ಅತ್ತ ಜನ ಭೂಕಂಪನದಿಂದ ತತ್ತರಿಸುತ್ತಿದ್ದರೆ, ಇತ್ತ ಸಂಸದ ಪ್ರಪೋಸ್ ಮಾಡುತ್ತಿದ್ದರು| ಪರಿಹಾರ ಕಾರ್ಯಚರಣೆಯ ಚರ್ಚೆ ಮಧ್ಯೆ ಪ್ರಪೋಸ್ ಮಾಡಿದ ಸಂಸದ| ಇಟಲಿಯಲ್ಲಿ ತೀವ್ರತರವಾದ ಭೂಕಂಪ| ಚರ್ಚೆಯ ನಡುವೆ ಗರ್ಲ್‌ಫ್ರೆಂಡ್‌ಗೆ ಮದುವೆಯ ಪ್ರಪೋಸ್ ಮಾಡಿದ ಸಂಸದ| ಗೆಳತಿ ಎಲಿಸಾ ಡೆ ಲಿಯೋ ಗೆ ಫಾರ್ ರೈಟ್ ಲೀಗ್ ಪಕ್ಷದ ಫ್ಲೆವಿಯೋ ಡಿ ಮುರೋ ಪ್ರಪೋಸ್ | ಸಂಸದನ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಂಸತ್ ಅಧ್ಯಕ್ಷ  ರಾಬರ್ಟ್ ಫಿಕೋ| 

ರೋಮ್(ನ.30): ಇಟಲಿಯಲ್ಲಿ ತೀವ್ರತರವಾದ ಭೂಕಂಪ ಸಂಭವಿಸಿದ್ದು, ಈ ಕುರಿತು ಸಂಸತ್ತಿನಲ್ಲಿ ಪರಿಹಾರ ಕಾರ್ಯಗಳ ಕುರಿತು ಚರ್ಚೆ ನಡೆಯುತ್ತಿದೆ. 

ಆದರೆ ಚರ್ಚೆಯ ನಡುವೆಯೇ ಸಂದನೋರ್ವ ತಮ್ಮ ಗರ್ಲ್‌ಫ್ರೆಂಡ್‌ಗೆ ಮದುವೆಯ ಪ್ರಪೋಸ್ ಮಾಡಿದ್ದು, ಅಧ್ಯಕ್ಷರ ಕೋಪಕ್ಕೆ ಗುರಿಯಾದ ಘಟನೆಯೂ ನಡೆದಿದೆ.

ಫಾರ್ ರೈಟ್ ಲೀಗ್ ಪಕ್ಷದ ಫ್ಲೆವಿಯೋ ಡಿ ಮುರೋ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ತಮ್ಮ ಗೆಳತಿ ಎಲಿಸಾ ಡೆ ಲಿಯೋ ಅವರಿಗೆ ಕಲಾಪದ ನಡುವೆಯೇ ಮದುವೆಯ ಪ್ರಪೋಸ್ ಮಾಡಿದರು.

ಫ್ಲೆವಿಯೋ ಪ್ರಪೋಸ್ ಮಾಡಿದಾಕ್ಷಣ ಹಲವು ಸಂಸದರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಆದರೆ ಫ್ಲೆವಿಯೋ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಸಂಸತ್ ಅಧ್ಯಕ್ಷ ರಾಬರ್ಟ್ ಫಿಕೋ, ಗಂಭಿರ ಚರಚೆಯ ನಡುವೆ ಇದರ ಅಗತ್ಯವಿರಲಿಲ್ಲ ಎಂದು ಹೇಳಿದರು.