Asianet Suvarna News Asianet Suvarna News

ಡೆಹ್ರಾ​ಡೂನ್‌, ನೈನಿ​ತಾಲೂ ನಮ್ಮದು: ನೇಪಾಳ ಹೊಸ ಕ್ಯಾತೆ!

ಡೆಹ್ರಾ​ಡೂನ್‌, ನೈನಿ​ತಾಲೂ ನಮ್ಮದು: ನೇಪಾಳ ಹೊಸ ಕ್ಯಾತೆ|  ಈ ಭಾಗ​ಗಳು ನಮ್ಮ​ವೆಂದು ಬ್ರಿಟಿ​ಷರ ಜತೆ ಒಪ್ಪಂದ ಆಗಿ​ತ್ತು|  ಗ್ರೇಟರ್‌ ನೇಪಾ​ಳ ಸ್ಥಾಪ​ನೆ​ಗಾಗಿ ಆಡ​ಳಿತ ಪಕ್ಷ​ದಿಂದ ಆಂದೋ​ಲ​ನ| ಚೀನಾ ಅಣ​ತಿ​ಯಂತೆ ನೇಪಾ​ಳದ ಈ ಕಿತಾ​ಪ​ತಿ?

Map In Nepal School Books Show Indian Territories As Their Own pod
Author
Bangalore, First Published Sep 19, 2020, 7:36 AM IST

ನವ​ದೆ​ಹ​ಲಿ(ಸೆ.19): ಭಾರ​ತದ ಪರ​ಮ​ವೈರಿ ಚೀನಾ ತಾಳಕ್ಕೆ ತಕ್ಕಂತೆ ಕುಣಿ​ಯು​ತ್ತಿ​ರುವ ನೇಪಾಳ, ಈಗ ಭಾರ​ತ​ವನ್ನು ಕೆರ​ಳಿ​ಸುವ ಮತ್ತೊಂದು ಹೆಜ್ಜೆ ಇರಿ​ಸಿ​ದೆ. ತನ್ನ ದೇಶ​ವನ್ನು ‘ಗ್ರೇ​ಟರ್‌ ನೇಪಾಳ’ ಎಂದು ಕರೆ​ಯ​ಬೇಕು. ಈ ಗ್ರೇಟರ್‌ ನೇಪಾ​ಳ​ದಲ್ಲಿ ಭಾರ​ತ​ದ​ಲ್ಲಿ​ರುವ ಡೆಹ್ರಾ​ಡೂನ್‌ ಹಾಗೂ ನೈನಿ​ತಾಲ್‌ ಕೂಡ ತನ್ನವು ಎಂಬ ಹೊಸ ಆಂದೋ​ಲನ ಆರಂಭಿ​ಸಿ​ದೆ.

ಚೀನಾಕ್ಕೆ ಠಕ್ಕರ್ ನೀಡಲು ಸರ್ವ ಸಿದ್ಧತೆ, ನೇಪಾಳ-ಭೂತಾನ್ ಗಡಿ ಮೇಲೂ ಹದ್ದಿನ ಕಣ್ಣು

ನೇಪಾ​ಳದ ಆಡ​ಳಿ​ತಾ​ರೂಢ ಕಮ್ಯು​ನಿಸ್ಟ್‌ ಪಕ್ಷವು ಸಂಯುಕ್ತ ನೇಪಾಳ ರಾಷ್ಟ್ರೀಯ ರಂಗ​ದೊಂದಿಗೆ ಸೇರಿ​ಕೊಂಡು ಈ ವಿವಾ​ದಾ​ತ್ಮಕ ಆಂದೋ​ಲನ ಆರಂಭಿ​ಸಿ​ದೆ. ಇದ​ಲ್ಲದೆ, ಕಮ್ಯು​ನಿಸ್ಟ್‌ ಪಕ್ಷವ ಉತ್ತ​ರಾ​ಖಂಡ, ಹಿಮಾ​ಚಲ ಪ್ರದೇಶ, ಉತ್ತರ ಪ್ರದೇಶ, ಬಿಹಾರ ಹಾಗೂ ಸಿಕ್ಕಿಂನ ಕೆಲವು ಭಾಗ​ಗಳೂ ತನ್ನದು ಎಂದು ಹೇಳಿ​ಕೊ​ಳ್ಳು​ತ್ತಿ​ದೆ.

ಇತ್ತೀ​ಚೆಗೆ ಭಾರ​ತದ ವಿರುದ್ಧ ಕತ್ತಿ ಮಸೆ​ಯು​ತ್ತಿ​ರುವ ಚೀನಾ ಜತೆ ಕೈಜೋ​ಡಿ​ಸಿ​ರುವ ನೇಪಾಳ, ಸಿಕ್ಕಿಂ, ಕುಮಾ​ವುನ್‌, ಗಢ​ವಾಲ್‌ ಹಾಗೂ ಕಾಂಗ್ರಾ ಪ್ರದೇ​ಶ​ಗ​ಳಲ್ಲಿ ತನ್ನ ವ್ಯಾಪ್ತಿ​ಯನ್ನು ವಿಸ್ತ​ರಿ​ಸುವ ಹುನ್ನಾರ ನಡೆ​ಸಿದೆ ಎಂದು ಮಾಧ್ಯಮ ವರ​ದಿ​ಯೊಂದು ಹೇಳಿ​ದೆ.

7 ಜಿಲ್ಲೆಗಳನ್ನು ಕಬಳಿಸಿದ ಚೀನಾ: ನೇಪಾಳ ಪ್ರಧಾನಿ ಮೌನ!

ಗ್ರೇಟರ್‌ ನೇಪಾಳ ಸ್ಥಾಪ​ನೆಯ ವಿಚಾರವು ಚೀನಾದ ಪರಮಸ್ನೇಹಿ​ತ ಕೆ.ಪಿ. ಶರ್ಮಾ ಓಲಿ ಅವರು ಪ್ರಧಾ​ನಿ​ಯಾದ ನಂತರ ಮರು​ಜೀವ ಪಡೆ​ದಿದೆ. 2019ರಲ್ಲಿ ವಿಶ್ವಂಸ್ಥೆ​ಯಲ್ಲಿ ಕೂಡ ನೇಪಾಳ ಈ ವಿಷ​ಯ​ವನ್ನು ಪ್ರಸ್ತಾ​ಪಿ​ಸಿ​ತ್ತು.

ನೇಪಾಳ ಇದಕ್ಕೆ ನೀಡುವ ಕಾರ​ಣ​ವೇ​ನು?​:

1816ರಲ್ಲಿ ಬ್ರಿಟಿ​ಷರು ಆಳ್ವಿಕೆ ನಡೆ​ಸು​ತ್ತಿ​ರುವ ವೇಳೆ ಗೂರ್ಖಾ ರಾಜನು ಬ್ರಿಟಿ​ಷರ ವಿರುದ್ಧ ಸೋತಿದ್ದ. ಆಗ ನೇಪಾ​ಳವು ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿ ಜತೆ ಒಪ್ಪಂದ ಮಾಡಿ​ಕೊಂಡಿತ್ತು. ಈ ಒಪ್ಪಂದದ ಪ್ರಕಾರ ಭಾರ​ತದ ನೈನಿ​ತಾಲ್‌, ಡೆಹ್ರಾ​ಡೂನ್‌ ಹಾಗೂ ಇತರ ಕೆಲವು ಭಾಗ​ಗಳು ನೇಪಾ​ಳಕ್ಕೆ ಸೇರಿ​ದ್ದವು ಎಂಬುದು ನೇಪಾ​ಳದ ವಾದ.

ಇತ್ತೀ​ಚೆಗೆ ಭಾರ​ತದ ಲಿಪು​ಲೇಖ್‌ ಪಾಸ್‌ ಸೇರಿ​ದಂತೆ ಕೆಲವು ಪ್ರದೇ​ಶ​ಗ​ಳನ್ನು ತನ್ನದು ಎಂದು ಹೇಳಿ ನೇಪಾಳ ನಕ್ಷೆ​ಯೊಂದನ್ನು ಬಿಡು​ಗಡೆ ಮಾಡಿ​ತ್ತು. ಅದು ಭಾರ​ತದ ಕೆಂಗ​ಣ್ಣಿಗೆ ಗುರಿ​ಯಾ​ಗಿ​ತ್ತು.

Follow Us:
Download App:
  • android
  • ios