ಮೆಕ್ಕಾ, ಮದೀನಾ, ಜೆದ್ದಾದಲ್ಲಿ ಭಾರೀ ಪ್ರವಾಹ, ನೀರಿನಲ್ಲಿ ಕೊಚ್ಚಿ ಹೋದ ಕಾರ್‌ಗಳು!

ಮಕ್ಕಾ, ಮದೀನಾ ಮತ್ತು ಜಿದ್ದಾಗಳಲ್ಲಿ ಭಾರೀ ಮಳೆಯಿಂದಾಗಿ ವ್ಯಾಪಕ ಹಾನಿಯಾಗಿದೆ.

Mecca Medina Jeddah Hit by Heavy Rains and Floods san

ಜೆದ್ದಾ (ಜ.7): ಸೌದಿ ಅರೇಬಿಯಾದ ಮಕ್ಕಾದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿದ್ದಾ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತಗೊಂಡಿವೆ ಎಂದು ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ. ಹಲವಾರು ವಾಹನಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಮದೀನಾದಲ್ಲೂ ಇದೇ ರೀತಿಯ ಭಾರೀ ಮಳೆಯಾಗಿದೆ. ಪ್ರವಾಹದಲ್ಲಿ ಕಾರುಗಳಿಂದ ಹಿಡಿದು ಬಸ್‌ಗಳವರೆಗೆ ಸಿಲುಕಿಕೊಂಡಿವೆ. ವಿಪತ್ತು ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಮಕ್ಕಾದ ಆಗ್ನೇಯದಲ್ಲಿರುವ ಅಲ್-ಅವಾಲಿ ಪ್ರದೇಶದಲ್ಲಿ ಹಲವಾರು ಮಕ್ಕಳು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮಾನವ ಸರಪಳಿ ನಿರ್ಮಿಸಿ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಈ ಮಧ್ಯೆ, ಮಕ್ಕಾದಲ್ಲಿ ಒಬ್ಬ ಡೆಲಿವರಿ ಹುಡುಗ ತನ್ನ ಬೈಕ್‌ನಿಂದ ನೀರಿಗೆ ಬೀಳುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ದೊಡ್ಡ ದೊಡ್ಡ ಮರಗಳು ಮತ್ತು ಇತರ ವಸ್ತುಗಳು ನೀರಿನಲ್ಲಿ ತೇಲಿ ಹೋಗುವುದನ್ನೂ ಕಾಣಬಹುದು. ಮಕ್ಕಾ, ಮದೀನಾ ಮತ್ತು ಬಂದರು ನಗರವಾದ ಜಿದ್ದಾದಲ್ಲಿ ಸೌದಿ ಅರೇಬಿಯಾದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

2024ರ ಏಪ್ರಿಲ್‌ನಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಸುರಿದ ದಾಖಲೆಯ ಮಳೆಯ ಕೆಲವು ತಿಂಗಳ ನಂತರ ಜಿದ್ದಾದಲ್ಲಿ ಈಗ ಭಾರೀ ಮಳೆಯಾಗಿದೆ. ರಿಯಾದ್, ಅಲ್-ಬಾಹ, ತಬೂಕ್‌ನಂತಹ ನಗರಗಳು ಸಹ ಭಾರೀ ಮಳೆಯ ಪರಿಣಾಮಗಳನ್ನು ಎದುರಿಸುತ್ತಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸೌದಿ ಅರೇಬಿಯಾದ ರಾಷ್ಟ್ರೀಯ ಹವಾಮಾನ ಕೇಂದ್ರ (ಎನ್‌ಎಂಸಿ) ಈ ವಾರದಾದ್ಯಂತ ಮಧ್ಯಮದಿಂದ ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.

ಚಿನ್ನ ಮಾತ್ರವಲ್ಲ, ಇನ್ನುಮುಂದೆ ಬೆಳ್ಳಿಗೂ ಹಾಲ್‌ಮಾರ್ಕ್‌!

ಹಲವು ಪ್ರದೇಶಗಳಲ್ಲಿ ಎನ್‌ಎಂಸಿ ರೆಡ್ ಅಲರ್ಟ್ ಘೋಷಿಸಿದ್ದು, ಎಲ್ಲಾ ಸಾರ್ವಜನಿಕ ಸ್ಥಳಗಳನ್ನು ಮುಚ್ಚಲಾಗಿದೆ. ಅದೇ ಸಮಯದಲ್ಲಿ, ಸೌದಿಯ ಪೂರ್ವ ಪ್ರಾಂತ್ಯ ಮತ್ತು ರಿಯಾದ್‌ನಲ್ಲಿ ಶಾಲೆಗಳನ್ನು ಆನ್‌ಲೈನ್‌ಗೆ ಬದಲಾಯಿಸಲಾಗಿದೆ. ಏಪ್ರಿಲ್‌ನಲ್ಲಿ ಸುರಿದ ಭಾರೀ ಮಳೆಯಲ್ಲಿ ಒಮಾನ್‌ನಲ್ಲಿ 21 ಜನರು ಮತ್ತು ಯುಎಇಯಲ್ಲಿ ನಾಲ್ವರು ಸಾವನ್ನಪ್ಪಿದ್ದರು. 75 ವರ್ಷಗಳಲ್ಲಿ ಅತಿ ಹೆಚ್ಚು ಮಳೆಯನ್ನು 2024 ರಲ್ಲಿ ಗಲ್ಫ್ ಪ್ರದೇಶಗಳು ಎದುರಿಸಿದ್ದವು.

Bengaluru: ರಾಜಧಾನಿಯಲ್ಲಿ ಅತಿಯಾದ ಶೀತಗಾಳಿ, ಮುಂದಿನ 2 ದಿನ ಎಚ್ಚರಿಕೆಯಿಂದಿರಿ ಎಂದ ಐಎಂಡಿ

 

Latest Videos
Follow Us:
Download App:
  • android
  • ios