Asianet Suvarna News Asianet Suvarna News

ಅಮೆರಿಕಾದಲ್ಲೂ ಖಲಿಸ್ತಾನಿಗಳ ಉದ್ಧಟತನ: ಹಿಂದೂ ದೇಗುಲದ ಗೋಡೆಗಳ ಮೇಲೆ ಭಾರತ ವಿರೋಧಿ ಗೀಚು ಬರಹ

ಇತ್ತೀಚೆಗೆ ವಿದೇಶಗಳಲ್ಲಿರುವ ಹಿಂದೂ ದೇವಸ್ಥಾನಗಳ ಮೇಲೆ ಪದೆ ಪದೆ ದಾಳಿ ನಡೆಸುತ್ತಿರುವ ಖಲಿಸ್ತಾನಿ ಬೆಂಬಲಿಗರು ಅಮೆರಿಕದಲ್ಲಿ ಮತ್ತೊಂದು ದೇವಸ್ಥಾನದ ಗೋಡೆಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಗೀಚಿದ್ದಾರೆ

Khalistani supporter scrawled anti-India writings on the walls of Swami Narayan Temple in Newark America akb
Author
First Published Dec 24, 2023, 11:41 AM IST

ನ್ಯೂಯಾರ್ಕ್: ಇತ್ತೀಚೆಗೆ ವಿದೇಶಗಳಲ್ಲಿರುವ ಹಿಂದೂ ದೇವಸ್ಥಾನಗಳ ಮೇಲೆ ಪದೆ ಪದೆ ದಾಳಿ ನಡೆಸುತ್ತಿರುವ ಖಲಿಸ್ತಾನಿ ಬೆಂಬಲಿಗರು ಅಮೆರಿಕದಲ್ಲಿ ಮತ್ತೊಂದು ದೇವಸ್ಥಾನದ ಗೋಡೆಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಗೀಚಿದ್ದಾರೆ. ಕ್ಯಾಲಿಫೋನಿರ್ಯಾದ ನೆವಾರ್ಕ್ ನಗರದಲ್ಲಿರುವ ಸ್ವಾಮಿ ನಾರಾಯಣ ದೇವಸ್ಥಾನದ ಗೋಡೆಗಳ ಮೇಲೆ ಭಾರತ ವಿರೋಧಿ ಹಾಗೂ ಖಲಿಸ್ತಾನಿ ಪರ ಬರಹಗಳನ್ನು ಗೀಚಿ ದೇವಸ್ಥಾನವನ್ನು ವಿರೂಪಗೊಳಿಸಲಾಗಿದೆ.

ಶುಕ್ರವಾರ ಮುಂಜಾನೆ 8 ಗಂಟೆಗೆ ದೇವಸ್ಥಾನವನ್ನು ವಿರೂಪಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕೆನಡಾದಲ್ಲಿ 55 ಅಡಿಯ ಹನುಮಾನ್ ಪ್ರತಿಮೆಗೆ ಖಲಿಸ್ತಾನಿಗಳ ತೀವ್ರ ವಿರೋಧ: ಬಿಗಿ ಭದ್ರತೆ

ಕೃತ್ಯಕ್ಕೆ ಭಾರತ ಭಾರೀ ಖಂಡನೆ:

ದೇವಸ್ಥಾನ ವಿರೂಪಗೊಳಿಸಿದ ಘಟನೆ ವಿರುದ್ಧ ಭಾರತೀಯರಿಂದ ಆಕ್ರೋಶ ವ್ಯಕ್ತವಾಗಿದ್ದು ಇಂಥ ಕೃತ್ಯ ಎಸಗುವವರಿಗೆ ದೇಶದಲ್ಲಿ ಜಾಗ ನೀಡಬಾರದು ಎಂದು ವಿದೇಶಾಂಗ ಸಚಿವ ಎಸ್‌ ಜೈಶಂಕರ್‌, ಅಮೆರಿಕ ಮತ್ತು ಕೆನಡಾಗಳ ಕುರಿತು ಕಿಡಿಕಾರಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು ‘ಇಂತಹ ಉಗ್ರರ ಚಟುವಟಿಕೆಗೆ ಯಾರೂ ಅವಕಾಶ ನೀಡಬಾರದು. ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸವು ಈಗಾಗಲೇ ಅಮೆರಿಕದ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದು ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ ಎಂದಿದ್ದಾರೆ.

ಖಲಿಸ್ತಾನಿ ಉಗ್ರನ ಹತ್ಯೆ: ಭಾರತಕ್ಕೇ ವಾರ್ನಿಂಗ್ ಕೊಡ್ತಾ ಅಮೆರಿಕಾ? ಭಾರತದ ಪ್ರತ್ಯುತ್ತರವೇನು?

ಈ ಹಿಂದೆಯೂ ಅಮೆರಿಕದ ಅನೇಕ ದೇವಸ್ಥಾನಗಳ ಮೇಲೆ ಖಲಿಸ್ತಾನಿ ಬೆಂಬಲಿಗರು ದಾಳಿ ನಡೆಸಿದ್ದರು. ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ನಿಜ್ಜರ್‌ ಹತ್ಯೆ ಬಳಿಕ ಇಂಥ ಘಟನೆಗಳು ಹೆಚ್ಚಾಗಿವೆ. ಕಳೆದ ಜುಲೈನಲ್ಲಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತದ ದೂತಾವಾಸ ಕಚೇರಿ ಮೇಲೂ ಖಲಿಸ್ತಾನಿಗಳು ದಾಳಿ ನಡೆಸಿದ್ದರು.

Follow Us:
Download App:
  • android
  • ios