ಕೌಲಾ ಲಾಂಪುರ್(ಏ.09): ಹುಡುಗನ ಕಡೆಯವರು ಬಂದಾಯ್ತು, ಹುಡುಗಿ ಮನೆಯವರಿಂದ ಅದ್ಧೂರಿ ಸ್ವಾಗತ ಕೂಡ ಸಿಕ್ಕಾಯ್ತು. ಸಂಪ್ರದಾಯದಂತೆ ಉಡುಗೊರೆ, ಮಧುಮಗಳ ಸೀರೆ ಸೇರಿದಂತೆ ಹಲವು ವಸ್ತುಗಳ ಬದಲಾವಣೆ ಕೂಡ ಆಯಿತು. ಮಧುಮನಗನ್ನು ಮಂಟಪದೊಳಕ್ಕೆ ಕರೆತಂದ ವಧು ಕುಟಂಬಸ್ಥರು ವರನನ್ನು ವೇದಿಕೆ ಹತ್ತಿಸಿಯೇ ಬಿಟ್ಟರು. ಇನ್ನೇನು  ಮಧುಮಗ, ಹುಡುಗಿಯನ್ನು ವರಿಸಬೇಕು ಅನ್ನೋವಷ್ಟರಲ್ಲಿ ಎಡವಟ್ಟು ಅರಿವಿಗೆ ಬಂದಿದೆ. ಆತಂಕದ ಒಂದು ಕ್ಷಣ ಅತೀ ದೊಡ್ಡ ಹಾಸ್ಯವಾಗಿ ಪರಿಣಮಿಸಿದೆ.

ಇನ್ನೇನು ಮಗನ ಮದ್ವೆಯಾಗಿಬಿಡ್ತು ಅನ್ನುವಷ್ಟರಲ್ಲಿ, ವಧು ತನ್ನ ಮಗಳೇ ಎಂಬುದು ಗೊತ್ತಾಯ್ತು...

ಗೂಗಲ್ ಮ್ಯಾಪ್ ನಂಬಿ ತನ್ನ ವರ ಹಾಗೂ ಆತನ ಕುಟುಂಬಸ್ಥರು ಮಂಟಪಕ್ಕೆ ತೆರಳಿದ ಪರಿಣಾಮವಾಗಿದೆ. ಇಂಡೋನೇಷಿಯಾದಲ್ಲಿ ನಡೆದ ಈ ಘಟನೆ ಇದೀಗ ಮದುವೆ ಸಂದರ್ಭದಲ್ಲಿ ನಡೆದ ಅತ್ಯಂತ ಹಾಸ್ವಾಸ್ವದ ಘಟನೆ ಎಂದೇ ಚಿತ್ರಿಸಲಾಗುತ್ತಿದೆ. ಅಷ್ಟಕ್ಕೂ ತಪ್ಪಾದ ವೇದಿಕೆ ಹತ್ತಿದ್ದರೂ ಮದುವೆ ತನಕ ಈ ಮದುವೆ ಹೋಗಿದ್ದೇಗೆ ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಮದುವೆಗೆ ಹುಡುಗಿಯ ಕಡೆಯವರು ಮಂಟಪ ನಿಗದಿ ಮಾಡಿದ್ದಾರೆ. ಹೀಗಾಗಿ ಗೂಗಲ್ ಮ್ಯಾಪ್ ಹಾಕಿ ಮದುವೆಗೆ ವರ ಹಾಗೂ ಆತನ ಕುಟುಂಬಸ್ಥರು ಆಗಮಿಸಿದ್ದಾರೆ. ಆದರೆ ಅದೇ ಗ್ರಾಮದಲ್ಲಿ 2 ಮದುವೆ ಒಂದೇ ದಿನ ಏರ್ಪಡಿಸಲಾಗಿತ್ತು. ಗೂಗಲ್ ಮ್ಯಾಪ್ ಬಳಸಿ ಬಂದ ವರ, ತಾನು ನಿಶ್ಚಯಿಸಿದ ಮದುವೆ ಮಂಟಪ ಬದಲು ಇನ್ನೊಂದು ಮದವೆ ಮಂಟಪಕ್ಕೆ ತೆರಳಿದ್ದಾರೆ.

ಮೂರಡಿಯ ಕುಳ್ಳಿಗೆ ಸಿಕ್ಕಿದವನು ಎಂಥ ಗಂಡ!

ತನ್ನ ಮದುವೆ ಮಂಟಪ ಬದಲು ಗೂಗಲ್ ಮ್ಯಾಪ್ ಅದೇ ಗ್ರಾಮದ ಮತ್ತೊಂದು ಮದೆವೆ ಮಂಟಪದ ದಾರಿ ತೋರಿಸಿದೆ. ಮದುವೆ ಉಡುಪಿನಲ್ಲಿದ್ದ ವರ ಹಾಗೂ ಆತನ ಕುಟಂಬಸ್ಥರನ್ನು ಪರಿಚಯವೇ ಇಲ್ಲದ ಹುಡುಗಿಯ ಕುಟುಂಬಸ್ಥರು ಸ್ವಾಗತಿಸಿದ್ದಾರೆ. ಬಳಿಕ ಸಂಪ್ರದಾಯದ ಪ್ರಕಾರ ಉಡುಗೊರೆಗಳ ವಿನಿಮಯ ಕೂಡ ನಡೆದಿದೆ.

ವೇದಿಕೆಗೆ ಬಂದ ವರನ ನೋಡಿದ ಹುಡುಗಿಗೆ ಶಾಕ್ ಆಗಿದೆ. ತಾನು ನಿಶ್ಚಯಿಸಿದ ಹುಡುಗನೇ ಬೇರೆ. ಈ ಹುಡುಗನೇ ಬೇರೆ. ಇತ್ತ ವರನ ಕುಟುಂಬಸ್ಥರಿಗೂ ಈ ಅನುಮಾನ ಆರಭದಿಂದಲೇ ಬಂದಿದೆ. ಅಷ್ಟರಲ್ಲಿ ವರನ ಕುಟುಂಬಸ್ಥರೊಬ್ಬರು, ಹುಡುಗಿ ಹಾಗೂ ಕುಟಂಬಸ್ಥರಲ್ಲಿ ಮಾತನಾಡಿದ್ದಾರೆ. ಈ ವೇಳೆ ತಾವು ಯಾರದ್ದೋ ಮದುವೆಗೆ ಆಗಮಿಸಿರುವುದು ಗೊತ್ತಾಗಿದೆ. ಈ ವಿಚಾರ ಮಂಟಪದಲ್ಲಿರುವವರಿಗೆ ತಿಳಿದಾಗ ಯಾರಿಗೂ ನಗು ತಡೆಯಲು ಆಗಲಿಲ್ಲ. ಇತ್ತ ಹುಡುಗಿ ಶಾಕ್ ಮೇಲೆ ಶಾಕ್‌ನಿಂದ ಮಾತೇ ಹೊರಡದಂತೆ ನಿಂತಿದ್ದಾಳೆ.

 

ಬಳಿಕ ವರನ ಕಡೆಯವರಿಗೆ ಅನಾಮಿಕ ಮದುವೆ ಕಡೆಯವರು ದಾರಿ ತೋರಿಸಿ ಕಳುಹಿಸಿಕೊಟ್ಟಿದ್ದಾರೆ. ಒಂದು ಕ್ಷಣ ನಾನು ಗಾಬರಿಗೊಂಡೆ. ಏನಾಗುತ್ತಿದೆ ಅರಿವು ಇಲ್ಲದಾಯಿತು. ವರನ ಕುಟಂಬಸ್ಥರೊಬ್ಬರಿಗೂ ಇದೇ ಅನುಮಾನ ಬಂದು ಮಾತನಾಡಿದ್ದಾರೆ. ಹೀಗಾಗಿ ಅವರು ಗೂಗಲ್ ಮ್ಯಾಪ್ ತಪ್ಪಿ ಈ ಮದುವೆಗೆ ಬಂದಿದ್ದಾರೆ ಅನ್ನೋದು ತಿಳಿಯಿತು. ಇದರಿಂದ ನನ್ನ ಹೊಸ ಬದುಕು ಉಳಿಯಿತು ಎಂದು 27 ವರ್ಷ ವಧು ಉಲ್ಫಾ ಹೇಳಿದ್ದಾರೆ.

ಸಿನಿಮೀಯ ರೀತಿಯಲ್ಲಿ ನಡೆದ ಈ ಘಟನೆ ಕೊನೆಗೆ ನಗುವಿನಲ್ಲಿ ಅಂತ್ಯಗೊಂಡಿದೆ. ಎರಡು ಮದುವೆಗಳೂ ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆದಿದೆ.