Asianet Suvarna News

ಜಪಾನ್ ಮುಂದಿನ ಪ್ರಧಾನಿಯಾಗಿ ಯೋಶಿಹಿದೆ ಸುಗಾ ಆಯ್ಕೆ ಮಾಡಿದ ಆಡಳಿ ಪಕ್ಷ!

ಜಪಾನ್ ಪ್ರಧಾನಿ ಶಿಂಜೋ ಅಬೆ ರಾಜೀನಾಮೆ ನೀಡಿದ ಕಾರಣ ಮುಂದಿನ ಪ್ರಧಾನಿ ಯಾರು ಅನ್ನೋ ಕುತೂಹಲ ಮನೆ ಮಾಡಿತ್ತು. ಇದೀಗ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಆಡಳಿತ ಪಕ್ಷ ಮತದಾನದ ಮೂಲಕ ಯೋಶಿಹಿದೆ ಸುಗಾ ಆಯ್ಕೆ ಮಾಡಿದೆ.

Japan ruling party elected chief cabinet secretary Yoshihide Suga as country next prime minister
Author
Bengaluru, First Published Sep 14, 2020, 3:12 PM IST
  • Facebook
  • Twitter
  • Whatsapp

ಜಪಾನ್(ಸೆ.14): ಜಪಾನ್ ಪ್ರಧಾನಿ ಶಿಂಜೋ ಅಬೆ ಅನಾರೋಗ್ಯ ಕಾರಣ ಕಳೆದ ತಿಂಗಳು ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಮುಂದಿನ ಪ್ರಧಾನಿ ಆಯ್ಕೆ ತೀವ್ರ ಕುತೂಹಲ ಕೆರಳಿಸಿತ್ತು. ಇದೀಗ ಆಡಳಿತ ಪಕ್ಷ ಯೋಶಿಹಿದೆ ಸುಗಾ ಅವರನ್ನು ಜಪಾನ್ ನೂತನ ಪ್ರಧಾನಿಯಾಗಿ ಆಯ್ಕೆ ಮಾಡಿದೆ.  

ಭಾರತದ ‘ಮಿತ್ರ’ ಜಪಾನ್‌ ಪ್ರಧಾನಿ ಅಬೆ ರಾಜೀನಾಮೆ!

ಆಡಳಿತ ಪಕ್ಷವಾಗಿರುವ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಮುಂದಿನ ಪ್ರಧಾನಿ ಕುರಿತು ಮತದಾನ ಮಾಡಿತ್ತು. ಈ ಮತದಾನದಲ್ಲಿ ಒಟ್ಟು 534 ಮತಗಳ ಪೈಕಿ 377 ಮತಗಳನ್ನು ಪಡೆಯುವ ಮೂಲಕ ಯೋಶಿಹಿದೆ ಸುಗಾ ಸುಲಭವಾಗಿ ಗೆಲುವು ಸಾಧಿಸಿದ್ದಾರೆ. ಯೋಶಿಹಿದಾ ಅವರಿಗೆ ಮಾಜಿ ರಕ್ಷಣಾ ಸಚಿವ ಶಿಗೇರು ಇಶಿಬಾ ಹಾಗೂ ಪಕ್ಷದ ಹಿರಿಯ ನಾಯಕ ಫುಮಿಯೋ ಕಿಶಿದಾ ತೀವ್ರ ಪೈಪೋಟಿ ನೀಡಿದ್ದರು.

ಸಂಸತ್ತಿನಲ್ಲಿ ಬಹುಮತ ಹೊಂದಿರುವ ಲಿಬರಲ್ ಡೆಮಾಕ್ರಟಿ ಪಾರ್ಟಿಗೆ ಪ್ರಧಾನಿ ಆಯ್ಕೆ ವಿಚಾರದಲ್ಲಿ ಯಾವುದೇ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿಲ್ಲ. ಪಕ್ಷ ಇದೀಗ ಯೋಶಿಹಿದೆ ಸುಗಾ ಅವರನ್ನು ಮುಂದಿನ ಪ್ರಧಾನಿ ಎಂದು ಆಯ್ಕೆ ಮಾಡಿದೆ. ಭುದವರಾ(ಸೆ.16) ಸಂಸತ್ತಿನಲ್ಲಿ ಪ್ರಧಾನಿ ಆಯ್ಕೆಗೆ ಚುನಾವಣೆ ನಡೆಯಲಿದೆ. ಲಿಬರಲ್ ಡೆಮಾಕ್ರಟಿ ಪಾರ್ಟಿ ಬಹುಮತ ಹೊಂದಿರುವ ಕಾರಣ ಯೋಶಿಹಿದೆ ಸುಗಾ ಅಧೀಕೃತವಾಗಿ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ.

71 ವರ್ಷದ ಸುಗಾ ಸದ್ಯ ಸರ್ಕಾರದ ಮುಖ್ಯ ಸಂಪುಟ ಕಾರ್ಯದರ್ಶಿಯಾಗಿದ್ದಾರೆ. ಶಿಂಝೋ ಅವರ ಎಲ್ಲಾ ಮಹತ್ವಾಂಕ್ಷಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಾಗಿ  ಯೋಶಿಹಿದಾ ಹೇಳಿದ್ದಾರೆ.

Follow Us:
Download App:
  • android
  • ios