ಕ್ಯಾತೆ ತೆಗೆದಿದ್ದ ಬಾಂಗ್ಲಾದೇಶಕ್ಕೆ ಮುಟ್ಟಿ ನೋಡಿಕೊಳ್ಳುವಂಥ ಶಾಕ್ ಕೊಟ್ಟ ಭಾರತ

ಬಾಂಗ್ಲಾದೇಶದ ಆಂತರಿಕ ಸಂಘರ್ಷ ಮತ್ತು ಭಾರತ ವಿರೋಧಿ ನಿಲುವಿನಿಂದಾಗಿ ಜಾಗತಿಕ ಜವಳಿ ಮಾರುಕಟ್ಟೆಯಲ್ಲಿ ಭಾರತಕ್ಕೆ ಅವಕಾಶಗಳು ಹೆಚ್ಚುತ್ತಿವೆ. ದೇಶೀಯ ಜವಳಿ ಉದ್ಯಮವನ್ನು ಉತ್ತೇಜಿಸಲು ಮುಂಬರುವ ಬಜೆಟ್‌ನಲ್ಲಿ ಹಲವು ಕ್ರಮಗಳನ್ನು ಸರ್ಕಾರ ಘೋಷಿಸುವ ಸಾಧ್ಯತೆಯಿದ್ದು, ಇದು ಬಾಂಗ್ಲಾದೇಶದ ಆರ್ಥಿಕತೆಗೆ ಹೊಡೆತ ನೀಡುವ ಸಾಧ್ಯತೆಯಿದೆ.

Indian government is planning to deal an indirect economic blow to Bangladesh mrq

ನವದೆಹಲಿ: ಅತಿ ಹೆಚ್ಚು ಜವಳಿ ರಫ್ತು ಮಾಡುತ್ತಿದ್ದ ಬಾಂಗ್ಲಾದೇಶ ಕಳೆದ 5 ತಿಂಗಳಿಂದ ಆಂತರಿಕ ಸಂಘರ್ಷದಲ್ಲಿ ಸಿಲುಕಿರುವ ಮತ್ತು ಸತತವಾಗಿ ಭಾರತ ವಿರೋಧಿ ಕೃತ್ಯ ಎಸಗುತ್ತಿರುವ ಬೆನ್ನಲ್ಲೇ, ಆ ದೇಶಕ್ಕೆ ಪರೋಕ್ಷವಾಗಿ ಆರ್ಥಿಕವಾಗಿ ಹೊಡೆತ ನೀಡಲು ಭಾರತ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಬಾಂಗ್ಲಾ ಅಸ್ಥಿರತೆ ಬಳಿಕ ವಿಶ್ವದ ಹಲವು ದೇಶಗಳು ತಮ್ಮ ಜವಳಿ ಅಗತ್ಯ ಪೂರೈಸಿಕೊಳ್ಳಲು ಭಾರತ ಸೇರಿದಂತೆ ಹಲವು ದೇಶಗಳತ್ತ ಮುಖಮಾಡಿವೆ. ಆದರೆ ತಕ್ಷಣಕ್ಕೆ ಬೇಡಿಕೆ ಪೂರೈಸುವುದು ದೇಶದ ಜವಳಿ ಉದ್ಯಮಕ್ಕೆ ಸಾಧ್ಯವಾಗುತ್ತಿಲ್ಲ.

ಹೀಗಾಗಿ ದೇಶೀಯ ಜವಳಿ ಉದ್ಯಮವನ್ನು ಮತ್ತಷ್ಟು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂಬರುವ ಬಜೆಟ್‌ನಲ್ಲಿ ಹಲವು ಪಕ್ಕ ಕ್ರಮಗಳನ್ನು ಸರ್ಕಾರ ಘೋಷಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಏನೇನು ನೆರವು?:

ಬಜೆಟ್‌ನಲ್ಲಿ ಜವಳಿ ವಲಯಕ್ಕೆ ನೀಡುವ ಅನುದಾನ ಹೆಚ್ಚಳ, ಕಚ್ಚಾವಸ್ತುಗಳ ಮೇಲಿನ ಸುಂಕ ಕಡಿತ, ಉತ್ಪಾದನೆ ಆಧರಿತ ಪ್ರೋತ್ಸಾಹಕ (ಪಿಎಲ್‌ಐ) ಯೋಜನೆಯ ಮೊತ್ತವನ್ನು ಹಾಲಿ ಇರುವ 45 ಕೋಟಿ ರು.ನಿಂದ 60 ಕೋಟಿ ರು.ಗೆ ಹೆಚ್ಚಿಸುವ ಸಾಧ್ಯತೆ ಇದೆ.

ಆರ್ಥಿಕ ಪೆಟ್ಟು?:

ಈ ಕ್ರಮಗಳು ಭಾರತದ ಜವಳಿ ಉತ್ಪನ್ನವನ್ನು ಮತ್ತಷ್ಟು ಅಗ್ಗ ಮಾಡುವುದರ ಜೊತೆಗೆ, ಸಾಮರ್ಥ್ಯ ಹೆಚ್ಚಳಕ್ಕೂ ಕಾರಣವಾಗಲಿದೆ. ಇದು ಜವಳಿ ಉತ್ಪನ್ನಗಳ ರಫ್ತಿಗೆ ನೆರವು ನೀಡಲಿದ್ದು, ಭಾರತ ವಿರೋಧಿ ನಿಲುವು ತಳೆಯುತ್ತಿರುವ ಯೂನಸ್‌ರ ಮಧ್ಯಂತರ ಸರ್ಕಾರಕ್ಕೆ ಭಾರೀ ಪೆಟ್ಟು ನೀಡಲಿದೆ.

ಜವಳಿ ಉದ್ಯಮ:

ಭಾರತದಲ್ಲಿ ಜವಳಿ ಉದ್ಯಮ 4.5 ಕೋಟಿ ಜನರಿಗೆ ಉದ್ಯೋಗ ಕಲ್ಪಿಸಿದ್ದು, ಕಳೆದ 8 ತಿಂಗಳಲ್ಲಿ ಶೇ.7ರಷ್ಟು ಬೆಳವಣಿಗೆ ಕಂಡಿದ್ದು, 19 ಲಕ್ಷ ಕೋಟಿ ರು. ತಲುಪಿದೆ. ಸಿದ್ಧ ಉಡುಪು ಉದ್ಯಮ ಶೇ. 11ರಷ್ಟು ಏರಿಕೆಯಾಗಿ 86 ಸಾವಿರ ಕೋಟಿ ರು. ಆಗಿದೆ.

ಬಾಂಗ್ಲಾಕ್ಕೆ ಭಾರೀ ಹೊಡೆತ:

ಬಾಂಗ್ಲಾದೇಶದ ರಫ್ತಿನಲ್ಲಿ ಜವಳಿಯೇ ಶೇ.80ರಷ್ಟು ಪಾಲು ಪಡೆದಿದ್ದು, ಜಿಡಿಪಿಗೆ ಶೇ.11ರಿಂದ 15ರಷ್ಟು ಕೊಡುಗೆ ನೀಡುತ್ತಿದೆ. ಒಂದು ವೇಳೆ ಬಾಂಗ್ಲಾದ ಜವಳಿ ರಫ್ತಿನಲ್ಲಿ ಭಾರತದ ದೊಡ್ಡ ಪಾಲು ಬಾಚಿಕೊಂಡರೆ ಅದು ಬಾಂಗ್ಲಾದೇಶಕ್ಕೆ ಚೇತರಿಸಿಕೊಳ್ಳಲಾಗದ ಪೆಟ್ಟು ನೀಡಲಿದೆ.

ಇದನ್ನೂ ಓದಿ: ಬಾಂಗ್ಲಾ ರಾಜಕೀಯ ಅರಾಜಕತೆ: ಬಳ್ಳಾರಿ ಜೀನ್ಸ್‌ಗೆ ಬಂತು ಭಾರೀ ಬೇಡಿಕೆ!

ಜವಳಿ ರಫ್ತು

2024 ಜನವರಿ- ನವೆಂಬರ್‌ನಲ್ಲಿ ಅಮೆರಿಕಕ್ಕೆ ಜವಳಿ ರಫ್ತು

ಬಾಂಗ್ಲಾದೇಶ 57000 ಕೋಟಿ ರು.

ಭಾರತ 38000 ಕೋಟಿ ರು.

2024ರಲ್ಲಿ ಒಟ್ಟು ಜವಳಿ ರಫ್ತು

ಬಾಂಗ್ಲಾದೇಶ 43 ಲಕ್ಷ ಕೋಟಿ ರು.

ಭಾರತ 13 ಲಕ್ಷ ಕೋಟಿ ರು.

ಇದನ್ನೂ ಓದಿ: ಬಾಂಗ್ಲಾದೇಶದಿಂದ ಮತ್ತೊಂದು ಕೃತ್ಯ! ಭಾರತದ ಆಹ್ವಾನ ತಿರಸ್ಕರಿಸಿದ ಯೂನಸ್ ಸರ್ಕಾರ!

Latest Videos
Follow Us:
Download App:
  • android
  • ios