Asianet Suvarna News Asianet Suvarna News

ವಿಶ್ವಸಂಸ್ಥೆಯ ಸಂಭಾವ್ಯ ಜಾಗತಿಕ ಆಯೋಗಕ್ಕೆ ಪ್ರಧಾನಿ ಮೋದಿ ಹೆಸರು ಪ್ರಸ್ತಾಪಿಸಿದ ಮೆಕ್ಸಿಕೋ ಅಧ್ಯಕ್ಷ!

ರಷ್ಯಾ ಹಾಗೂ ಉಕ್ರೇನ್‌ ನಡುವಿನ ಯುದ್ಧ, ಚೀನಾ ಪ್ರದೇಶದಲ್ಲಿನ ಯುದ್ಧಾತಂಕದ ನಡುವೆ, ಜಗತ್ತಿನಲ್ಲಿ ಮುಂದಿನ ಐದು ವರ್ಷಗಳ ಕಾಲ ಯುದ್ಧವೇ ಇಲ್ಲದೆ ಬದುಕುವ ಜಾಗತಿಕ ಒಪ್ಪಂದವನ್ನು ವಿಶ್ವಸಂಸ್ಥೆಗೆ ಪ್ರಸ್ತಾಪಿಸುವುದಾಗಿ ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಹೇಳಿದ್ದಾರೆ. ಇದಕ್ಕಾಗಿ ಒಂದು ಅಯೋಗವನ್ನೂ ರಚನೆ ಮಾಡಬೇಕು ಎಂದಿದ್ದು, ಆಯೋಗವನ್ನು ಪೋಪ್ ಫ್ರಾನ್ಸಿಸ್, ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಇರಬೇಕು ಎಂದು ಹೇಳಿದ್ದಾರೆ.
 

Mexican President Andres Manuel Lopez Obrador proposes a five year global truce without war to the UN PM Modi san
Author
Bengaluru, First Published Aug 10, 2022, 5:31 PM IST

ನ್ಯೂಯಾರ್ಕ್‌ (ಆ.10): ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರು  ವಿಶ್ವಸಂಸ್ಥೆಗೆ ಲಿಖಿತ ಪ್ರಸ್ತಾವನೆಯನ್ನು ಸಲ್ಲಿಸುವುದಾಗಿ ಸೋಮವಾರ ಘೋಷಣೆ ಮಾಡಿದ್ದಾರೆ. ಯುದ್ಧ ಅಥವಾ ವ್ಯಾಪಾರ ಯುದ್ಧಗಳಿಲ್ಲದೆ ಐದು ವರ್ಷಗಳ ವಿಶ್ವ ಒಪ್ಪಂದವನ್ನು ಉತ್ತೇಜಿಸಲು ಮೂರು ವ್ಯಕ್ತಿಗಳಿಂದ ಮಾಡಲ್ಪಟ್ಟ ಆಯೋಗವನ್ನು ರಚಿಸುವಂತೆ ಅವರು ಶಿಫಾರಸು ಮಾಡಿದ್ದು.  ಆಯೋಗವನ್ನು ಪೋಪ್ ಫ್ರಾನ್ಸಿಸ್, ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇರಬೇಕು ಎಂದು ಹೇಳಿದ್ದಾರೆ. "ನಾನು ಪ್ರಸ್ತಾವನೆಯನ್ನು ಲಿಖಿತವಾಗಿ ನೀಡಲಿದ್ದು, ಇದನ್ನು ವಿಶ್ವಸಂಸ್ಥೆಯಲ್ಲೂ ನಾನು ಪ್ರಸ್ತಾಪಿಸುತ್ತೇನೆ. ನಾನು ಇದನ್ನು ಏಕೆ ಹೆಳುತ್ತಿದ್ದೇನೆ ಎಂದರೆ, ಜಗತ್ತಿನ ಮಾಧ್ಯಮಗಳು ಈ ಕುರಿತಾಗಿ ಇನ್ನಷ್ಟು ಪ್ರಚಾರ ಮಾಡಬೇಕು ಎನ್ನುವ ಕಾರಣಕ್ಕೆ ಇದನ್ನು ಹೇಳುತ್ತಿದ್ದೇನೆ ಎಂದಿದ್ದಾರೆ. ಅವರಿಗೆ ಅಗತ್ಯವಿಲ್ಲದ ವಿಚಾರಗಳ ಬಗ್ಗೆ ಮಾಧ್ಯಮಗಳು ಎಂದಿಗೂ ಮಾತನಾಡುವುದಿಲ್ಲ' ಎಂದು ಸಾಂಪ್ರದಾಯಿಕ ಬೆಳಗಿನ ಸುದ್ದಿಗೋಷ್ಠಿಯಲ್ಲಿ ಲೋಪಜ್‌ ಒಬ್ರಡಾರ್‌ ಹೇಳಿದ್ದಾರೆ. ಈ ಆಯೋಗದಲ್ಲಿ ಪೋಪ್‌ ಫ್ರಾನ್ಸಿಸ್‌, ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಇರಬೇಕು ಎಂದು ಹೇಳಿದ್ದಾರೆ. 

ಇವರ ಉದ್ದೇಶವೆಂದರೆ, ನಿಯಮಿತವಾಗಿ ಸಭೆ ನಡೆಸುವುದು ಮಾತ್ರವಲ್ಲದೆ, ಯುದ್ಧವಾಗುವ ಸಂಭವ ಇರುವ ಕಡೆ ಯದ್ಧಗಳನ್ನು ನಿಲ್ಲಿಸುವ ಪ್ರಸ್ತಾಪವನ್ನು ನೀಡುತ್ತಾರೆ. ಹಾಗೂ ಅಯಾ ದೇಶಗಳೊಂದಿಗೆ ಕನಿಷ್ಠ ಐದು ವರ್ಷಗಳ ಯುದ್ಧಗಳಿಲ್ಲದ ಜಾಗತಿಕ ಒಪ್ಪಂದವನ್ನು ತಲುಪಲು ಸಹಾಯ ಮಾಡುತ್ತಾರೆ.  ಇದರಿಂದಾಗಿ ಪ್ರಪಂಚದಾದ್ಯಂತದ ಸರ್ಕಾರಗಳು ತಮ್ಮ ಜನರನ್ನು ಬೆಂಬಲಿಸಲು ತಮ್ಮನ್ನು ಅರ್ಪಿಸಿಕೊಳ್ಳುತ್ತವೆ, ವಿಶೇಷವಾಗಿ ಯುದ್ಧ ಮತ್ತು ಅದರ ಪರಿಣಾಮಗಳಿಂದ ಹೆಚ್ಚು ಬಳಲುತ್ತಿರುವ ಜನರಿಗೆ ಇದು ನೆರವಾಗಲಿದೆ. ಜಗತ್ತಿಗೆ ಐದು ವರ್ಷಗಳು ಉದ್ವಿಗ್ನತೆ ಇಲ್ಲದೆ, ಹಿಂಸೆಯಿಲ್ಲದೆ ಮತ್ತು ಶಾಂತಿಯಿಂದ ಇರುತ್ತವೆ ಎಂದು ಹೇಳಿದ್ದಾರೆ.

ಲೋಪೆಜ್ ಒಬ್ರಡಾರ್ ಯುದ್ಧೋಚಿತ ಕ್ರಮಗಳನ್ನು ಕೊನೆಗೊಳಿಸಲು ಕರೆ ನೀಡಿದ್ದಾರೆ ಮತ್ತು ಶಾಂತಿಯನ್ನು ಹುಡುಕಲು ಮೂರು ಜಾಗತಿಕ ಶಕ್ತಿಗಳಾದ ಚೀನಾ, ರಷ್ಯಾ ಮತ್ತು ಅಮೆರಿಕವನ್ನು ಆಹ್ವಾನಿಸಿದ್ದಾರೆ. 'ಇದು ಅರಿಗೆ ಅರ್ಥವಾಗುತ್ತದೆ ಎಂದುಕೊಳ್ಳುತ್ತೇನೆ. ಅವರ ಯುದ್ಧೋನ್ಮಾದಗಳಿಂದ ಒಂದು ವರ್ಷದ ಒಳಗಾಗಿ ವಿಶ್ವದ ಪರಿಸ್ಥಿತಿಯನ್ನು ಹದಗೆಡಿಸಿದ್ದಾರೆ. ಇಂದು ವಿಶ್ವದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದರೆ, ಅದಕ್ಕೆ ಈ ಮೂರು ದೇಶಗಳೇ ಕಾರಣ. ಅವರು ವಿಶ್ವ ಆರ್ಥಿಕ ಬಿಕ್ಕಟ್ಟನ್ನು ಉಂಟುಮಾಡಿದ್ದಾರೆ, ಅವರು ಹಣದುಬ್ಬರವನ್ನು ಹೆಚ್ಚಿಸಿದ್ದಾರೆ ಮತ್ತು ಆಹಾರದ ಕೊರತೆಯನ್ನು ಹೆಚ್ಚಿಸಿದ್ದಾರೆ, ಹೆಚ್ಚು ಬಡತನವನ್ನು ಉಂಟುಮಾಡಿದ್ದಾರೆ ಮತ್ತು ಎಲ್ಲಕ್ಕಿಂತ ಕೆಟ್ಟದಾಗಿ, ಒಂದು ವರ್ಷದಲ್ಲಿ ಆದ ಘರ್ಷಣೆಗಳಿಂದ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ನನ್ನ ಈ ಮಾತುಗಳಲ್ಲಿ ಅವರು, ಈ ಒಂದು ವರ್ಷದಲ್ಲಿ ಏನೆಲ್ಲಾ ಮಾಡಿದ್ದಾರೆ ಎನ್ನುವ ವಿವರಗಳಿವೆ' ಎಂದು ಹೇಳಿದ್ದಾರೆ.

ಮೋದಿ, ಶಾಗೆ ಶಾಕ್, ಬಿಜೆಪಿ ಸಖ್ಯ ತೊರೆದಿದ್ದೇಕೆ ಬಿಹಾರ ಸಿಎಂ ನಿತೀಶ್ ಕುಮಾರ್..?

ರಷ್ಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ "ನಾವು ಪ್ರಸ್ತಾಪಿಸುತ್ತಿರುವಂತಹ ಮಧ್ಯಸ್ಥಿಕೆಯನ್ನು ಆಲಿಸುತ್ತವೆ ಮತ್ತು ಸ್ವೀಕರಿಸುತ್ತವೆ" ಎಂದು ನಾವು ಆಶಿಸುತ್ತೇವೆ ಎಂದು ಹೇಳಿದ್ದಾರೆ. ಹೆಚ್ಚುವರಿಯಾಗಿ, ಈ ಕದನವಿರಾಮವು "ತೈವಾನ್, ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ವಿಷಯದಲ್ಲಿ ಒಪ್ಪಂದಗಳನ್ನು ತಲುಪಲು ಸಹಾಯ ಮಾಡುತ್ತದೆ ಮತ್ತು ಪ್ರಚಾರ ಮಾಡದೆ, ಹೆಚ್ಚು ಮುಖಾಮುಖಿಯಾಗುವಂತೆ ಮಾಡುತ್ತದೆ". ಈ ಮೂರು ಶಕ್ತಿಗಳ ಮೂರು ಸರ್ಕಾರಗಳ ಇಚ್ಛಾಶಕ್ತಿ ಇದ್ದರೆ ಈ ಒಪ್ಪಂದಕ್ಕೆ ಬರಲು ಸಾಧ್ಯ,’’ ಎಂದು ಪುನರುಚ್ಚರಿಸಿದರು.

ಪ್ರಧಾನಿ ಮೋದಿ ಆಸ್ತಿ 84 ಲಕ್ಷ ಇಳಿಕೆ: ಸ್ಥಿರಾಸ್ತಿ, ವೈಯಕ್ತಿಕ ವಾಹನಗಳಿಲ್ಲ..!

ವಿಶ್ವಸಂಸ್ಥೆಯನ್ನು ಗರ್ಭಾವಸ್ಥೆಯಿಂದ ಹೊರತರಬೇಕು: ಪ್ರಪಂಚದ ಎಲ್ಲಾ ಸರ್ಕಾರಗಳು ಯುಎನ್‌ಗೆ ಬೆಂಬಲವಾಗಿ ಸೇರಬೇಕು ಮತ್ತು ಪ್ರಸ್ತಾವನೆಗಳು ಮತ್ತು ಉಪಕ್ರಮಗಳನ್ನು ಪ್ರಸ್ತುತಪಡಿಸುವ ಅಧಿಕಾರಶಾಹಿ ಕಾರ್ಯವಿಧಾನವಲ್ಲ, "ವರದಿಯನ್ನು ಅನುಸರಿಸಲು ವಾಡಿಕೆಯ ವಿಷಯವಾಗಿ ಚರ್ಚೆ ಮಾಡುತ್ತಾರೆ. ಅವುಗಳನ್ನು ವಿಶ್ಲೇಷಣೆಯನ್ನೂ ಮಾಡುತ್ತವೆ. ಆದರೆ,  ಈಗಾಗಲೇ ವೀಟೋ ಇರುತ್ತದೆ ಮತ್ತು ಏನೂ ಆಗುವುದಿಲ್ಲ ಎನ್ನುವುದು ನಮಗೆ ಮೊದಲೇ ಗೊತ್ತಾಗುತ್ತದೆ. ಮತ್ತೆ ಮುಂದಿನ ಅಧಿವೇಶನಕ್ಕೆ ಕರೆಯಲಾಗುತ್ತದೆ ಮತ್ತು ಅದೇ ವಿಷಯ ಚರ್ಚೆ ಮಾಡಲಾಗುತ್ತದೆ. ನಾವು ಈ ಗರ್ಭಾವಸ್ಥೆಯಿಂದ ವಿಶ್ವಸಂಸ್ಥೆಯನ್ನು ಹೊರತರಬೇಕು" ಎಂದು ಅವರು ಹೇಳಿದ್ದಾರೆ.

Follow Us:
Download App:
  • android
  • ios