Asianet Suvarna News Asianet Suvarna News

ಗಾಳಿ ಮೂಲಕವೂ ಕೊರೋನಾ ಪ್ರಸರಣ!

ಗಾಳಿ ಮೂಲಕವೂ ಕೊರೋನಾ ಪ್ರಸರಣ| ಗಾಳಿಯ ಮೂಲಕ ಹರಡುವಿಕೆಗೆ ಬಲವಾದ ಸಾಕ್ಷ್ಯ ಲಭ್ಯ

Lancet report says Covid 19 is primarily airborne safety protocol should change urgently pod
Author
Bangalore, First Published Apr 17, 2021, 10:16 AM IST

ನವದೆಹಲಿ(ಏ.17): ಕೊರೋನಾ ಸಾಂಕ್ರಾಮಿಕಕ್ಕೆ ಕಾರಣವಾಗಿರುವ ಸಾರ್ಸ್‌- ಕೋವ್‌-2 ವೈರಸ್‌ ಪ್ರಧಾನವಾಗಿ ಗಾಳಿಯ ಮೂಲಕ ಪ್ರಸರಣಗೊಳ್ಳುತ್ತದೆ ಎನ್ನುವುದನ್ನು ಸಾಬೀತುಪಡಿಸಲು ಬಲವಾದ ಸಾಕ್ಷ್ಯಾಧಾರಗಳು ಲಭ್ಯವಾಗಿವೆ ಎಂದು ಲ್ಯಾನ್ಸೆಟ್‌ ಜರ್ನಲ್‌ನಲ್ಲಿ ಶುಕ್ರವಾರ ಪ್ರಕಟವಾದ ಅಧ್ಯಯನ ವರದಿಯೊಂದು ತಿಳಿಸಿದೆ.

ಬ್ರಿಟನ್‌, ಅಮೆರಿಕ, ಕೆನಡಾದ ಆರು ಮಂದಿ ತಜ್ಞರ ವಿಶ್ಲೇಷಣೆಯ ಪ್ರಕಾರ, ವೈರಸ್‌ ಪ್ರಧಾನವಾಗಿ ಗಾಳಿಯ ಮೂಲಕವೇ ಹರಡುತ್ತಿರುವ ಕಾರಣ, ಅದರಿಂದ ಯಾವುದೇ ರಕ್ಷಣೆ ಹೊಂದಿರದ ಜನರಲ್ಲಿ ಸೋಂಕು ವ್ಯಾಪಿಸುತ್ತಿದೆ. ಹೀಗಾಗಿಯೇ ಸೋಂಕು ಪ್ರಸರಣ ತಡೆಗೆ ಸರ್ಕಾರಗಳು ಕೈಗೊಳ್ಳುತ್ತಿರುವ ಕ್ರಮಗಳು ವಿಫಲವಾಗುತ್ತಿವೆ.

ಹೊರಾಂಗಣಕ್ಕೆ ಹೋಲಿಸಿದರೆ ಒಳಾಂಗಣದಲ್ಲಿಯೇ ಇಂಥ ಹರಡುವಿಕೆ ಹೆಚ್ಚಿದೆ. ಜೊತೆಗೆ ಸೋಂಕಿನ ಲಕ್ಷಣಗಳಾದ ಕೆಮ್ಮು ಮತ್ತು ಸೀನು ಹೊಂದಿರದ ವ್ಯಕ್ತಿಗಳೇ ಒಟ್ಟಾರೆ ಸೋಂಕು ಹರಡುವಿಕೆಯಲ್ಲಿ ಶೆ.40ರಷ್ಟು ಪಾಲು ಹೊಂದಿದ್ದಾರೆ ಎಂಬುದನ್ನು ಹಲವು ಅಧ್ಯಯನಗಳು ಕೂಡಾ ಸಾಬೀತುಪಡಿಸಿವೆ. ಹೀಗೆ ಶಾಂತವಾಗಿ, ಯಾರ ಅರಿವಿಗೂ ಬಾರದಂತೆ ವೈರಸ್‌ ಗಾಳಿಯಲ್ಲಿ ವ್ಯಾಪಿಸುತ್ತಿರುವುದೇ, ಸೋಂಕು ವಿಶ್ವವ್ಯಾಪಿಯಾಗಲು ಕಾರಣ ಎಂದು ಹೇಳಿದ್ದಾರೆ.

ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ಆರೋಗ್ಯ ಸಂಸ್ಥೆಗಳು ಗಾಳಿಯಿಂದ ವೈರಸ್‌ ಹರಡುವ ಅಪಾಯವನ್ನು ತಡೆಯುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow Us:
Download App:
  • android
  • ios