Asianet Suvarna News Asianet Suvarna News

ಸೆರೆಗೆ ಮುನ್ನ ದಾಖ​ಲೆ​ಗಳ​ನ್ನು ಸಮು​ದ್ರಕ್ಕೆ ಎಸೆದಿದ್ದ ಚೋಕ್ಸಿ!

* ಪಿಎ​ನ್‌ಬಿ ಬ್ಯಾಂಕ್‌ ಸಾಲ ವಂಚನೆ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಭಾರ​ತಕ್ಕೆ ಬೇಕಾ​ಗಿ​ರುವ ದೇಶ ಭ್ರಷ್ಟ ಉದ್ಯಮಿ

* ಸೆರೆಗೆ ಮುನ್ನ ದಾಖ​ಲೆ​ಗಳ​ನ್ನು ಸಮು​ದ್ರಕ್ಕೆ ಎಸೆದಿದ್ದ ಚೋಕ್ಸಿ

* ತನ್ನ ಮೇಲೆ ಹಲ್ಲೆ ನಡೆಸಿ ಡೊಮಿ​ನಿ​ಕಾಗೆ ತರ​ಲಾ​ಗಿ​ದೆ

Mehul Choksi Was Disposing Documents Into Caribbean Sea Before Arrest Report pod
Author
Bangalore, First Published Jun 8, 2021, 7:54 AM IST

ರೊಸೆ​ಯು (ಜೂ.08): ಪಿಎ​ನ್‌ಬಿ ಬ್ಯಾಂಕ್‌ ಸಾಲ ವಂಚನೆ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಭಾರ​ತಕ್ಕೆ ಬೇಕಾ​ಗಿ​ರುವ ದೇಶ ಭ್ರಷ್ಟಉದ್ಯಮಿ ಮೇಹುಲ್‌ ಚೋಕ್ಸಿ, ಡೊಮಿ​ನಿಕಾ ಪೊಲೀ​ಸ​ರಿಗೆ ಸಿಕ್ಕಿ ಬೀಳು​ವು​ದಕ್ಕೂ ಮುನ್ನ ಕೆಲ​ವೊಂದು ಸಾಕ್ಷ್ಯಾ​ಧಾ​ರ​ಗ​ಳನ್ನು ಸಮುದ್ರಕ್ಕೆ ಎಸೆದು ನಾಶ​ಪ​ಡಿ​ಸಿದ್ದ ಎಂಬ ಸಂಗತಿ ಬೆಳ​ಕಿಗೆ ಬಂದಿ​ದೆ.

ಚೋಕ್ಸಿ ತನ್ನ ಬಳಿ ಇದ್ದ ಕೆಲ​ವೊಂದು ದಾಖ​ಲೆ​ಗ​ಳನ್ನು ಸಮು​ದ್ರಕ್ಕೆ ಎಸೆ​ಯು​ತ್ತಿದ್ದ ವೇಳೆ ಅನು​ಮಾ​ನ​ಗೊಂಡ ಪೊಲೀ​ಸರು ಬೆನ್ನತ್ತಿ ಬಂದಿ​ದ್ದ​ರು. ಈ ವೇಳೆ ಮೇಹು​ಲ್‌ ಚೋಕ್ಸಿ ಓಡಲು ಆರಂಭಿ​ಸಿದ್ದ. ಆದರೆ, ಓಡಲು ಸಾಧ್ಯ​ವಾ​ಗದೇ ಎರಡು ಬಾರಿ ಎಡವಿ ಬಿದ್ದಿದ್ದು, ಪೊಲೀ​ಸರ ಕೈಗೆ ಸಿಕ್ಕಿ​ಬಿ​ದ್ದಾನೆ ಎಂದು ಪ್ರತ್ಯಕ್ಷದರ್ಶಿ​ಯೊ​ಬ್ಬರು ತಿಳಿ​ಸಿ​ದ್ದಾ​ರೆ.

ನನ್ನ ಮೇಲೆ ಹಲ್ಲೆ:

ನಾನು ಆ್ಯಂಟಿ​ಗು​ವಾ​ದಿಂದ ಪರಾರಿ ಆಗಿ​ದ್ದಲ್ಲ. 8-10 ಮಂದಿ ತನ್ನ ಮೇಲೆ ದಾಳಿ ನಡೆಸಿ ಬಲ​ವಂತ​ವಾಗಿ ಡೊಮಿ​ನಿ​ಕಾಗೆ ಕರೆ​ತಂದಿ​ದ್ದಾರೆ ಎಂದು ಚೋಕ್ಸಿ ಆರೋ​ಪಿ​ಸಿ​ದ್ದಾನೆ. ಈ ಪ್ರಕ​ರ​ಣ​ದಲ್ಲಿ ರಹಸ್ಯ ಮಹಿಳೆ ಎಂದೇ ಗುರು​ತಿ​ಸಿ​ಕೊಂಡಿ​ರುವ ಬರ್ಬರಾ ಜಬಾ​ರಿ​ಕಾ ಪಾತ್ರದ ಬಗ್ಗೆಯೂ ಚೋಕ್ಸಿ ಬಾಯಿಬಿಟ್ಟಿ​ದ್ದಾ​ನೆ.

ಬರ್ಬರಾ ತನ್ನ ಸ್ನೇಹಿತೆ ಆಗಿದ್ದು, ಎರಡು ವರ್ಷ​ದಿಂದ ಆಕೆಯ ಜೊತೆ ಸಂಪ​ರ್ಕ​ದಲ್ಲಿದ್ದೇನೆ. ಮನೆಗೆ ಬಂದು ತನ್ನನ್ನು ಕರೆ​ದೊ​ಯ್ಯ​ವಂತೆ ಆಕೆ ಕೇಳಿ​ಕೊಂಡಿ​ದ್ದಳು. ಆಕೆಯ ಮನೆಗೆ ಹೋದ ವೇಳೆ 8ರಿಂದ 10 ಮಂದಿ ತನ್ನ ಮೇಲೆ ಹಲ್ಲೆ ನಡೆಸಿ ಫೋನ್‌ ಹಾಗೂ ಪರ್ಸ್‌ ಅನ್ನು ಕಿತ್ತು​ಕೊಂಡು ಡೊಮಿ​ನಿ​ಕಾಗೆ ಬಲ​ವಂತ​ವಾಗಿ ಕರೆ​ತಂದಿ​ದ್ದಾರೆ. ಈ ವೇಳೆ ಬರ್ಬರಾ ತನ್ನ ಸಹಾ​ಯಕ್ಕೆ ಬರ​ಲಿಲ್ಲ ಎಂದು ಚೋಕ್ಸಿ ವಿಚಾ​ರ​ಣೆ ವೇಳೆ ಬಾಯಿ​ಬಿ​ಟ್ಟಿ​ದ್ದಾನೆ.

Follow Us:
Download App:
  • android
  • ios