Asianet Suvarna News Asianet Suvarna News

ವಕೀಲೆಯಾಗಿ ತಾಯಿ ಪ್ರಮಾಣವಚನ: ಜಡ್ಜ್ ಮಡಿಲಲ್ಲಿ ಕಂದ ಆರಾಮ!

ವಕೀಲೆಯಾಗಿ ತಾಯಿಯ ಪ್ರಮಾಣವಚನ| ಪುಟ್ಟ ಕಂದನ ಎತ್ತಿಕೊಂಡು ಪ್ರಮಾಣವಚನ ಬೋಧಿಸಿದ ನ್ಯಾಯನೂರ್ತಿ| ನ್ಯಾ. ರಿಚರ್ಡ್ ಡಿಕ್ಸಿನ್ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ| ಮಗುವನ್ನು ಮುದ್ದಾಡುತ್ತಾ  ಜುಲಿಯಾನಾ ಲಮರ್‌ಗೆ ಪ್ರಮಾಣವಚನ ಬೋಧಿಸಿದ ಜಡ್ಜ್| ಸಾಮಾಜಿಕ ಜಾಲತಾಣದಲ್ಲಿ 70 ಸಾವಿರಕ್ಕೂ ಅಧಿಕ ಜನರಿಂದ ವೀಕ್ಷಣೆ|  

Judge Holds Baby While His Mom Takes Oath To Become Lawyer
Author
Bengaluru, First Published Nov 14, 2019, 9:00 PM IST
  • Facebook
  • Twitter
  • Whatsapp

ನ್ಯೂಯಾರ್ಕ್(ನ.14): ಮಹಿಳೆ ಸಮಾಜದಲ್ಲಿ ಯಾವುದೇ ಹುದ್ದೆಯಲ್ಲಿರಲಿ, ಆದರೆ ತನ್ನ ಮಗುವಿಗೆ ಮಾತ್ರ ತಾಯಿಯೇ. ಸಮಾಜ ನೀಡುವ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುವ ಮಹಿಳೆ, ತಾಯ್ತನದ ಜವಾಬ್ದಾರಿಯನ್ನು ಅಷ್ಟೇ ಜತನದಿಂದ ನಿಭಾಯಿಸುತ್ತಾಳೆ. ಇದಕ್ಕೆ ಸಮಾಜ ಕೂಡ ಅಷ್ಟೇ ಜವಾಬ್ದಾರಿಯುತವಾಗಿ ನೈತಿಕ ಬೆಂಬಲ ನೀಡುತ್ತದೆ.

ಅದರಂತೆ ತಾಯಿಯೋರ್ವರು ವಕೀಲೆಯಾಗಿ ಪ್ರಮಾಣವಚನ ಸ್ವೀಕರಿಸುವಾಗ ನ್ಯಾಯಮೂರ್ತಿಯೋರ್ವರು ಆಕೆಯ ಮಗುವನ್ನು ಸಂಭಾಳಿಸುತ್ತಾ ಪ್ರಮಾಣವಚನ ಬೋಧಿಸಿರುವ ಅಪರೂಪದ ಘಟನೆ ಅಮೆರಿಕದಲ್ಲಿ ನಡೆದಿದೆ.

ಅಮ್ಮಂದಿರಿಗೆ ಶಿಕ್ಷಕರ ಪರೀಕ್ಷೆ; ಪುಟ್ಟ ಕಂದಮ್ಮಗಳಿಗೆ ಪೊಲೀಸರ ಆರೈಕೆ!

ರಿಚರ್ಡ್ ಡಿಕ್ಸಿನ್ ಎಂಬ ನ್ಯಾಯಮೂರ್ತಿ ಜುಲಿಯಾನಾ ಲಮರ್ ಎಂಬ ವಕೀಲೆಗೆ ಪ್ರಮಾಣವಚನ ಬೋಧಿಸಿದ್ದಾರೆ. ಈ ವೇಳೆ ಜುಲಿಯಾನಾ ಅವರ ಪುಟ್ಟ ಮಗುವನ್ನು ರಿಚರ್ಡ್ ಎತ್ತಿಕೊಂಡು ಜುಲಿಯಾನಾಳಿಗೆ ಪ್ರಮಾಣವಚನ ಬೋಧಿಸಿದ್ದಾರೆ.

ಈ ಕುರಿತಾದ ವಿಡಿಯೋವನ್ನು ಸರಹಾ ಮಾರ್ಟಿನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸುಮಾರು 70 ಸಾವಿರಕ್ಕೂ ಅಧಿಕ ಜನ ವಿಕ್ಷೀಸಿದ್ದಾರೆ. ಅಲ್ಲದೇ 57 ಸಾವಿರಕ್ಕೂ ಅಧಿಕ ಲೈಕ್ ಮಾಡಿದ್ದಾರೆ.

Follow Us:
Download App:
  • android
  • ios