ಜೊಹಾನ್ಸ್‌ಬರ್ಗ್‌(ಜೂ.08): ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿ ಆರೋಪದಲ್ಲಿ ಮಹಾತ್ಮ ಗಾಂಧೀಜಿಯವರ 56 ವರ್ಷದ ಮರಿ ಮೊಮ್ಮಗಳಿಗೆ ದಕ್ಷಿಣಾ ಆಫ್ರಿಕಾದ ಡರ್ಬನ್ ನ್ಯಾಯಾಲಯ ಸೋಮವಾರ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇವರು ಆರು ದಶಲಕ್ಷ ಆಫ್ರಿಕನ್ ರಾಂಡ್ (ಅಂದಾಜು 3.22 ಕೋಟಿ) ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶಿಶ್ ಲತಾ ರಾಮ್‌ಗೋಬಿನ್ ಅಪರಾಧಿ ಎಂದು ದಕ್ಷಿಣ ಆಫ್ರಿಕಾದ ನ್ಯಾಯಾಲಯ ಸೋಮವಾರ ತೀರ್ಪು ಪ್ರಕಟಿಸಿದೆ.

ಹೋರಾಟಗಾರ್ತಿ ಎಲಾ ಗಾಂಧಿ ಮತ್ತು ದಿವಂಗತ ಮೇವಾ ರಾಮ್ ಬೋಬಿನ್ ಅವರ ಪುತ್ರಿ ಆಶಿಶ್ ಲತಾ ರಾಮ್ ಗೋಬಿನ್, ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ಕಸ್ಟಂ ಸುಂಕಕ್ಕಾಗಿ ದಕ್ಷಿಣ ಆಫ್ರಿಕಾದ ಉದ್ಯಮಿ ಎಸ್.ಆರ್.ಮಹಾರಾಜ್ ಬಳಿ 6.2 ದಶಲಕ್ಷ ರಾಂಡ್ ಹಣ ಪಡೆದಿದ್ದರು. ಇನ್ನು ತಾನು ಗಳಿಸಿದ ಆದಾಯದಲ್ಲಿ ಪಾಲು ನೀಡುವುದಾಗಿ ಹೇಳಿದ್ದ ಲತಾ, ಬಳಿಕ ಉದ್ಯಮಿಗೆ ವಂಚಿಸಿದ್ದರೆಂದು ಉದ್ಯಮಿ ದೂರಿನಲ್ಲಿ ತಿಳಿಸಿದ್ದರು. 

ಮಹಾತ್ಮಾ ಗಾಂಧಿ ಪ್ರತಿಮೆ ಧ್ವಂಸ; ಕಿಡಿಗೇಡಿಗಳ ಕೃತ್ಯ ಖಂಡಿಸಿದ ಭಾರತ!

ಈ ಪ್ರಕರಣದಲ್ಲಿ ಲತಾ ದೋಷಿ ಎಂದು ತೀರ್ಪು ನೀಡಿ ಶಿಕ್ಷೆ ಪ್ರಕಟಿಸಿರುವ  ಡರ್ಬನ್ ವಾಣಿಜ್ಯ ವ್ಯಾಜ್ಯಗಳ ವಿಶೇಷ ನ್ಯಾಯಾಲಯ ಬಗ್ಗೆ ಮೇಲ್ಮನವಿ ಸಲ್ಲಿಸುವ ಅವಕಾಶವನ್ನೂ ನಿರಾಕರಿಸಿದೆ.

ಲತಾ ರಾಮ್ ಗೋಬಿನ್ ಅವರು 2015ರ ಆಗಸ್ಟ್‌ನಲ್ಲಿ ನ್ಯೂ ಆಫ್ರಿಕಾ ಅಲಯನ್ಸ್ ಕಂಪನಿ ನಿರ್ದೇಶಕ ಎಸ್‌.ಆರ್‌. ಮಹಾರಾಜ್ ಅವರನ್ನು ಭೇಟಿ ಮಾಡಿದ್ದರು. ಈ ಕಂಪನಿಯು ಲೆನಿನ್ ಬಟ್ಟೆ ಮತ್ತು ಪಾದರಕ್ಷೆಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡುತ್ತದೆ. ದಕ್ಷಿಣ ಆಫ್ರಿಕಾದ ನೆಟ್‌ಕೇರ್ ಆಸ್ಪತ್ರೆ ಸಮೂಹಗಳಿಗೆ ವಿತರಿಸಲು ಭಾರತದಿಂದ ಮೂರು ಕಂಟೇನರ್ ಲೆನಿನ್ ಬಟ್ಟೆಗಳನ್ನು ಆಮದು ಮಾಡಿಕೊಳ್ಳುತ್ತಿರುವುದಾಗಿ ಲತಾ ರಾಮ್ ಗೋಬಿನ್ ಮಹಾರಾಜ್ ಅವರಿಗೆ ತಿಳಿಸಿದ್ದರು. ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ಕಸ್ಟಂ ಸುಂಕಕ್ಕಾಗಿ 6.2 ದಶಲಕ್ಷ ರಾಂಡ್ ಪಡೆದಿದ್ದು, ಆದಾಯದಲ್ಲಿ ಪಾಲು ನೀಡುವುದಾಗಿ ಹೇಳಿ ವಂಚಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.

'ಗಾಂಧೀಜಿಯನ್ನು ಹತ್ಯೆಗೈದ ಕೊಲೆಗಡುಕನನ್ನೇ ಆರಾಧಿಸುವ ಮಂದಿ ಹೆಚ್ಚಾಗಿದ್ದಾರೆ'

2015ರಿಂದಲೂ ಲತಾ ರಾಮ್ ಗೋಬಿನ್ ವಿರುದ್ಧ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿತ್ತು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಭಾರತದಿಂದ ಮೂರು ಕಂಟೇನರ್ ಲೆನಿನ್ ಬಟ್ಟೆಗಳು ಹಡಗಿನ ಮೂಲಕ ಬರಲಿದೆ ಎಂದು ಉದ್ಯಮಿಯನ್ನು ನಂಬಿಸಿದ್ದರು ಎಂದು ಕೋರ್ಟ್ ನಲ್ಲಿ ಆರೋಪಿಸಲಾಗಿತ್ತು. ಹೀಗಿರುವಾಗ ಕೋರ್ಟ್ 50 ಸಾವಿರ ರಾಂಡ್ ಆಧಾರದ ಮೇಲೆ ಲತಾಗೆ ಜಾಮೀನು ನೀಡಿತ್ತು ಎಂದು ವರದಿ ಹೇಳಿದೆ.