ಮೃಗಾಲಯದಲ್ಲಿ ಹುಚ್ಚಾಟವಾಡಿದ ಯುವಕರಿಗೆ ನಿಯಮ ಪಾಲಿಸಲು ಸೂಚಿಸಿದ ಸಿಂಹ, ದೃಶ್ಯ ಸೆರೆ!
ಮೃಗಾಲಯಕ್ಕೆ ತೆರಳಿದ ಯುವಕರ ಗುಂಪು ಸಿಂಹಕ್ಕೆ ಆಹಾರ ನೀಡುವುದು, ಫೋಟೋ ತೆಗೆಯುವ ಪ್ರಯತ್ನ ಮಾಡಿದ್ದಾರೆ. ಗೂಡಿನೊಳಗೆ ಕೈಯಿಟ್ಟು ಮೊಬೈಲ್ ಮೂಲಕ ಫೋಟೋ ಕ್ಲಿಕ್ಕಿಸುತ್ತಿದ್ದ ಯುವಕರಿಗೆ ಸಿಂಹ ನಿಯಮ ಪಾಲಿಸಲು ಸೂಚಿಸಿದ ದೃಶ್ಯ ಸೆರೆಯಾಗಿದೆ.
ಮೃಗಾಯಲದಲ್ಲಿ ಪ್ರಾಣಿ ಪಕ್ಷಿಗಳ ವೀಕ್ಷಿಸಲು ತೆರಳುವ ಹಲವರು ಅತೀರೇಖದಿಂದ ವರ್ತಿಸುವುದು, ನಿಯಮ ಉಲ್ಲಂಘಿಸುವ ಘಟನೆಗಳು ಹೆಚ್ಚಾಗುತ್ತಿದೆ. ಪ್ರಾಣಿಗಳ ಮುಂದೆ ಸೆಲ್ಫಿ, ವಿಡಿಯೋ ಸೇರಿದಂತೆ ಹಲವು ಹುಚ್ಚಾಟಗಳನ್ನು ಆಡಿ ಸಂಕಷ್ಟಕ್ಕೆ ಸಿಲುಕಿದ ಘಟನೆಗಳು ಇವೆ. ಇದೀಗ ಮೃಗಾಲಯಕ್ಕೆ ತೆರಳಿದ ಇಬ್ಬರು ಯುವಕರು ಸಿಂಹದ ಗೂಡಿನ ಬಳಿ ಹರಸಾಹಸ ಮಾಡಿದ್ದಾರೆ. ಒಬ್ಬ ಸಿಂಹಕ್ಕೆ ಆಹಾರ ನೀಡಿದರೆ, ಮತ್ತೊಬ್ಬ ಗೂಡಿನೊಳಗೆ ಕೈಯಿಟ್ಟು ಮೊಬೈಲ್ ಮೂಲಕ ವಿಡಿಯೋ ಮಾಡಿದ್ದಾನೆ. ಕೆಲ ಹೊತ್ತು ನೋಡಿದ ಸಿಂಹ ಯಾವುದೇ ಆವೇಶ ಆಕ್ರೋಶ, ಘರ್ಜನೆ ಇಲ್ಲದೆ ಯುವಕನಿಗೆ ನಿಯಮ ಪಾಲಿಸಲು ಸೂಚಿಸಿ ಮುಂದೆ ನಡೆದ ದೃಶ್ಯ ಸೆರೆಯಾಗಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಹುಲಿ, ಸಿಂಹಗಳ ಮೃಗಾಲಯ ವೀಕ್ಷಿಸಲು ಆಗಮಿಸಿದ ಯುವಕರು ಹುಚ್ಚಾಟ ಆರಂಭಿಸಿದ್ದಾರೆ. ಮೃಗಾಲಯದಲ್ಲಿ ವೀಕ್ಷಕರು ಪ್ರಾಣಿಗಳಿಗೆ ಆಹಾರ ನೀಡುವುದು ನಿಷಿದ್ಧವಾಗಿದೆ. ಜೊತೆಗೆ ನಿರ್ಬಂಧಿತ ಗೆರೆ ದಾಟುವಂತಿಲ್ಲ. ಗೂಡಿನ ಬಳಿ ಹೋಗುವಂತಿಲ್ಲ. ಆದರೆ ಈ ಯುವಕರು ಇದೆಲ್ಲವನ್ನೂ ಮೀರಿ ಸಿಂಹದ ಗೂಡಿನ ಬಳಿ ತೆರಳಿದ್ದಾರೆ.
ಝೂ ಸಿಬ್ಬಂದಿ ಮೇಲೆ ದಾಳಿ ನಡೆಸಿ ನೀರಿಗೆ ಎಳೆದೊಯ್ದ ಮೊಸಳೆ, ನೆರವಿಗೆ ಧಾವಿಸಿದ ಪ್ರವಾಸಿಗ!
ಒಬ್ಬ ಯುವಕ ಸಿಂಹದ ಗೂಡಿನ ಕೆಳಭಾಗದಲ್ಲಿರುವ ಗ್ಯಾಪ್ ಮೂಲಕ ಆಹಾರ ನೀಡಿದ್ದಾನೆ. ಸಿಂಹ ಈ ಆಹಾರವನ್ನು ಸೇವಿಸಿದೆ. ಇದನ್ನು ಮತ್ತೊಬ್ಬ ಯುವಕ ಮೊಬೈಲ್ ಮೂಲಕ ಸೆರೆ ಹಿಡಿದ್ದಾನೆ. ಈತ ಕೂಡ ಗೂಡಿನೊಳಗೆ ಕೈ ತೂರಿಸಿ ಮೊಬೈಲ್ ಮೂಲಕ ವಿಡಿಯೋ ಸೆರೆ ಹಿಡಿದ್ದಾನೆ. ಯುವಕನ ಕೈಯಿಂದ ಒಂದೆರಡು ಬಾರಿ ಆಹಾರ ಸೇವಿಸಿದ ಸಿಂಹ, ಬಳಿಕ ಮೊಬೈಲ್ ಮೂಲಕ ವಿಡಿಯೋ ಸೆರೆ ಹಿಡಿಯುತ್ತಿದ್ದ ಯುವಕನ ಬಳಿ ಬಂದಿದೆ.
ಈತನ ಬಹುತೇಕ ಕೈ ಸಿಂಹದ ಗೂಡಿನೊಳಗಿದೆ. ಆದರೆ ಸಿಂಹ ಘರ್ಜಿಸಲಿಲ್ಲ, ಭಯಗೊಳ್ಳಲಿಲ್ಲ. ನಿಧಾನವಾಗಿ ಯುವಕನ ಕೈಯನ್ನು ಗೂಡಿನಿಂದ ಹೊರಗೆ ತಳ್ಳುವ ಪ್ರಯತ್ನ ಮಾಡಿದೆ. ಯುವಕನ ಕೈಯನ್ನು ಹೊರಗೆ ತಳ್ಳಿದ ಸಿಂಹ ಮುಂದೆ ಸಾಗಿದೆ. ಈ ವಿಡಿಯೋವನ್ನು ಇತರ ವೀಕ್ಷಕರು ಸೆರೆ ಹಿಡಿದ್ದಾರೆ. ಈ ವಿಡಿಯೋ ಯಾವ ಮೃಗಾಲಯದಲ್ಲಿ ನಡೆದಿದೆ ಅನ್ನೋ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಸಿಂಹ ಸ್ಪಷ್ಟವಾಗಿ ಯುವಕರಿಗೆ ನಿಯಮ ಪಾಲಿಸಲು ಸೂಚಿಸುತ್ತಿದೆ. ಇಂತಹ ವೀಕ್ಷಕರಿಗೆ ತಕ್ಕ ಶಿಕ್ಷೆ ನೀಡಬೇಕು. ನಿಯಮ ಮೀರಿ ಪ್ರಾಣಿಗಳಿಗೆ ಸಂಚಕಾರ ತರುತ್ತಾರೆ. ಜೊತೆಗೆ ತಾವು ಸಂಕಷ್ಟಕ್ಕೆ ಸಿಲುಕುತ್ತಾರೆ. ಕೊನೆಗೆ ಪ್ರಾಣ ಉಳಿಸುವ ಸಲುವಾಗಿ ಪ್ರಾಣಿಗೆ ಗುಂಡಿಕ್ಕುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಕಠಿಣ ಶಿಕ್ಷೆ ವಿಧಿಸುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.
ಇವನು ಅವನಲ್ಲ, ಅವಳು...! 7 ವರ್ಷದ ಬಳಿಕ ಝೂ ಸಿಬ್ಬಂದಿಗೆ ಗೊತ್ತಾಯ್ತು ಸತ್ಯ..!