ಕೆನಡಾ(ಜೂ.  04)  ಇದು ಒಂದು ಪೋಟೋದ ಕತೆ.. ಈ ಪೋಟವನ್ನು  ಒಮ್ಮೆ ನೋಡಿದಾಗ ಅರ್ಥವಾಗಲು ಸುಲಭಕ್ಕೆ ಸಾಧ್ಯ ಇಲ್ಲ.   ಥಾಮಸ್ ವಿಜಯನ್ ಕ್ಲಿಕ್ಕಿಸಿರುವ ಒರಾಂಗುಟನ್‌(ಗೊರಿಲ್ಲಾ)  ಫೋಟೋ ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿದೆ.

ನೇಚರ್ ಟಿಟಿಎಲ್ Photography ತೀರ್ಪುಗಾರರು ಈ ಪೋಟೋ ಕೊಂಡಾಡಿದ್ದು ವಿಶೇಷಗಳನ್ನು ತೆರೆದಿಟ್ಟಿದ್ದಾರೆ. ಈ ಪೋಟೋದಲ್ಲಿ ಹೊಸ ಅಂಶ ಹುಡುಕುವುದು ಗ್ಯಾರಂಟಿ ಎಂದು ನೇಚರ್ ಟಿಟಿಎಲ್ ಸಂಸ್ಥಾಪಕ ವಿಲ್ ನಿಕೋಲ್ಸ್ ಹೇಳಿದ್ದಾರೆ.

ಕೇರಳ ಮೂಲದ ಥಾಮಸ್ ಈ ಪೋಟೋ ಕ್ಲಿಕ್ಕಿಸಿದ್ದಕ್ಕೆ 1,500 ಮೊತ್ತದ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.  ಎಂಟು ಸಾವಿರ ಜನರು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಪೊಟೋ ತೆಗೆದಿದ್ದು  ಹೇಗೆ? ವಿಜಯನ್ ಈ ಪೋಟೋ ತೆಗೆಯಲು ದೊಡ್ಡ ಸಾಹಸ ಮಾಡಿದ್ದಾರೆ. ನೀರಿನ ಮಧ್ಯ ಬೆಳೆದಿರುವ ಮರದ ಬಳಿ ಗಂಟೆಗಟ್ಟಲೆ ಕಾದಿದ್ದಾರೆ.  ಸರಿಯಾದ ಸಮಯ ಯಾವುದು ಎಂದು ದಿನಗಟ್ಟಲೆ ಕೂತು ಚಿಂತನೆ ಮಾಡಿದ್ದಾರೆ. 

ಮರದ ಪೊಟರೆಯೊಳಗೆ ಲಂಗೂರ ವಿರಾಜಮಾನ..ಎಂಥಾ ಕ್ಲಿಕ್

ಆಗ್ನೇಯ ಏಷ್ಯಾದ ಬೊರ್ನಿಯೊ ದ್ವೀಪದಲ್ಲಿ ಸಾಹಸ ಮಾಡಿದ್ದಾರೆ.  ಕೇರಳ ಮೂಲದವರಾಗಿದ್ದರೂ ಕೆನಡಾದಲ್ಲಿ ನೆಲೆಸಿರುವ ವಿಜಯನ್ ಅಂದಿನ ಅನುಭವ ತಿಳಿಸಿದ್ದಾರೆ. ನೀರಿನಲ್ಲಿ ಬೆಳೆದು ನೀತ ಮರ, ಮೇಲಿನ ನೀಲಾಕಾಶ,  ಬೆಳಕು ಮತ್ತು ಒರಾಂಗುಟನ್‌ ಎಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ತೆಗೆದೆ ಎಂದು ತಿಳಿಸಿದ್ದಾರೆ. ನೀರು ಇಲ್ಲಿ ಕನ್ನಡಿ ತರ ಬಳಕೆಯಾಗಿದೆ. ಗಾಗಾಗಿ ವಿಶೇಷ ಪೋಟೋ ಮೂಡಿಬರಲು ಸಾಧ್ಯವಾಯಿತು ಎಂದು ತಿಳಿಸುತ್ತಾರೆ.

ಹತ್ತಿರದಲ್ಲಿ ಇನ್ನೊಂದು ಮರ ಏರಿ ಗಂಟೆಗಳ ಕಾಲ ಕುಳಿತುಕೊಂಡಿದ್ದೆ ಎಂದು ವಿವರಿಸುತ್ತಾಋಎ. ಪೋಟೋಕ್ಕೆ  'The World is Going Upside Down', ಎನ್ನುವ ಟೈಟಲ್ ನೀಡಲಾಗಿದೆ.  ಇದಕ್ಕೆ ಕಾರಣ ಪೋಟೋದಲ್ಲಿರುವ ಪ್ರಾಣಿ ಸಂತತಿ ಅಪಾಯದ ಅಂಚಿನಲ್ಲಿದೆ.  ಇಡೀ ವಿಶ್ವಕ್ಕೆ ಈ ಸಂತತಿ ಪರಿಚಯ ಮಾಡಿಕೊಟ್ಟಿದ್ದಕ್ಕೆ ಹೆಮ್ಮೆ ಇದೆ ಎನ್ನುತ್ತಾರೆ. 

ಈ ವರ್ಷ 8,000 ಕ್ಕೂ ಹೆಚ್ಚು ಪೋಟೋಗಳು ಸ್ಪರ್ಧೆಗೆ  ಬಂದಿದ್ದವು. ಯುನೈಟೆಡ್ ಕಿಂಗ್‌ಡಂನ 13 ವರ್ಷದ ಥಾಮಸ್ ಈಸ್ಟರ್‌ಬ್ರೂಕ್, 2021 ರ ವರ್ಷದ ಯುವ  ಪೋಟೋಗ್ರಾಫರ್ ಪ್ರಶಸ್ತಿ ತಮ್ಮದಾಗಿರಿಸಿಕೊಂಡರು.