ಮೆಕ್ಸಿಕೋದ ಕಾಡಿನಲ್ಲಿ ಕಳೆದು ಹೋಗಿದ್ದ 6764 ಕಟ್ಟಡವಿದ್ದ ಮಾಯನ್ ನಗರ ಪತ್ತೆ!

6764 ಕಟ್ಟಡಗಳು ವಲೇರಿಯಾನದಲ್ಲಿ ಸಿಕ್ಕಿವೆ. ಇದು ವಲೇರಿಯಾನ ಜನನಿಬಿಡ ಪ್ರದೇಶವಾಗಿತ್ತು ಎಂದು ಸೂಚಿಸುತ್ತದೆ. ಸಕ್ರಿಯ ಸಮುದಾಯ ಇಲ್ಲಿ ವಾಸವಾಗಿದ್ದಿರಬಹುದು.

Lost Mayan City Discovered in Mexican Jungle  gow

ಮೆಕ್ಸಿಕೋದ ದಕ್ಷಿಣ ಕ್ಯಾಂಪಿಚೆಯ ಕಾಡಿನಲ್ಲಿ ಪುರಾತತ್ವಶಾಸ್ತ್ರಜ್ಞರು ಇತ್ತೀಚೆಗೆ ಒಂದು ಅದ್ಭುತವನ್ನು ಕಂಡುಹಿಡಿದಿದ್ದಾರೆ. ಅದೇನೆಂದರೆ, ಒಂದು ವಿಶಾಲವಾದ ಮಾಯನ್ ನಗರ. ಲೋಕದ ಕಣ್ಣಿಗೆ ಬೀಳದೆ ಕಾಡಿನಲ್ಲಿ ಅಡಗಿ ಕುಳಿತಿದ್ದ ಈ ಮಾಯನ್ ನಗರ ಆಕಸ್ಮಿಕವಾಗಿ ಪತ್ತೆಯಾಗಿದೆ ಎಂದು ವರದಿಗಳು ಹೇಳುತ್ತವೆ.

'ವಲೇರಿಯಾನ' ಎಂದು ನಗರಕ್ಕೆ ಹೆಸರಿಡಲಾಗಿದೆ. ದೇವಾಲಯಗಳು, ಪಿರಮಿಡ್‌ಗಳಿಂದ ತುಂಬಿರುವ ಈ ನಗರ ಸಂಶೋಧಕರಿಗೆ ಆಶ್ಚರ್ಯ ಮತ್ತು ಉತ್ಸಾಹ ತಂದಿದೆ.

ಲಿಡಾರ್ ಎಂಬ ತಂತ್ರಜ್ಞಾನ ಬಳಸಿ ಈ ನಗರ ಪತ್ತೆಯಾಗಿದೆ. ಸಾವಿರಾರು ವರ್ಷಗಳಿಂದ ಯಾರಿಗೂ ತಿಳಿಯದೆ ಅಡಗಿ ಕುಳಿತಿದ್ದ ನಗರ ಆಕಸ್ಮಿಕವಾಗಿ ಪತ್ತೆಯಾಗಿದೆ. ಇದುವರೆಗೆ ಪತ್ತೆಯಾದ ಎರಡನೇ ಅತಿ ದೊಡ್ಡ ಮಾಯನ್ ಸಾಂಸ್ಕೃತಿಕ ಕೇಂದ್ರ ಇದಾಗಿದೆ ಎಂದು ಸಂಶೋಧಕರು ಹೇಳುತ್ತಾರೆ. 'ಕಲಾಕ್ಮುಲ್ ನಗರ' ಪತ್ತೆಯಾದವುಗಳಲ್ಲಿ ಅತಿ ದೊಡ್ಡದಾಗಿತ್ತು.

ವಲೇರಿಯಾನದ ಪತ್ತೆಗೆ ಕೇವಲ ಐತಿಹಾಸಿಕ ಮಹತ್ವ ಮಾತ್ರವಲ್ಲ. ಮಾಯನ್ ನಾಗರಿಕತೆ ಮತ್ತು ಅದರ ನಗರ ವಿಸ್ತರಣೆಯ ಬಗ್ಗೆ ವಿವರವಾದ ಮಾಹಿತಿ ಪಡೆಯಲು ಇದು ಸಹಾಯ ಮಾಡುತ್ತದೆ ಎಂದು ಭಾವಿಸಲಾಗಿದೆ.

6764 ಕಟ್ಟಡಗಳು ವಲೇರಿಯಾನದಲ್ಲಿ ಸಿಕ್ಕಿವೆ. ಇದು ವಲೇರಿಯಾನ ಜನನಿಬಿಡ ಪ್ರದೇಶವಾಗಿತ್ತು ಎಂದು ಸೂಚಿಸುತ್ತದೆ. ಸಕ್ರಿಯ ಸಮುದಾಯ ಇಲ್ಲಿ ವಾಸವಾಗಿದ್ದಿರಬಹುದು. ದೊಡ್ಡ ದೇವಾಲಯಗಳು, ಪಿರಮಿಡ್‌ಗಳು, ಕ್ರೀಡಾ ಸೌಲಭ್ಯಗಳು ಎಲ್ಲವೂ ಇಲ್ಲಿ ಕಾಣಬಹುದು.

ಆರ್ಥಿಕವಾಗಿ, ಧಾರ್ಮಿಕವಾಗಿ, ಕ್ರೀಡಾಪರವಾಗಿ ಸಮೃದ್ಧವಾಗಿದ್ದ ಸ್ಥಳ ಇದಾಗಿತ್ತು ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಅಲ್ಲದೆ, ಇಲ್ಲಿನ ಜನರು ಕೃಷಿ ಮಾಡುತ್ತಿದ್ದರು ಮತ್ತು ಅದರಿಂದ ಜೀವನ ನಡೆಸುತ್ತಿದ್ದರು ಎಂದು ಊಹಿಸಲಾಗಿದೆ.

ಯುಕಾಟಾನ್ ಪರ್ಯಾಯ ದ್ವೀಪ, ಮೆಕ್ಸಿಕೊ, ಗ್ವಾಟೆಮಾಲ, ಎಲ್ ಸಾಲ್ವಡಾರ್, ಹೊಂಡುರಾಸ್ ಮುಂತಾದ ಪ್ರದೇಶಗಳಲ್ಲಿ ಅಮೇರಿಕನ್-ಇಂಡಿಯನ್ ಸಂಸ್ಕೃತಿಯಾದ ಮಾಯನ್ ಸಂಸ್ಕೃತಿ ಅಸ್ತಿತ್ವದಲ್ಲಿತ್ತು. ಇದು ಸರಿಸುಮಾರು 250 ರಿಂದ 900 AD ವರೆಗೆ ಅಭಿವೃದ್ಧಿ ಹೊಂದಿತ್ತು ಎಂದು ನಂಬಲಾಗಿದೆ.

(ಚಿತ್ರದಲ್ಲಿರುವುದು 'ಕಲಾಕ್ಮುಲ್ ಮಾಯನ್ ನಗರ')

Latest Videos
Follow Us:
Download App:
  • android
  • ios