ಕೆನಡಾ ಹಿಂದೂಗಳ ಮೇಲೆ ಖಲಿಸ್ತಾನಿ ಗೂಂಡಾಗಿರಿ: ಇದು ಹೇಡಿತನದ ಕೃತ್ಯ ಎಂದ ಮೋದಿ ತೀವ್ರ ಆಕ್ರೋಶ

ಹಲ್ಲೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವಾಲಯ ಹಾಗೂ ಕೆನಡಾದಲ್ಲಿನ ಭಾರತೀಯ ರಾಯಭಾರ ಕಚೇರಿ ಖಂಡಿಸಿವೆ. ಇದರ ನಡುವೆಯೇ ಹಿಂದೂಗಳ ಮೇಲಿನ ದಾಳಿಯನ್ನು ಕೆನಡಾ ಪ್ರಧಾನಿ ಜಸ್ಟಿನ್ ಟ್ರಡೋ ಖಂಡಿಸಿದ್ದು, ಪ್ರತಿ ಕೆನಡಾ ಪ್ರಜೆಗೂ ತನ್ನ ಧರ್ಮವನ್ನು ಮುಕ್ತವಾಗಿ ಆಚರಿಸುವ ಎಲ್ಲಾ ಹಕ್ಕಿದೆ ಎಂದು ಪ್ರತಿಪಾದಿಸಿದ್ದಾರೆ. 

Khalistani separatists attack on Canadian Hindus grg

ಒಟ್ಟಾವ(ನ.05):  ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಅಟ್ಟಹಾಸ ಮತ್ತಷ್ಟು ಎಲ್ಲೆ ಮೀರಿದ್ದು, ಇದೀಗ ಕಾರ್ಯಕ್ರಮವೊಂದರ ಸಂಬಂಧ ದೇಗುಲದ ಹೊರಗೆ ನೆರೆದಿದ್ದ ಹಿಂದೂಗಳ ಮೇಲೆ ಖಲಿಸ್ತಾನಿಗಳು ವಿನಾಕಾರಣ ಹಲ್ಲೆ ನಡೆಸಿದ್ದಾರೆ. ಈ ವೇಳೆ ಎರಡೂ ಗುಂಪುಗಳ ನಡುವೆ ಪರಸರ ಹೊಯ್ ಕೈ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. 

ಈ ನಡುವೆ, ಘಟನಾ ಸ್ಥಳದಲ್ಲಿ ಪೊಲೀಸರು ಏಕಾಏಕಿ ಹಿಂದೂ ಯುವಕನೊಬ್ಬನನ್ನು ವಶಕ್ಕೆ ಪಡೆದು ಕರೆದೊಯ್ದ ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗಿದೆ. ಇದಾದ ಬಳಿಕ ಖಲಿಸ್ತಾನಿ ಗೂಂಡಾಗಿರಿ ವಿರುದ್ಧ ಪ್ರತಿಭಟನೆ ನಡೆಸಿದ 3 ಹಿಂದೂ ಕಾರ್ಯಕರ್ತರನ್ನುವಶಕ್ಕೆ ತೆಗೆದುಕೊಳ್ಳಲಾಗಿದೆ. ಕೆನಡಾ ಪೊಲೀಸರ ಈ ನಡೆಗೆ ಭಾರೀ ಖಂಡನೆ ವ್ಯಕ್ತವಾಗಿದೆ.

ರಾಜತಾಂತ್ರಿಕ ಬಿಕ್ಕಟ್ಟು: ಕೆನಡಾದಲ್ಲಿ ಭಾರತೀಯರ ದೀಪಾವಳಿ ಆಚರಣೆ ರದ್ದು!

ಹಲ್ಲೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವಾಲಯ ಹಾಗೂ ಕೆನಡಾದಲ್ಲಿನ ಭಾರತೀಯ ರಾಯಭಾರ ಕಚೇರಿ ಖಂಡಿಸಿವೆ. ಇದರ ನಡುವೆಯೇ ಹಿಂದೂಗಳ ಮೇಲಿನ ದಾಳಿಯನ್ನು ಕೆನಡಾ ಪ್ರಧಾನಿ ಜಸ್ಟಿನ್ ಟ್ರಡೋ ಖಂಡಿಸಿದ್ದು, ಪ್ರತಿ ಕೆನಡಾ ಪ್ರಜೆಗೂ ತನ್ನ ಧರ್ಮವನ್ನು ಮುಕ್ತವಾಗಿ ಆಚರಿಸುವ ಎಲ್ಲಾ ಹಕ್ಕಿದೆ ಎಂದು ಪ್ರತಿಪಾದಿಸಿದ್ದಾರೆ. ಜೊತೆಗೆ ಪರಿ ಸ್ಥಿತಿಯನ್ನು ಪೊಲೀಸರುನಿಯಂತ್ರಿಸಿದರು ಎಂದು ಶ್ಲಾಘಿಸಿದ್ದಾರೆ. ಆದರೆ ಖಲಿಸ್ತಾನಿ ಗಳ ವಿರುದ್ದ ಒಂದೂ ಮಾತು ಆಡಿಲ್ಲ. 

ಏನಾಯ್ತು ?: 

ಟೊರಂಟೋ ಸಮೀಪದ ಬ್ರಾಂಪ್ಟನ್‌ನಲ್ಲಿ ಭಾನುವಾರ ಹಿಂದೂ ಮಹಾಸಭಾ ಮಂದಿರವು ದೇಗುಲದ ಹೊರಭಾಗದಲ್ಲಿ ಸ್ಥಳೀಯ ರಾಯಭಾರ ಕಚೇರಿ ಸಹಯೋಗದಲ್ಲಿ ಕಾರ್ಯಕ್ರಮ ವೊಂದನ್ನು ಹಮ್ಮಿಕೊಂಡಿತ್ತು. ಹೀಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಹಿಂದೂಗಳು ನೆರೆದಿದ್ದರು. ಈ ವೇಳೆ ಖಲಿಸ್ತಾನಿ ಧ್ವಜ, ಬ್ಯಾನ‌ರ್ ಹಿಡಿದು ಘೋಷಣೆ ಕೂಗುತ್ತಾ ಬಂದ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಗುಂಪು ಹಿಂದೂಗಳ ಮೇಲೆ ದಾಳಿ ನಡೆಸಿ ಅವರನ್ನು ಅಟ್ಟಾಡಿಸಿಕೊಂಡು ಹೋಗಿದೆ. ಈ ವೇಳೆ ಎರಡೂ ಗುಂಪುಗಳ ನಡುವೆ ಕಾದಾಟ ನಡೆದಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀ ಸರು ಪರಿಸ್ಥಿತಿ ನಿಯಂತ್ರಿಸಿದ್ದು, ಹಲ್ಲೆ ಖಂಡಿಸಿ ನಿಂತಿದ್ದ ಹಿಂದೂಗಳ ಗುಂಪಿನ ಲ್ಲಿದ್ದ ಯುವಕನೊಬ್ಬನನ್ನು ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದು ಕರೆ ದೊಯ್ದ ವಿಡಿಯೋಗಳು ಜಾಲತಾಣ ದಲ್ಲಿ ಹರಿದಾಡಿವೆ. ಈ ಕುರಿತು ಪೊಲೀ ಸರು ಯಾವುದೇ ಮಾಹಿತಿ ನೀಡಿಲ್ಲ. ಆದರೆ ದಾಳಿಕೋರರನ್ನು ಬಿಟ್ಟು ಹಿಂದೂ ಯುವಕರ ಮೇಲೇ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಖಂಡನೆ:

ಹಿಂದೂಗಳ ಮೇಲಿನ ದಾಳಿ ಯನ್ನು ಪೀಲ್‌ನ ಪೊಲೀಸ್ ಪಡೆ, ಸ್ಥಳೀ ಯ ಮೇಯ‌ರ್ ಕೂಡ ಖಂಡಿಸಿದ್ದಾರೆ. 'ಶಾಂತಿಯುತ ಪ್ರತಿಭಟನೆಯನ್ನು ನಾವು ಗೌರವಿಸುತ್ತೇವೆ. ಆದರೆ ಹಿಂಸೆ ಮತ್ತು ಕ್ರಿಮಿನಲ್ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ಇಂಥ ದಾಳಿಕೋರರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು' ಎಂದು ಪೊಲೀಸರು ಎಚ್ಚರಿಸಿದ್ದಾರೆ. ಭಯ ಆಗುತ್ತಿದೆ- ಅರ್ಚಕ ಬ್ರಹ್ಮಭಟ್: ಸ್ಥಳೀಯ ದೇಗುಲವೊಂದರ ಅರ್ಚಕ ನಯನ್ ಬ್ರಹ್ಮಭಟ್ ಮಾತನಾಡಿ, 'ಈ ಪ್ರದೇಶದಲ್ಲಿ ಪೊಲೀಸರು ಅಲ್ಪಸಂಖ್ಯಾ ತರನ್ನು ರಕ್ಷಿಸುವಲ್ಲಿ ಮತ್ತು ಭದ್ರತೆ ನೀಡುವಲ್ಲಿ ವಿಫಲರಾಗಿದ್ದಾರೆ. ಇದರಿಂ ದಾಗಿ ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಮುದಾಯವು  ಈಗ ದೇವಾಲಯಗಳಿಗೆ ಭೇಟಿ ನೀಡಲು ಹೆದರುತ್ತಿದೆ' ಎಂದಿದ್ದಾರೆ.

ಆಗಿದ್ದೇನು? 

• ಕೆನಡಾದ ಟೊರಂಟೋ ಬಳಿಯ ಬ್ರಾಂಪ್ಟನ್‌ನ ಹಿಂದೂ ದೇಗುಲ ಬಳಿ ಹಿಂದೂಗಳು ಸೇರಿದ್ದರು 
• ರಾಯಭಾರ ಕಚೇರಿ ಜತೆಗೂಡಿ ಅಲ್ಲಿ ಹಿಂದೂ ಮಹಾಸಭಾ ಮಂದಿರ ಕಾರ್ಯಕ್ರಮ ಆಯೋಜಿಸಿತ್ತು 
• ಆವೇಳೆ ಖಲಿಸ್ತಾನಿ ಧ್ವಜ, ಬ್ಯಾನರ್ ಹಿಡಿದು ಘೋಷಣೆ ಕೂಗುತ್ತಾ ಪ್ರತ್ಯೇಕತಾವಾದಿಗಳ ಗುಂಪು ಬಂತು 
• ಏಕಾಏಕಿ ಹಿಂದೂಗಳ ಮೇಲೆ ದಾಳಿ ನಡೆಸಿತು. ಅಟ್ಟಾಡಿಸಿತು. ಎರಡೂ ಕಡೆ ಭರ್ಜರಿ ಕಾದಾಟ ನಡೆಯಿತು 
• ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಹಿಂದೂ ಯುವಕರನ್ನೇ ವಶಕ್ಕೆ ಪಡೆದರು. 

ಇದು ಹೇಡಿತನದ ಕೃತ್ಯ: ಮೋದಿ ತೀವ್ರ ಆಕ್ರೋಶ 

ನವದೆಹಲಿ: ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯದ ಹೊರಗೆ ಹಿಂದೂಗಳ ಮೇಲೆ ನಡೆದ ಹಲ್ಲೆ ಯನ್ನು ಹಾಗೂ ಭಾರತದ ರಾಜತಾಂತ್ರಿಕರ ಮೇಲೆ ಕೆನಡಾ ಕೈಗೊಂಡ ದ್ವೇಷದ ಕ್ರಮಗಳನ್ನು ಭಾರತದ ಪ್ರಧಾನಿ ನರೇ ಂದ್ರ ಮೋದಿ ಅತ್ಯಂತ ಕಠೋರ ಶಬ್ದಗಳಲ್ಲಿ ಖಂಡಿಸಿದ್ದು, 'ಇದು ಹೇಡಿತನದ ಕೃತ್ಯ' ಎಂದಿದ್ದಾರೆ ಹಾಗೂ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕೆನಡಾ ಜತೆಗಿನ ವಿವಾದ ಭುಗಿ ಲೆದ್ದ ಬಳಿಕ ಪ್ರಧಾನಿ ಮೋದಿ ಅವರು ನೀಡಿದ ಮೊದಲ ಹೇಳಿಕೆ ಇದಾಗಿದೆ.

ದೆಹಲಿ ಸ್ಫೋಟ: ಖಲಿಸ್ತಾನಿ ಕೈವಾಡ ಶಂಕೆ, ತನಿಖೆ ಆರಂಭ

ಸೋಮವಾರ ರಾತ್ರಿ ಟ್ವಿಟ್ ಮಾಡಿರುವ ಅವರು, 'ಕೆನಡಾದಲ್ಲಿ ಹಿಂದೂ ದೇವಾಲಯದ ಮೇಲೆ ಉದ್ದೇಶ ಪೂರ್ವಕ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ನಮ್ಮ ರಾಜತಾಂತ್ರಿಕರನ್ನು ಬೆದರಿಸುವ ಹೇಡಿತನದ ಪ್ರಯತ್ನಗಳು ಅಷ್ಟೇ ಭಯಾನಕವಾಗಿವೆ. ಇಂತಹ ಹಿಂಸಾ ಚಾರಗಳು ಭಾರತದ ಸಂಕಲ್ಪವನ್ನು ಎಂದಿಗೂ ದುರ್ಬಲಗೊಳಿಸುವುದಿಲ್ಲ. ಕೆನಡಾದ ಸರ್ಕಾರವುನ್ಯಾಯವನ್ನು ಖಚಿತಪಡಿಸುತ್ತದೆ ಮತ್ತು ಕಾನೂನಿನ ನಿಯಮವನ್ನು ಎತ್ತಿಹಿಡಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ' ಎಂದಿದ್ದಾರೆ. ವಿದೇಶಾಂಗ ಇಲಾಖೆ ಖಂಡನೆ: ಈ ನಡುವೆ, ಭಾರತದ ವಿದೇಶಾಂಗ ವಕ್ತಾರ ರಣಧೀರ್‌ಜೈಸ್ವಾಲ್ ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 'ಉಗ್ರವಾದಿ ಗಳು ಮತ್ತು ಪ್ರತ್ಯೇಕತಾವಾದಿಗಳು ನಡೆಸಿದ ಹಿಂಸಾಚಾರ ವನ್ನು ಭಾರತ ಖಂಡಿಸುತ್ತದೆ. ಕೆನಡಾ ತನ್ನಲ್ಲಿನ ಎಲ್ಲಾ ಪೂಜಾ ಸ್ಥಳಗಳಿಗೆ ರಕ್ಷಣೆ ನೀಡಬೇಕು ಹಾಗೂ ಹಿಂಸಾಕೋರರಮೇಲೆ ಕಾನೂನು ಕ್ರಮ ಜರುಗಿಸಬೇಕು' ಎಂದು ಆಗ್ರಹಿಸಿದರು.

'ಕೆನಡಾದಲ್ಲಿನ ಭಾರತೀಯರ ಸುರಕತೆ ಬಗ್ಗೆ ಭಾರತ ಸರ್ಕಾರಕ್ಕೆ ಕಳವಳವಿದೆ. ಅಲ್ಲಿನ ಭಾರತೀಯ ದೂತಾವಾಸ ಅಧಿಕಾರಿಗಳು ಯಾವುದೇ ಬೆದರಿಕೆ, ಕಿರುಕುಳ, ಹಿಂಸೆಗೆ ಬಗ್ಗದೇ ನಮ್ಮವರಿಗೆ ಕಾನ್ಸುಲರ್ ಸೇವೆ ಒದಗಿಸಲಿದ್ದಾರೆ' ಎಂದರು. ದಾಳಿಯನ್ನು ಕೆನಡಾದ ಭಾರತೀಯ ರಾಯಭಾರ ಕಚೇರಿ ಕೂಡ ಕಟುನುಡಿಗಳಲ್ಲಿ ಖಂಡಿಸಿದೆ. 'ಹಿಂದೂಗಳ ಸಭೆಗೆ ಭಾರತ ವಿರೋಧಿ ಶಕ್ತಿಗಳು ಹಿಂಸಾತ್ಮಕ ರೀತಿಯಲ್ಲಿ ಅಡ್ಡಿಪಡಿಸಿದ್ದು ನಾವು ನೋಡಿದ್ದೇವೆ. ಇಂಥ ಘಟನೆಗಳು ಕಾರ್ಯಕ್ರಮ ಆಯೋಜಿಸಿದ್ದ ಭಾರತೀಯ ನಾಗರಿಕರ ಸುರಕ್ಷತೆ ಕುರಿತು ಕಳವಳ ಹುಟ್ಟುಹಾಕಿದೆ. ಇದು ಖಂಡನಾರ್ಹ' ಎಂದು ಹೇಳಿದೆ.

Latest Videos
Follow Us:
Download App:
  • android
  • ios