Asianet Suvarna News Asianet Suvarna News

2 ನಿಮಿಷ ಮೊದಲು ಕಚೇರಿ ಬಿಟ್ಟಿದ್ದಕ್ಕೆ ವೇತನ ಕಡಿತದ ಶಿಕ್ಷೆ!

ಜಪಾನಿಗರು ಸಮಯ ಪಾಲನೆಗೆ ಮಹತ್ವ| 2 ನಿಮಿಷ ಮೊದಲು ಕಚೇರಿ ಬಿಟ್ಟಿದ್ದಕ್ಕೆ ವೇತನ ಕಡಿತದ ಶಿಕ್ಷೆ!

Japanese Workers Face Pay Cuts For Leaving Work 2 Minutes Early pod
Author
Bangalore, First Published Mar 18, 2021, 11:54 AM IST

ಟೋಕಿಯೋ(ಮಾ.18): ಜಪಾನಿಗರು ಸಮಯ ಪಾಲನೆಗೆ ಮಹತ್ವ ನೀಡುತ್ತಾರೆ. ಇದಕ್ಕೆ ಸರ್ಕಾರಿ ಉದ್ಯೋಗಿಗಳು ಕೂಡ ಹೊರತಲ್ಲ. ಆದರೆ, ಕಚೇರಿಯಿಂದ 2 ನಿಮಿಷ ಮೊದಲು ತೆರಳಿದ ಕಾರಣಕ್ಕೆ ನೌಕರರನ್ನು ಸರ್ಕಾರ ಶಿಕ್ಷೆಗೆ ಗುರಿಪಡಿಸಿದೆ ಎಂದರೆ ನಂಬುತ್ತೀರಾ?

2019ರ ಮೇನಿಂದ 2021ರ ಜನವರಿ ಅವಧಿಯಲ್ಲಿ ಶಿಕ್ಷಣ ಇಲಾಖೆಯ 7 ಮಂದಿ ಸಿಬ್ಬಂದಿ 316 ಬಾರಿ ಎರಡು ನಿಮಿಷ ಮೊದಲು ಕಚೇರಿಯಿಂದ ತೆರಳಿದ್ದಕ್ಕೆ ಸಂಬಳ ಕಡಿತದ ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಸಿಬ್ಬಂದಿ ಸಂಜೆ 5.15ಕ್ಕೆ ಕಚೇರಿಯಿಂದ ತೆರಳಬೇಕಿತ್ತು.

ಆದರೆ, 5.17ರ ಬಸ್‌ ಮಿಸ್‌ ಆದರೆ ಇನ್ನೂ ಅರ್ಧಗಂಟೆ ಕಾಯಬೇಕು ಎಂಬ ಕಾರಣಕ್ಕೆ 2 ನಿಮಿಷ ಮುಂಚೆ ಹೋಗಿದ್ದೇವೆ ಎಂಬುದು ಉದ್ಯೋಗಿಗಳ ಅಂಬೋಣ. ಆದರೆ, ಸರ್ಕಾರ ಮಾತ್ರ ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ.

Follow Us:
Download App:
  • android
  • ios