ಇಂಡೋನೇಷಿಯಾ(ನ.19):  ಶವಪೆಟ್ಟಿಗೆ ತಯಾರಿಸಿ ಜೀವನ ಸಾಗಿಸುತ್ತಿದ್ದ. ಆರ್ಥಿಕ ಸಂಕಷ್ಟದಲ್ಲೂ ಜೀವನ ನಿರ್ವಹಣೆ ಮಾಡಿಕೊಂಡು ಮುನ್ನಡೆಯುತ್ತಿದ್ದ. ಅಕೌಂಟ್ ಖಾತೆಯಲ್ಲಿ ಉಳಿತಾಯವಿಲ್ಲ. ದಿನದ ಆದಾಯ ಅಲ್ಲಿಗೆ ಸರಿ. ಕೈಯಲ್ಲಿ ಒಂದು ರೂಪಾಯಿ ಉಳಿಯುತ್ತಿರಲಿಲ್ಲ.  ಆದರೆ ಒಂದೇ ರಾತ್ರಿ ನೋಡಿ, ಬೆಳಗೆ ಎದ್ದಾಗ ಶವಪೆಟ್ಟಿಗೆ ತಯಾರಕ 9.8 ಕೋಟಿ ರೂಪಾಯಿ ಒಡೆಯನಾಗಿದ್ದ. ಈ ಘಟನೆ ನಡೆದಿದ್ದು ಇಂಡೋನೇಷಿಯಾದಲ್ಲಿ.

ಸಮುತ್ರಾ ವಲಯದಲ್ಲಿ ಶವಪೆಟ್ಟಿಗೆ ತಯಾರಕ 33 ವರ್ಷದ ಜೋಶುವಾ ಹುತಾಗಲಂಗ್ ಮನೆಯ ಹೊರಭಾಗದಲ್ಲಿ ಕೆಲಸ ಮಾಡುತ್ತಿದ್ದ. ಶವಪೆಟ್ಟಿಗೆ ತಯಾರಿಕೆ ತೊಡಗಿದ್ದ ವೇಳೆ ಆಗಸದಿಂದ ಉಲ್ಕೆಯೊಂದು ರಭಸವಾಗಿ ನೆಲಕ್ಕಪ್ಪಳಿಸಿದೆ. ಆದರೆ ಜೋಶುವಾ ಮನೆಯ ಮೆಲ್ಚಾವಣಿಗೆ ಬಡಿದು ನೆಲಕ್ಕೆ ಅಪ್ಪಳಿಸಿದೆ. 

2.1 ಕೆಜಿ ತೂಕದ ಈ ಉಲ್ಕೆ ಅಪ್ಪಳಿಸಿದ ಕಾರಣ ಜೋಶುವಾ ಮನೆ ಮೆಲ್ಜಾವಣಿ ಕುಸಿದಿದೆ. ಆದರೆ 2.1 ಕೆಜಿ ತೂಕದ ಉಲ್ಕೆ 4.5 ಬಿಲಿಯನ್ ವರ್ಷಗಳಷ್ಟು ಹಳೆಯ ಉಲ್ಕೆಯಾಗಿದೆ. ಇಷ್ಟೇ ಅಲ್ಲ ಅದು ವಿಶೇಷ ಹಾಗೂ ಅತೀ ವಿರಳ ಲೋಹವಾಗಿದೆ. ಈ ಉಲ್ಕಾ ಲೋಹದ ಬೆಲೆ ಪ್ರತಿ ಗ್ರಾಂ ಬೆಲೆ 63,000 ರೂಪಾಯಿ.  2.1 ಕೆಜೆ ಉಲ್ಕೆಯ ಒಟ್ಟು ಬೆಲೆ 9.8 ಕೋಟಿ ರೂಪಾಯಿ.