ಟೋಕಿಯೋ(ಜ.31): ಮೃತರ ಶವಸಂಸ್ಕಾರ ಮಾಡುವುದು ರೂಢಿ. ಆದರೆ ಜಪಾನಿನ ಮಹಿಳೆಯೊಬ್ಬರು ತಾಯಿಯ ಮೃತ ದೇಹವನ್ನು ಬರೋಬ್ಬರಿ 10 ವರ್ಷಗಳ ಕಾಲ ಮನೆಯಲ್ಲೇ ಇಟ್ಟುಕೊಂಡಿದ್ದರು ಎಂಬ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.

ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಿದ್ದ 48 ವರ್ಷದ ಮಹಿಳೆ ಯೋಶಿನೋ ಎಂಬವರೇ ತಾಯಿಯ ಶವವನ್ನು ಫ್ರೀಜರ್‌ನಲ್ಲಿ 10 ವರ್ಷ ಇಟ್ಟುಕೊಂಡ ಮಹಿಳೆ. ಯೋಶಿನೋ ಅಪಾರ್ಟ್‌ಮೆಂಟ್‌ ಬಾಡಿಗೆಯನ್ನು ಪಾವತಿಸದ ಹಿನ್ನೆಲೆಯಲ್ಲಿ ಇತ್ತೀಚೆಗೆ ಆಕೆಯನ್ನು ಮನೆಯಿಂದ ಹೊರಹಾಕಲಾಗಿತ್ತು. ಆಗ ಮನೆಯನ್ನು ಸ್ವಚ್ಛ ಮಾಡುತ್ತಿದ್ದ ವೇಳೆ ಕಾರ್ಮಿಕರೊಬ್ಬರು ಫ್ರೀಜರ್‌ನಲ್ಲಿ ಹೆಣ ಇರುವುದನ್ನು ಕಂಡು ದಂಗಾಗಿದ್ದಾರೆ.

ಮನೆ ತಾಯಿಯ ಹೆಸರಿನಲ್ಲಿ ಲೀಸ್‌ಗೆ ಇತ್ತು. ತಾಯಿ ಸತ್ತಿದ್ದು ಗೊತ್ತಾದರೆ ತನ್ನನ್ನೂ ಮನೆಯಿಂದ ಹೊರದಬ್ಬಬಹುದು ಎಂಬ ಆತಂಕದಿಂದ ಆಕೆಯ ಸಾವಿನ ವಿಚಾರ ಮುಚ್ಚಿಟ್ಟು, ಹೆಣವನ್ನು ಮಗಳು ಫ್ರೀಜರ್‌ನಲ್ಲಿ ಇಟ್ಟಿದ್ದಳು.