Asianet Suvarna News Asianet Suvarna News

ಮೀನಿಗಾಗಿ ಹಾಕಿದ ಗಾಳಕ್ಕೆ ಬಿತ್ತು ಮೊಸಳೆ!: ಮುಂದೇನಾಯ್ತು ನೀವೇ ನೋಡಿ

ಮೀನು ಹಿಡಿಯಲು ಹಾಕಿದ ಗಾಳಕ್ಕೆ ಬಿತ್ತು ಮೊಸಳೆ| ಗಾಳ ಮೇಲಕ್ಕೆಳೆದಾಗ ಬೆಚ್ಚಿ ಬಿದ್ದ ವ್ಯಕ್ತಿ| ಮುಂದೇನಾಯ್ತು?

Man Catches Crocodile   while fishing Video goes virl
Author
Bangalore, First Published May 20, 2020, 1:02 PM IST
  • Facebook
  • Twitter
  • Whatsapp

ನವದೆಹಲಿ(ಮೇ 20): ಸೋಶಿಯಲ್ ಮಿಡಿಯಾದಲ್ಲಿ ಚಿತ್ರ ವಿಚಿತ್ರ ವಿಡಿಯೋಗಳು ಸೌಂಡ್ ಮಾಡುತ್ತವೆ. ಇವು ನೆಟ್ಟಿಗರನ್ನು ಆಕರ್ಷಿಸುತ್ತವೆ. ಅದರಲ್ಲೂ ವಿಶೇಷವಾಗಿ, ಪ್ರಾಣಿಗಳ ಫೋಟೋ, ವಿಡಿಯೋಗಳು ಅತಿ ಹೆಚ್ಚು ವೈರಲ್ ಆಗುತ್ತವೆ. ಸದ್ಯ ಇಂತಹುದೇ ವಿಡಿಯೋ ಒಂದು ಭಾರೀ ಸದ್ದು ಮಾಡುತ್ತಿದೆ.. ಇದನ್ನು ನೋಡಿದವರೂ ಅಚ್ಚರಿಗೀಡಾಗಿದ್ದಾರೆ. ಯಾಕೆಂದರೆ ಇಲ್ಲಿ ಮೀನು ಹಿಡಿಯಲು ಹಾಕಿದ ಗಾಳಕ್ಕೆ ಮೊಸಳೆ ಬಿದ್ದಿದೆ.

ವೈರಲಲ್ ಆದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನದಿಯಲ್ಲಿ ಮೀನು ಹಿಡಿಯುವ ಸಲುವಾಗಿ ಮುಳ್ಳೊಂದನ್ನು ಹಾಕುತ್ತಾನೆ. ಇದಾದ ಕೆಲವೇ ಕ್ಷಣದಲ್ಲಿ ಆತ ಬಹಳ ಉತ್ಸಾಹದಿಂದ ತಾನು ಹಾಕಿದ ಗಾಳ ಹಿಂದಕ್ಕೆಳೆಯುತ್ತಾನೋ, ಮೊಸಳೆಯೊಂದು ಅಚಾನಕ್ಕಾಗಿ ಹೊರ ಬರುತ್ತದೆ. ಇದನ್ನು ನೋಡಿದ ವ್ಯಕ್ತಿ ಗಾಬರಿಗೀಡಾಗಿ ಕೈಯ್ಯಲ್ಲಿದ್ದ ಗಾಳವನ್ನು ಎಸೆದು ದೂರ ಸರಿಯುತ್ತಾನೆ. ಈ ವಿಡಿಯೋವನ್ನು ಐಎಫ್‌ಎಸ್‌ ಅಧಿಕಾರಿ ಸುಶಾಂತ್ ನಂದಾ ಟ್ವೀಟ್ ಮಾಡಿದ್ದಾರೆ.

ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಗಾಳ ಹಾಕಿದ ವ್ಯಕ್ತಿಯ ಅದೃಷ್ಟ ಚೆನ್ನಾಗಿತ್ತು ಎಂದು ಅನೇಕ ಮಂದಿ ಕಮೆಂಟ್ ಮಾಡಿದ್ದಾರೆ.

Follow Us:
Download App:
  • android
  • ios