ಕೊರೋನಾ ವೈರಸ್ಸಿಗೆ ಹೆದರಿ ವ್ಯಕ್ತಿಯೊಬ್ಬ ಕಳೆದ ಮೂರು ತಿಂಗಳಿಂದ ಷಿಕಾಗೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಅಡಗಿದ್ದ| 3 ತಿಂಗಳು ಅಡಗಿದ್ದ ಭಾರತೀಯ ಅರೆಸ್ಟ್‌

ಲಾಸ್‌ ಏಂಜಲೀಸ್‌(ಜ.20): ಕೊರೋನಾ ವೈರಸ್ಸಿಗೆ ಹೆದರಿ ವ್ಯಕ್ತಿಯೊಬ್ಬ ಕಳೆದ ಮೂರು ತಿಂಗಳಿಂದ ಷಿಕಾಗೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಅಡಗಿ ಕುಳಿತ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ. ಆರೋಪ ಸಂಬಂಧ ಆದಿತ್ಯ ಸಿಂಗ್‌ (36) ಎಂಬಾತನನ್ನು ಬಂಧಿಸಲಾಗಿದೆ.

ಈತನ ಮೇಲೆ ಘೋರ ಕ್ರಿಮಿನಲ್‌ ಅಪರಾಧ ಮತ್ತು ಅಸಭ್ಯ ವರ್ತನೆ ಆರೋಪದಡಿ ದೂರು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅ.19ರಂದು ಲಾಸ್‌ ಏಂಜಲೀಸ್‌ನಿಂದ ಬಂದ ಸಿಂಗ್‌ ಕೋವಿಡ್‌-19 ಸೋಂಕಿಗೆ ಹೆದರಿ ಷಿಕಾಗೋ ವಿಮಾನ ನಿಲ್ದಾಣದ ಭದ್ರತಾ ವಲಯದಲ್ಲಿಯೇ ಬರೋಬ್ಬರಿ 3 ತಿಂಗಳು ಅಡಗಿ ಕುಳಿತಿದ್ದ.

ಪ್ರಯಾಣಿಕರ ಬಳಿ ಭಿಕ್ಷೆ ಬೇಡಿ ಜೀವಿಸುತ್ತಿದ್ದ. ಅನುಮಾನ ಬಂದು ಪ್ರಶ್ನಿಸಿದಾಗ ಈತನ ಅಸಲಿ ಕತೆ ಬಯಲಾಗಿದೆ. ಬಳಿಕ ಶನಿವಾರ ಪೊಲೀಸರು ಈತನನ್ನು ಬಂಧಿಸಿದ್ದಾರೆ.