ಇಸ್ರೇಲ್‌ನ ಅಜೇಯ ಶಕ್ತಿ: ಶತ್ರುಗಳ ನಿದ್ದೆಗೆಡಿಸುವ ರಹಸ್ಯ ಅಸ್ತ್ರಗಳೇನು?
ಇಸ್ರೇಲ್ ತನ್ನ ಸಣ್ಣ ಗಾತ್ರದ ಹೊರತಾಗಿಯೂ, ಶತ್ರು ರಾಷ್ಟ್ರಗಳಿಗೆ ಸವಾಲೊಡ್ಡುವ ಅತ್ಯಾಧುನಿಕ ಮಿಲಿಟರಿ ಸಾಮರ್ಥ್ಯವನ್ನು ಹೊಂದಿದೆ. ಐರನ್ ಡೋಮ್‌ನಂತಹ ರಕ್ಷಣಾ ವ್ಯವಸ್ಥೆಗಳು ಮತ್ತು ಮಾರಕ ಆಕ್ರಮಣಕಾರಿ ಸಾಮರ್ಥ್ಯಗಳನ್ನು ಒಳಗೊಂಡಂತೆ, ಇಸ್ರೇಲ್‌ನ ಮಿಲಿಟರಿ ಶಕ್ತಿಯು ಅದರ 'ಪುಟ್ಟ ರಾಷ್ಟ್ರ, ದೊಡ್ಡ ಶಕ್ತಿ' ಎಂಬ ಖ್ಯಾತಿಗೆ ಕಾರಣವಾಗಿದೆ.
ಬೆಂಗಳೂರು (ಅ.4): ಇಸ್ರೇಲ್ ಅನ್ನೋ ದೇಶ ಹಾಗೂ ಅವರ ಬಳಿ ಇರುವ ವೆಪನ್ ಹೆಸರು ಕೇಳಿದ್ರೆ ಶತ್ರುಗಳಿಗೆ ನಡುಕ ಹುಟ್ಟಲು ಶುರುವಾಗಿದೆ. ಇಸ್ರೇಲ್ ಶತ್ರುಗಳ ನಿದ್ದೆಗೆಡಿಸಿರುವುದು ಬರೀ ಐರನ್ ಡೋಮ್ ಮಾತ್ರವೇ ಅಲ್ಲ, ಇಡೀ ಇಸ್ರೇಲ್ ಸೇನೆಯ ಬಳಿ ಇರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳು. ಇಸ್ರೇಲ್ ಪಾಲಿಗೆ ಐರನ್ ಡೋಮ್ ರಕ್ಷಣಾ ಕವಚ ಅನ್ನೋದರಲ್ಲಿ ಎರಡು ಮಾತಿಲ್ಲ. ನೀರಲ್ಲಿ ಶತ್ರುಗಳನ್ನ ಹುಡುಕಿ ಹೊಡೆಯಲು ಕಾರ್ವೆಟ್ ನಿಸ್ಸೀಮವಾಗಿದ್ದರೆ, ಶತ್ರು ವಿಮಾನಗಳಿಗೆ ದುಸ್ವಪ್ನ ಇಸ್ರೇಲ್‌ನ ಮ್ಯಾಕ್ಬೆಟ್. ಕಾರ್ವೆಟ್ ಹೆಸರು ಕೇಳಿದ್ರೆ ಶತ್ರುವಿಗೆ ಉಸಿರು ಕಟ್ಟುತ್ತೆ. ಇದು ಇಸ್ರೇಲ್ ಸೇನೆಯ ಬಲಶಾಲಿ F- 16i ಫೈಟರ್ ಜೆಟ್. ಇಸ್ರೇಲ್ ಶತ್ರುಗಳನ್ನು ಬೇತಾಳನಂತೆ ಕಾಡುವ ಸ್ಪೈಡರ್ ಅಂದರೂ ತಪ್ಪಲ್ಲ.
ಅವನು ಬೆನ್ನಟ್ಟಿ ಹೊಡೀತಾನೆ.. ಇವನು ಎದೆನೇ ಸೀಳಿ ಬಿಡ್ತಾನೆ..! ಅಬ್ಬಾ.! ಇಸ್ರೇಲ್ ಬಳಿ ಇರೋದು ಅದೆಂಥಾ ವೆಪನ್‌ಗಳು ಗೊತ್ತಾ. ಶತ್ರುಗಳ ಮುಂದೆ ಗೋಡೆಯಾಗಿ ನಿಲ್ಲೋನು ಆ ಬಲಭೀಮ..! ಇಸ್ರೇಲ್ ಶಸ್ತ್ರ ಶಕ್ತಿಗೆ ಶತ್ರು ಶರಣು.. ಕೆಣಕಿದ್ರೆ ಬಿಡೋ ಮಾತೇ ಇಲ್ಲ..!
ಪುಟ್ಟ ಯಹೂದಿ ರಾಷ್ಟ್ರಕ್ಕೀಗ ಮೂರು ಕಡೆಗಳಿಂದ ಸಂಕಷ್ಟ ಎದುರಾಗಿದೆ. ಹಿಜ್ಬುಲ್ಲಾ, ಯೆಮನ್ ಮತ್ತು ಇರಾನ್‌ನಿಂದ ಇಸ್ರೇಲ್ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಆದರೂ ಅಂಗೈಅಗಲದ ರಾಷ್ಟ್ರ ಇಸ್ರೇಲ್ ಇದ್ಯಾವುದಕ್ಕೂ ಬಗ್ಗುತ್ತಿಲ್ಲ, ಜಗ್ಗುತ್ತಿಲ್ಲ. ಇದರ ಜೊತೆ ಇನ್ನೂ ಮೂರು ಕಡೆಗಳಿಂದ ದಾಳಿ ನಡೆದರೂ ದಕ್ಕಿಸಿಕೊಳ್ಳುವ ಶಕ್ತಿ ಇಸ್ರೇಲ್‌ಗೆ ಇದೆ. ಯಾಕೆಂದ್ರೆ ಇಸ್ರೇಲ್ ಬಳಿ ಅಷ್ಟೊಂದು ಭಯಾನಕ ವೆಪನ್‌ಗಳಿವೆ. ಜಗತ್ತಿನ ಸಣ್ಣ ರಾಷ್ಟ್ರದ ಬಳಿ ಇರುವ ವೆಪನ್‌ಗಳನ್ನು ಕೇಳಿಯೇ ಜಗತ್ತೇ ನಡುಗುತ್ತೆ.
ಇಸ್ರೇಲ್ ಸೇನೆಯಲ್ಲಿ ಒಂದಕ್ಕಿಂತ ಒಂದು ಭಯಾನಕ ವೆಪನ್ಗಳಿವೆ. ಇಷ್ಟೊಂದು ಭಯಾನಕ ವೆಪನ್ಗಳನ್ನು ಹೊಂದಿರುವುದರಿಂದಲೇ ಇಸ್ರೇಲ್ ಎಂಥದ್ದೇ ಶತ್ರುಪಡೆಗೂ ಎದೆಗುಂದದೇ ಹೋರಾಟ ಮಾಡುತ್ತೆ. ಇವಿಷ್ಟೇ ಅಲ್ಲದೇ ಇನ್ನೂ ಅನೇಕ ಭಯಾನಕ ಮತ್ತು ಶತ್ರುಗಳಿಗೆ ನಡುಕ ಹುಟ್ಟಿಸುವ ಅಸ್ತ್ರಗಳು ಇಸ್ರೇಲ್ ಬಳಿ ಇವೆ. ಇಸ್ರೇಲ್ ತನ್ನ ಮಿಲಿಟರಿ ಶಕ್ತಿಯಲ್ಲಿ ಅದೆಷ್ಟು ಅಪ್ಡೇಟ್ ಆಗಿದೆ ಎಂದರೆ, ಇಸ್ರೇಲ್ ಈಗ ಶತ್ರುಗಳ ಬಳಿ ಹೋಗದೆನೇ ಹೊಡೆದುರುಳಿಸುವ ಶಕ್ತಿಯನ್ನು ಹೊಂದಿದೆ. ಹಾಗಿದ್ರೆ ಇಸ್ರೇಲ್ ತನ್ನ ಶತ್ರುಗಳನ್ನು ಕುಳಿತಲ್ಲೇ ಅದ್ಹೇಗೆ ಹೊಡೆದು ಉರುಳಿಸುತ್ತೇ ಅನ್ನೋ ಕುತೂಹಲಕ್ಕೆ ಉದಾಹರಣೆ ಪೇಜರ್ ಬಾಂಬ್.
ಉಗ್ರರು ಅದೆಂತದ್ದೇ ಶಕ್ತಿ ಪ್ರದರ್ಶನ ಮಾಡಿ ದಾಳಿ ಮಾಡಿದರೂ ಇಸ್ರೇಲ್ ಬಗ್ಗೋ ಮಾತೇ ಇಲ್ಲ. ನೋಡಲು ಪುಟ್ಟದಾಗಿದ್ದರೂ ಅತ್ಯಂತ ಬಲಶಾಲಿ ದೇಶ ಇಸ್ರೇಲ್. ಹಾಗಿದ್ರೆ ಸುತ್ತಲೂ ಶತ್ರು ಹೊಂದಿರುವ ಇಸ್ರೇಲ್ ಒಟ್ಟು ಸೇನಾಬಲ ಅಷ್ಟೇನೂ ದೊಡ್ಡದಾಗಿಲ್ಲ.
ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ನಡುವೆ ಯುದ್ಧಭೀತಿ, ಜಗತ್ತಿಗೆ ಕಚ್ಚಾ ತೈಲದ ಬೆಲೆ ಏರಿಕೆ ಆತಂಕ
ಇಸ್ರೇಲ್ ವಿಸ್ತೀರ್ಣದಲ್ಲಿ ಮತ್ತು ಜನಸಂಖ್ಯೆಲ್ಲಿ ತುಂಬಾನೇ ಪುಟ್ಟ ದೇಶ. ಆದ್ರೆ ಶಕ್ತಿಯಲ್ಲಿ ಮಾತ್ರ ಜಗತ್ತಿನ ಬಲಿಷ್ಠ ದೇಶಗಳ ಸಮಕ್ಕೆ ಬಂದು ನಿಲ್ಲುತ್ತೆ. ಹಾಗಿದ್ರೆ ಇಸ್ರೇಲ್‌ನ ಒಟ್ಟು ವಿಸ್ತೀರ್ಣವೆಷ್ಟು? ಮಿಲಿಟರಿ ಪವರ್ ಎಷ್ಟಿದೆ ಮತ್ತು ಪ್ರತಿ ವರ್ಷ ಇಸ್ರೇಲ್ ಸೇನೆಗೆಂದು ಮೀಸಲಿಡುವ ಒಟ್ಟು ಹಣವೆಷ್ಟು ಅನ್ನೋ ಕುತೂಹಲವಿದೆ. ಸುತ್ತಲೂ ಶತ್ರುಗಳನ್ನು ಇಟ್ಟುಕೊಂಡು ಬದುಕುವುದು ಅಷ್ಟು ಸುಲಭ ಅಲ್ಲವೇ ಅಲ್ಲ. ಆದರೂ ಇಸ್ರೇಲ್ ತನ್ನ ಉಳಿವಿಗಾಗಿ ಹೋರಾಟ ಶತ್ರುಗಳ ವಿರುದ್ಧ ಹೋರಾಟ ಮಾಡುತ್ತಲೇ ಇದೆ. ವೈರಿಗಳನ್ನು ಸಡೆಬಡೆಯುತ್ತಲೇ ಇದೆ.
'ತಿರುಗೇಟು ನೀಡದೇ ಬಿಡಲ್ಲ' ಇರಾನ್ ಕ್ಷಿಪಣಿ ದಾಳಿಗೆ ಇಸ್ರೇಲ್ ಶಪಥ, 'ಧ್ವಂಸ ಮಾಡಲಿದ್ದೇವೆ' ಇರಾನ್ ಎಚ್ಚರಿಕೆ!