ಕೂಡ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಅವಕಾಶ ದೊರೆಯಲಿದೆ.

ಆಸ್ಟ್ರಾಜೆನೆಕಾದ 2 ಡೋಸ್‌ ಲಸಿಕೆಯ ಮಧ್ಯೆ 12 ವಾರಗಳ ಅಂತರವನ್ನು ನಿಗದಿ ಮಾಡಲಾಗಿದೆ. ಆದರೆ, ಇನ್ನೊಂದು ಕಂಪನಿಯ ಲಸಿಕೆ ಪಡೆಯಲು ಇದೇ ಅಂತರವನ್ನು ಪಾಲಿಸಬೇಕಾಗಿಲ್ಲ. ಲಭ್ಯವಿರುವ ಲಸಿಕೆಯನ್ನು ಪಡೆದುಕೊಳ್ಳಬಹುದಾಗಿದೆ.

Latest Videos
Follow Us:
Download App:
  • android
  • ios