ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಗೆ ಕೋವಿಡ್ ಪಾಸಿಟಿವ್, ಭಾರತ ಪ್ರವಾಸ ಅನುಮಾನ!
ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಗೆ ಕೋವಿಡ್ ಪಾಸಿಟಿವ್
ಭಾರತ ಪ್ರವಾಸ ಅನುಮಾನ ಸಾಧ್ಯತೆ
ಏಪ್ರಿಲ್ 3 ರಿಂದ 5ರವರೆಗೆ ಭಾರತ ಪ್ರವಾಸ ನಿಗದಿಯಾಗಿತ್ತು
ನವದೆಹಲಿ (ಮಾ. 28): ಇಸ್ರೇಲಿ ಪ್ರಧಾನಿ ನಫ್ತಾಲಿ ಬೆನೆಟ್ (Israeli Prime Minister Naftali Bennett ) ಅವರು ಭಾರತಕ್ಕೆ ಭೇಟಿ ನೀಡಲಿರುವ ಕೆಲ ದಿನಕ್ಕೂ ಮುನ್ನ ಕೋವಿಡ್ 19 ಪಾಸಿಟಿವ್ (Covid-19 Positive) ಆಗಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ ಎಂದು ಮಾಧ್ಯಮಗಳು ಸೋಮವಾರ ವರದಿ ಮಾಡಿದೆ. ಪ್ರಧಾನಮಂತ್ರಿ ನಫ್ತಾಲಿ ಬೆನೆಟ್ ಅವರು ಏಪ್ರಿಲ್ 3 ರಿಂದ 5ರವರೆಗೆ ಭಾರತಕ್ಕೆ ಭೇಟಿ (India Visit) ನೀಡಲಿದ್ದಾರೆ, ಕಳೆದ ವರ್ಷ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ.
ಕೋವಿಡ್ ಪಾಸಿಟಿವ್ ಆಗಿರುವ ಕಾರಣ, ಅವರ ಭಾರತ ಭೇಟಿಯ ಬಗ್ಗೆಯೂ ಅನುಮಾನಗಳು ಎದ್ದಿವೆ. ಆದರೆ, ಪ್ರಧಾನಮಂತ್ರಿ ಕಚೇರಿ ನಿಗದಿಯಂತೆ ಪ್ರವಾಸ ಏರ್ಪಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಭಾರತ ಮತ್ತು ಇಸ್ರೇಲ್ ನಡುವಿನ 30 ವರ್ಷಗಳ ರಾಜತಾಂತ್ರಿಕ ಸಂಬಂಧಗಳ ನೆನಪಿಗಾಗಿ ನಫ್ತಾಲಿ ಈ ಭೇಟಿಯನ್ನು ಕೈಗೊಳ್ಳುತ್ತಿದ್ದಾರೆ. "ಪ್ರಧಾನಿ ಅವರು ಆರೋಗ್ಯವಾಗಿದ್ದಾರೆ ಮತ್ತು ಮನೆಯಿಂದಲೇ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ" ಎಂದು 50 ವರ್ಷದ ನಫ್ತಾಲಿ ಬಗ್ಗೆ ಅವರ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.
ರಕ್ಷಣಾ ಸಚಿವ ಬೆನ್ನಿ ಗ್ಯಾಂಟ್ಜ್, ಆಂತರಿಕ ಭದ್ರತಾ ಸಚಿವ ಒಮರ್ ಬಾರ್ಲೆವ್, ಇಸ್ರೇಲ್ ರಕ್ಷಣಾ ಪಡೆಗಳ ಮುಖ್ಯಸ್ಥ ಅವಿವ್ ಕೊಹಾವಿ, ಶಿನ್ ಬೆಟ್ ಮುಖ್ಯಸ್ಥ ರೋನೆನ್ ಬಾರ್, ಪೊಲೀಸ್ ಮುಖ್ಯಸ್ಥ ಕೋಬಿ ಶಬ್ಟೈ ಮತ್ತು ಇತರರ ಅಧಿಕಾರಿಗಳ ಭಾಗವಹಿಸುವಿಕೆಯೊಂದಿಗೆ ಬೆನೆಟ್ ಇಂದು ಬೆಳಿಗ್ಗೆ ಸಾಂದರ್ಭಿಕ ಮೌಲ್ಯಮಾಪನವನ್ನು ನಡೆಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಭಯೋತ್ಪಾದಕ ದಾಳಿಯಲ್ಲಿ ಭಾನುವಾರ ಹತ್ಯೆಗೀಡಾದ ಇಬ್ಬರು ಇಸ್ರೇಲಿ ಪೊಲೀಸರಿಗೆ ಗೌರವ ನೀಡುವ ಹಾಗೂ ಕೆಲವರೊ ಗಾಯಗೊಂಡವನ್ನು ಭೇಟಿಯಾಗುವ ಕಾರ್ಯಕ್ರಮದ ವೇಳೆ ನಫ್ತಾಲಿ ಬೆನೆಟ್ ಮಾಸ್ಕ್ ಧರಿಸಿ ಹಾಜರಾಗಿದ್ದು ಅಧಿಕೃತ ಚಿತ್ರದ ಮೂಲಕ ಪ್ರಕಟವಾಗಿತ್ತು.
ಪ್ರಧಾನಿ ನರೇಂದ್ರ ಮೋದಿಯವರ (Prime Minister Narendra Modi) ಆಹ್ವಾನದ ಮೇರೆಗೆ ಬೆನೆಟ್ ಅವರು ಏಪ್ರಿಲ್ 3-5 ರಿಂದ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಗ್ಲಾಸ್ಗೋದಲ್ಲಿ ನಡೆದ ಯುಎನ್ ಹವಾಮಾನ ಬದಲಾವಣೆ ಸಮ್ಮೇಳನದ (COP 26) ನಡಡುವೆ ಇಬ್ಬರೂ ನಾಯಕರು ಈ ಹಿಂದೆ ಭೇಟಿಯಾಗಿದ್ದರು. ಆ ನಂತರ 2021ರ ಆಗಸ್ಟ್ 16 ರಂದು ಎರಡೂ ದೇಶಗಳ ನಾಯಕರು ದೂರವಾಣಿ ಸಂಭಾಷಣೆಯನ್ನೂ ನಡೆಸಿದ್ದರು.
Historic Summit ಇಸ್ರೇಲ್‌ನಿಂದ ಐತಿಹಾಸಿಕ ಪ್ರಾದೇಶಿಕ ಶೃಂಗಸಭೆ ಆಯೋಜನೆ, ಬದಲಾಯ್ತು ಮಧ್ಯಪ್ರಾಚ್ಯ ದೇಶಗಳ ಮೈತ್ರಿ!
"ಬೆನೆಟ್ ಅವರು ಪ್ರಧಾನ ಮಂತ್ರಿಯಾದ ಬಳಿಕ ಭಾರತಕ್ಕೆ ಅವರ ಮೊದಲ ಭೇಟಿಯಾಗಿದೆ. ಭಾರತ ಮತ್ತು ಇಸ್ರೇಲ್ ನಡುವಿನ 30 ವರ್ಷಗಳ ಸಂಪೂರ್ಣ ರಾಜತಾಂತ್ರಿಕ ಸಂಬಂಧಗಳು ಮತ್ತು 75 ವರ್ಷಗಳ ಭಾರತದ ಸ್ವಾತಂತ್ರ್ಯದ ಸ್ಮರಣಾರ್ಥ ಈ ಭೇಟಿ ನಡೆಯಲಿದೆ" ಎಂದು ವಿದೇಶಾಂಗ ಇಲಾಖೆ ಹೇಳಿದೆ. ಜುಲೈ 2017 ರಲ್ಲಿ ಪ್ರಧಾನಿ ಮೋದಿ ಇಸ್ರೇಲ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ ಮತ್ತು ಇಸ್ರೇಲ್ ತಮ್ಮ ದ್ವಿಪಕ್ಷೀಯ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಗೆ ಇನ್ನಷ್ಟು ದೊಡ್ಡ ಮಟ್ಟಕ್ಕೆ ಹೆಚ್ಚಿಸಿದ್ದವು. ಅಂದಿನಿಂದ, ಉಭಯ ದೇಶಗಳು ನಾವೀನ್ಯತೆ ಮತ್ತು ಸಂಶೋಧನೆಯ ಮೇಲೆ ಕೇಂದ್ರೀಕರಿಸುವ ಮೂಲಕ ತಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಾಢವಾಗಿಸುವುದನ್ನು ಮುಂದುವರೆಸಿವೆ.
Israel PM Visit ಬಾಂಧ್ಯವದ 30ನೇ ವರ್ಷಾಚರಣೆ, ಏ.2ಕ್ಕೆ ಇಸ್ರೇಲ್ ಪ್ರಧಾನಿ ಭಾರತಕ್ಕೆ!
"ಇಸ್ರೇಲ್ ಪ್ರಧಾನಿಯವರ ಭೇಟಿಯು ಕೃಷಿ, ನೀರು, ವ್ಯಾಪಾರ, ಶಿಕ್ಷಣ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಅತ್ಯುತ್ತಮ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇಸ್ರೇಲ್ ನಲ್ಲಿ ಕೋವಿಡ್-19 ಸೋಂಕುಗಳಲ್ಲಿ ಸಾಧಾರಣ ಹೆಚ್ಚಳವನ್ನು ಅನುಭವಿಸುತ್ತಿದೆ. ಯುರೋಪ್ ರಾಷ್ಟ್ರಗಳಲ್ಲಿ ಓಮಿಕ್ರಾನ್ ವ್ಯಾಪಕವಾಗಿ ಹರಡುತ್ತಿದೆ. ವಾಷಿಂಗ್ಟನ್ ಪೋಸ್ಟ್ ಪ್ರಕಾರ, ಬೆನೆಟ್ ಮತ್ತು ಇಸ್ರೇಲ್‌ನ ಅರ್ಧದಷ್ಟು ಜನರು ಮೂರು ವ್ಯಾಕ್ಸಿನೇಷನ್‌ಗಳನ್ನು ಸ್ವೀಕರಿಸಿದ್ದಾರೆ.