ಹೊಸ ಉದ್ಯಮಗಳ ಆರಂಭಕ್ಕೆ ಪೂರಕ ವಾತಾವರಣ ಇರುವ ವಿಶ್ವದ ಟಾಪ್‌ 5 ದೇಶಗಳ ಪಟ್ಟಿಯಲ್ಲಿ ಭಾರತಕ್ಕೂ ಸ್ಥಾನ ಲಭಿಸಿದೆ. ಜಾಗತಿಕ ಮಟ್ಟದ 500ಕ್ಕೂ ಹೆಚ್ಚು ಸಂಶೋಧಕರ ಒಕ್ಕೂಟ ನಡೆಸಿದ ಈ ಸಮೀಕ್ಷಾ ವರದಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. 

ಲಂಡನ್‌ (ಫೆ.11): ಹೊಸ ಉದ್ಯಮಗಳ ಆರಂಭಕ್ಕೆ ಪೂರಕ ವಾತಾವರಣ ಇರುವ ವಿಶ್ವದ ಟಾಪ್‌ 5 ದೇಶಗಳ ಪಟ್ಟಿಯಲ್ಲಿ ಭಾರತಕ್ಕೂ ಸ್ಥಾನ ಲಭಿಸಿದೆ. ಜಾಗತಿಕ ಮಟ್ಟದ 500ಕ್ಕೂ ಹೆಚ್ಚು ಸಂಶೋಧಕರ ಒಕ್ಕೂಟ ನಡೆಸಿದ ಈ ಸಮೀಕ್ಷಾ ವರದಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ಕಡಿಮೆ ಆದಾಯ ಇರುವ ರಾಷ್ಟ್ರಗಳಲ್ಲಿ ಉದ್ಯಮಗಳ ಆರಂಭದ ಪಟ್ಟಿಯಲ್ಲಿ ಭಾರತ ನಂ.1 ಸ್ಥಾನ ಪಡೆದುಕೊಂಡಿದೆ.

ಹೆಚ್ಚು ಶ್ರೀಮಂತ, ಮಧ್ಯಮ ಮತ್ತು ಕಡಿಮೆ ಆದಾಯದ ಆರ್ಥಿಕ ದೇಶಗಳ 2000ಕ್ಕೂ ಹೆಚ್ಚು ಮಂದಿಯಿಂದ ಸಂಗ್ರಹಿಸಲಾದ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಗ್ಲೋಬಲ್‌ ಎಂಟರ್‌ಪ್ರೆನ್ಯುರ್‌ಶಿಪ್‌ ಮಾನಿಟರ್‌(ಜಿಇಎಂ) ಸಮೀಕ್ಷೆ ನಡೆಸಿದ್ದು, ಅದನ್ನು ದುಬೈ ಎಕ್ಸ್‌ಪೋನಲ್ಲಿ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಹೊಸ ಉದ್ಯಮ ಸ್ಥಾಪನೆಗೆ ಪೂರಕ ವಾತಾವರಣವಿದ್ದು, ಯಾವುದೇ ಅಡೆತಡೆಗಳಿಲ್ಲದೆ ಸುಲಲಿತವಾಗಿ ಉದ್ಯಮವನ್ನು ಆರಂಭಿಸಬಹುದಾಗಿದೆ ಎಂದು ದೇಶದ ಶೇ.82ರಷ್ಟು ಉದ್ಯಮಿಗಳು ಹೇಳಿದ್ದಾರೆ. 

ಅಲ್ಲದೆ ಹೊಸ ಉದ್ಯಮಕ್ಕೆ ಉತ್ತಮ ಅವಕಾಶಗಳಿವೆ ಎಂದು ಶೇ.83ರಷ್ಟುಮಂದಿ ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಶೇ.86ರಷ್ಟುಮಂದಿ ಉದ್ಯ ಉದ್ಯಮ ಆರಂಭಕ್ಕೆ ಅಗತ್ಯವಿರುವ ಕೌಶಲ್ಯಗಳು ಮತ್ತು ಜ್ಞಾನ ತಮ್ಮಲ್ಲಿ ಇದೆ ಎಂದು ನಂಬಿದ್ದಾರೆ ಎಂದು ಈ ಸಮೀಕ್ಷೆ ಹೇಳಿದೆ. ಈ ಹಿನ್ನೆಲೆಯಲ್ಲಿ ಉದ್ಯಮ ಸ್ಥಾಪನೆಯ ಪೂರಕ ವಾತಾವರಣ ಕುರಿತಾದ ಈ ಜಾಗತಿಕ ಪಟ್ಟಿಯಲ್ಲಿ ಭಾರತ 4ನೇ, ಉದ್ಯಮ ಸ್ಥಾಪನೆಗೆ ಉತ್ತಮ ಅವಕಾಶಗಳ ಪಟ್ಟಿಯಲ್ಲಿ 2ನೇ ಸ್ಥಾನ ಹಾಗೂ ತಮ್ಮಲ್ಲೂ ಉದ್ಯಮ ಆರಂಭಕ್ಕೆ ಕೌಶಲ್ಯ ಮತ್ತು ಜ್ಞಾನ ಇದೆ ಎಂಬ ಪಟ್ಟಿಯಲ್ಲಿ ಜಾಗತಿಕವಾಗಿ 4ನೇ ಸ್ಥಾನ ಪಡೆದಿದೆ. 

ಆದಾಯ ತೆರಿಗೆ ಪ್ರಸಕ್ತ ಸ್ವರೂಪದ ಬಗ್ಗೆ ಶೇ.65 ಜನರಿಗೆ ಅಸಮಾಧಾನ: ಸಮೀಕ್ಷಾ ವರದಿ

ಆದಾಗ್ಯೂ, ತಮ್ಮ ಉದ್ಯಮಗಳು ತಾವು ಅಂದುಕೊಂಡದ್ದಕ್ಕಿಂತ ಕಡಿಮೆ ವೇಗದಲ್ಲಿ ವೃದ್ಧಿಯಾಗುತ್ತಿದೆ ಎಂದು ಶೇ.80ರಷ್ಟುಭಾರತೀಯ ಉದ್ಯಮಪತಿಗಳು ಹೇಳಿದ್ದಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

ಕೋವಿಡ್‌ ನಡುವೆಯೂ ದೇಶದ ಆರ್ಥಿಕಾಭಿವೃದ್ಧಿ ದರ ದಾಖಲೆ ಬೆಳವಣಿಗೆ: ಕೋವಿಡ್‌ ಸಾಂಕ್ರಾಮಿಕದಿಂದ (Covid 19) ನಲುಗಿದ್ದ ದೇಶದ ಆರ್ಥಿಕತೆ ಪೂರ್ಣ (Economy) ಪ್ರಮಾಣದಲ್ಲಿ ಪುಟಿದೆದ್ದಿದ್ದು, ಮುಂಬರುವ ಯಾವುದೇ ಸವಾಲುಗಳನ್ನು ಎದುರಿಸಲು ಸಂಪೂರ್ಣ ಸನ್ನದ್ಧವಾಗಿದೆ ಎಂದು ಕೇಂದ್ರ ಸರ್ಕಾರವು ಸೋಮವಾರ ಮಂಡಿಸಿದ ‘ಆರ್ಥಿಕ ಸಮೀಕ್ಷೆ’ಯಲ್ಲಿ ಘೋಷಿಸಿದೆ. ಜೊತೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಸಮಗ್ರ ಆರ್ಥಿಕ ಬೆಳವಣಿಗೆ ದರ (ಜಿಡಿಪಿ) ಶೇ.9.2ರಷ್ಟುಮತ್ತು 2022-23ನೇ ಸಾಲಿನಲ್ಲಿ ಶೇ.8ರಿಂದ ಶೇ.8.5ರಷ್ಟುಬೆಳವಣಿಗೆ ದಾಖಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. 

ಇದರೊಂದಿಗೆ, ಈ ಹಿಂದಿನ ಕುಸಿತವನ್ನು ಮೆಟ್ಟಿನಿಂತು, ಮುಂದಿನ ಸತತ 2 ವರ್ಷಗಳ ಕಾಲ ಇಡೀ ವಿಶ್ವದ ಯಾವುದೇ ದೇಶಗಳಿಗಿಂತ ಭಾರತ ಹೆಚ್ಚಿನ ಜಿಡಿಪಿ ದರ ದಾಖಲಿಸುವ ಸಾಧ್ಯತೆ ದಟ್ಟವಾಗಿದೆ. ಸೋಮವಾರ ಸಂಸತ್ತಿನಲ್ಲಿ 2021-22ನೇ ಸಾಲಿನ ಆರ್ಥಿಕ ಸಮೀಕ್ಷಾ ವರದಿ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ‘ಒಟ್ಟಾರೆ ಮತ್ತು ಬೃಹತ್‌- ಆರ್ಥಿಕತೆಯಲ್ಲಿನ ಸ್ಥಿರತೆ ಸೂಚ್ಯಂಕಗಳು ಭಾರತದ ಆರ್ಥಿಕತೆಯು 2022-23ರಲ್ಲಿ ಎದುರಾಗಬಹುದಾದ ಯಾವುದೇ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿದೆ ಎಂಬುದನ್ನು ಸೂಚಿಸಿವೆ. 

ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾದ ಮಹಿಳೆ.. ವಿಡಿಯೋ ವೈರಲ್

ಭಾರತದ ಆರ್ಥಿಕತೆಯು ಹೀಗೆ ಉತ್ತಮ ಸ್ಥಿತಿಯನ್ನು ತಲುಪಿದ್ದಕ್ಕೆ ಮುಖ್ಯ ಕಾರಣ ಆರ್ಥಿಕತೆಯ ವಿಶಿಷ್ಟಪ್ರತಿಕ್ರಿಯೆ ಕಾರ್ಯತಂತ್ರ’ ಎಂದು ಹೇಳಿದ್ದಾರೆ. ‘ದೇಶದಲ್ಲಿ ಕೋವಿಡ್‌ ಲಸಿಕಾ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆದಿರುವುದು, ಪೂರೈಕೆ ವಲಯದಲ್ಲಿನ ಸುಧಾರಣೆ ಮತ್ತು ನಿಯಂತ್ರಣಾ ಕ್ರಮಗಳನ್ನು ಸುಧಾರಣೆ ಮಾಡಿದ್ದು ದೇಶದ ಆರ್ಥಿಕ ಪ್ರಗತಿಗೆ ದೊಡ್ಡ ನೆರವು ನೀಡಿದೆ’ ಎಂದು ಸಚಿವೆ ನಿರ್ಮಲಾ ಬಣ್ಣಿಸಿದ್ದಾರೆ.