108 ಕೆಜಿ ದೇಹ ತೂಕ ಇಳಿಸಿಕೊಂಡ ವಿಶ್ವದ ಅತ್ಯಂತ ದಡೂತಿ ಬಾಲಕ ಆರ್ಯ| 4 ವರ್ಷದ ಕಠಿಣ ಶ್ರಮ, ವ್ಯಾಯಾಮ, ಡಯಟ್| ತಂದೆ ತಾಯಿ ಕೂಡಾ ಈ ಟೆನ್ಶನ್ ಫ್ರೀ

ಜಕಾರ್ತಾ[ಜ.27]: 193 ಕೆಜಿ ದೇಹ ತೂಕದೊಂದಿಗೆ ವಿಶ್ವದ ಅತ್ಯಂತ ದಡೂತಿ ಬಾಲಕ ಎನಿಸಿಕೊಂಡಿದ್ದ ಇಂಡೋನೇಷ್ಯಾದ ಆರ್ಯಾ ಪರಮಾನಾ ವಿಡಿಯೋ ಒಂದು ವೈರಲ್ ಆಗಿದ್ದು, ನೆಟ್ಟಿಗರನ್ನು ಅಚ್ಚರಿಗೀಡು ಮಾಡಿದೆ. ಈ ವಿಡಿಯೋದಲ್ಲಿ ದಡೂತಿಯಾಗಿದ್ದ ಬಾಲಕ ಬಹಳಷ್ಟು ತೂಕ ಇಳಿಸಿಕೊಂಡಿರುವುದನ್ನು ನೋಡಬಹುದು. ಈ ವಿಡಿಯೋದಲ್ಲಿ ಆರ್ಯಾರವರು 2016ರಿಂದ ನಡೆಸಿದ ವರ್ಕೌಟ್ ನೀಡಲಾಗಿದೆ.

2016ರಲ್ಲಿ, ತಾನು ದೇಹದ ತೂಕ ಇಳಿಸಬೇಕೆಂಬ ನಿರ್ಧಾರ ತೆಗೆದುಕೊಂಡಾಗ ಆರ್ಯ 10 ವರ್ಷದವನಾಗಿದ್ದ. ಬಳಿಕ ನಡೆಸಿದ ವ್ಯಾಯಾಮ ಹಾಗೂ ಡಯಟ್ ನಿಂದ ಈತ 4 ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ತೂಕ ಇಳಿಸಿಕೊಂಡಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಆರ್ಯಾ ತಂದೆ ಬ್ಯಾರಿಯಾಟ್ರಿಕ್ ಸರ್ಜರಿ, ಡಯಟ್ ಹಾಗೂ ನಿಯಮಿತ ವ್ಯಾಯಮದಿಂದ ಆರ್ಯಾ ತನ್ನ ದೇಹದ ತೂಕ ಇಳಿಸಿಕೊಂಡಿದ್ದಾನೆ. ಈ ನಡುವೆ ಒಂದು ಸರ್ಜರಿಯೂ ಆಗಿದ್ದು, ಆತನ ದೇಹದಲ್ಲಿ ಜೋತು ಬಿದ್ದಿರುವ ಹೆಚ್ಚಿನ ಚರ್ಮ ತೆಗೆಯಲು ಇನ್ನೂ ಎರಡು ಸರ್ಜರಿ ನಡೆಸಬೇಕಿದೆ. 

View post on Instagram

ಇನ್ನು ಆರ್ಯಾ ತೂಕ ಇಳಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತಿರುವ ತರಬೇತುದಾರ ಆದೆ ಕೂಡಾ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. '2016ರಲ್ಲಿ ನಾನು ಆರ್ಯಾ ತಂದೆ ತಾಯಿಯನ್ನು ಭೇಟಿಯಾಗಿ ಮಕ್ಕಳ ದಿನಚರಿ ಕುರಿತಾದ ಮಾಹಿತಿ ಪಡೆದುಕೊಂಡು, ಸಮತೋಲನ ಆಹಾರ ನೀಡುವಂತೆ ತಿಳಿಸಿದೆ. ಇದರೊಂದಿಗೆ ನಾನು ಆತನೊಂದಿಗಿದ್ದು, ನಿರಂತರ ಪ್ರೋತ್ಸಾಹ ನೀಡಿದೆ' ಎಂದಿದ್ದಾರೆ.

ಆರಂಭದಲ್ಲಿ ಆರ್ಯಾ ಸರಳವಾದ ವ್ಯಾಯಮ ಮಾಡುತ್ತಿದ್ದ, ನಿಂತು, ಕುಳಿತು, ಪಂಚಿಂಗ್ ಬ್ಯಾಗ್ ಪಂಚ್ ಮಾಡುವುದಷ್ಟೇ ವ್ಯಾಯಾಮವಾಗಿತ್ತು. ಇದಾದ ಬಳಿಕ ಆತ ನಿಧಾನವಾಗಿ ವೇಯ್ಟ್ ಲಿಫ್ಟಿಂಗ್ ಮಾಡಲಾರಂಭಿಸಿದ. ಆರಂಭದಲ್ಲಿ ಇದನ್ನೆಲ್ಲಾ ಮಾಡಲು ಆತನಿಗೆ ಬಹಳ ಕಷ್ಟವಾಗುತ್ತಿತ್ತಂತೆ.

View post on Instagram

ಇನ್ನು ಮಗನ ಕುರಿತು ಮಾತನಾಡಿದ ಆರ್ಯಾ ಹೆತ್ತವರು 'ಆತ ಜನಿಸಿದಾಗ ಆತನ ತೂಕ ಕೇವಲ ಮೂರೂವರೆ ಕೆಜಿ ಮಾತ್ರ ಇತ್ತು. ಆದರೆ 2014ರಲ್ಲಿ ಪರಿಸ್ಥಿತಿ ಕೈ ಮೀರಲಾರಂಭಿಸಿತು. ಆಗ ಆರ್ಯಾಗೆ 8 ವರ್ಷ ವಯಸ್ಸಾಗಿತ್ತು. ಆದರೆ ಆತನ ತೂಕ ಮಾತ್ರ ಗಣನೀಯವಾಗಿ ಏರಿಕೆಯಾಗಲಾರಂಭಿಸಿತ್ತು. ಹೀಗಾಗಿ ಕೇವಲ 2 ವರ್ಷದಲ್ಲಿ ಆತನ ತೂಕ 88 ಕೆಜಿ ಹೆಚ್ಚಾಗಿ, ವಿಶ್ವದ ಅತ್ಯಂತ ದಡೂತಿ ಬಾಲಕ ಎಂದು ಕರೆಯಲಾರಂಭಿಸಿದ್ದರು. ಹೀಗಾಗಿ ನಾವು ಆತನ ತೂಕ ಇಳಿಸಿಕೊಳ್ಳುವ ಪ್ರಯತ್ನಕ್ಕಿಳಿದೆವು. ಇದರಲ್ಲೂ ಯಶಸ್ಸು ಕಂಡಿದ್ದೇವೆ ಎಂದಿದ್ದಾರೆ.