ಇರಾನ್[ಮಾ.10]: ವಿಶ್ವದಾದ್ಯಂತ ಕೊರೋನಾ ವೈರಸ್ ಮರಣ ಮೃದಂಗ ಬರಿಸುತ್ತಿದೆ. ಈವರೆಗೂ ವಿಶ್ವದೆಲ್ಲೆಡೆ ಒಟ್ಟು 11 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿದೆ. ಅಲ್ಲದೇ 4 ಸಾವಿರಕ್ಕೂ ಅಧಿಕ ಮಂದಿ ಇದಕ್ಕೆ ಬಲಿಯಾಗಿದ್ದಾರೆ. ಈ ಮಾರಕ ವೈರಸ್ ನಿಂದ ಆರ್ಥ ವ್ಯವಸ್ಥೆಯೂ ಹದಗೆಟ್ಟಿದ್ದು, ಇಟಲಿ ತನ್ನೊಂದು ಪ್ರದೇಶವನ್ನು ಸಂಪೂರ್ಣವಗಿ ಲಾಕ್ ಡೌನ್ ಮಾಡಿದೆ. ಉತ್ತರ ಇಟಲಿಯಲ್ಲಿ ಸರಿ ಸುಮಾರು 1.6 ಕೋಟಿ ಮಂದಿ ಕೈದಿಗಳಂತಿದ್ದಾರೆ. ಹೀಗಿರುವಾಗಲೇ ಇಲ್ಲಿನ ಜೈಲುಗಳಲ್ಲಿ ನಡೆದ ದಾಂಧಲೆಯಿಂದ 6 ಮಂದಿ ಮೃತಪಟ್ಟಿದ್ದಾರೆ. ಅತ್ತ ಸೌದಿ ಅರೇಬಿಯಾ ಕೂಡಾ 14 ದೇಶಗಳಿಗೆ ತೆರಳುವ ಸಾರಿಗೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದೆ.

ಇಟಲಿಯ ಜೈಲಿನಲ್ಲಿ ನಡೆದ ಧಾಂಧಲೆ ಬಳಿಕ ಬೆಚ್ಚಿ ಬಿದ್ದರುವ ಇರಾನ್ ಜೈಲುಗಳಲ್ಲಿದ್ದ ಸುಮಾರು 70 ಸಾವಿರ ಕಡೈದಿಗಳನ್ನು ಬಿಡುಗಡೆಗೊಳಿಸಲು ನಿರರ್ರದರಿಸಿದೆ. ಹೀಗಿದ್ದರೂ ಅವರನ್ನು ಯಾವಾಗದವರೆಗೆ ಬಿಡುಗಡೆಗೊಳಿಸುತ್ತದೆ ಎಂಬುವುದು ಇನ್ನೂ ನಿಶ್ಚಯವಾಗಿಲ್ಲ. ಮತ್ತೊಂದೆಡೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕೈದಿಗಳನ್ನು ಬಿಡುಗಡೆಗೊಳಿಸಿದರೆ ಅಸುರಕ್ಷಿತ ಪರಿಸ್ಥಿತಿ ನಿರ್ಂಆಆ್ಣಂವಾಗುತ್ತದೆ ಎಂಬುವುದು ಜನ ಸಾಮಾನ್ಯರ ಆತಂಕವಾಗಿದೆ.

ನಿರ್ಬಂಧದಿಂದ ಜೈಲಿನಲ್ಲಿ ದಾಂಧಲೆ

ಇಟಲಿ ಆಡಳಿತ ಹೇಳುವನ್ವಯ ಕೊರೋನಾದಿಂದಾಗಿ ಹೇರಲಾದ ನಿರ್ಬಂಧದಿಂದ 25 ಜೈಲುಗಳಲ್ಲಿ ಧಂಗೆ ಆರಂಭವಾಗಿದೆ. ಇದರಿಂದಾಗಿ ಒಟ್ಟು 6 ಮಂದು ಮೃತಪಟ್ಟಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಸರ್ಕಾರ ಕೈದಿಗಳಿಗೆ ಕುಟುಂಬ ಸದಸ್ಯರನ್ನು ಭೇಟಿಯಾಗದಂತೆ ನಿರ್ಬಂಧ ಹೇರಿತ್ತು. ಇದಾದ ಬಳಿಕ ಧಂಗೆ ಆರಂಭವಾಗಿದ್ದು, ಕುಟುಂಬ ಸದಸ್ಯರು ರಸ್ತೆಗಳಿದು ಈ ನಿರ್ಧಾರವನ್ನು ಖಂಡಿಸಿದ್ದರು. ಹಲವೆಡೆ ಜನರು ಪೊಲೀಸರ ಮೇಲೆ ದಾಳಿ ನಡೆಸಿದ್ದರು. ಇನ್ನು ಇಟಲಿಯಲ್ಲಿ ಈವರೆಗೂ ಸುಮಾರು 333 ಮಂದಿ ಕೊರೀಓನಾಗೆ ಬಲಿಯಾಗಿದ್ದು, 9 ಸಾವಿರಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.