Asianet Suvarna News Asianet Suvarna News

‘ಆಪರೇಷನ್‌ ದೇವಿಶಕ್ತಿ’: ಅಪ್ಘಾನ್‌ನಿಂದ ಭಾರತೀಯರನ್ನು ಕರೆತರುವ ಸಾಹಸಕ್ಕೆ ಮರುನಾಮಕರಣ!

* ಆಫ್ಘನ್‌ ರಕ್ಷಣಾ ಕಾರ‍್ಯ ‘ಆಪರೇಷನ್‌ ದೇವಿಶಕ್ತಿ’

* ಭಾರತೀಯರನ್ನು ಕರೆತರುವ ಸಾಹಸಕ್ಕೆ ಹೆಸರು ನಾಮಕರಣ

* ಸರ್ಕಾರದಿಂದ ಈವರೆಗೆ 800ಕ್ಕೂ ಹೆಚ್ಚು ನಾಗರಿಕರ ರಕ್ಷಣೆ

* ಹಿಂದೂ, ಸಿಖ್ಖರನ್ನು ಕರೆತರುವ ಕಾರ‍್ಯ

India Afghanistan evacuation mission termed Operation Devi Shakti pod
Author
Bangalore, First Published Aug 25, 2021, 8:36 AM IST

ನವದೆಹಲಿ(ಆ.25): ತಾಲಿಬಾನ್‌ ಉಗ್ರರ ಕೈವಶವಾದ ಬಳಿಕ ಅಫ್ಘಾನಿಸ್ತಾನದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರು ಹಾಗೂ ಆಫ್ಘನ್‌ನ ಹಿಂದೂ ಮತ್ತು ಸಿಖ್‌ ಪ್ರಜೆಗಳ ರಕ್ಷಣಾ ಕಾರ್ಯಾಚರಣೆಗೆ ‘ಆಪರೇಷನ್‌ ದೇವಿ ಶಕ್ತಿ’ ಎಂದು ಹೆಸರಿಡಲಾಗಿದೆ. ಆಗಸ್ಟ್‌ 16ರಿಂದ ಮಂಗಳವಾರದವರೆಗೆ ಭಾರತೀಯರು ಸೇರಿದಂತೆ ಸಂಕಷ್ಟದಲ್ಲಿದ್ದ 800 ಜನರನ್ನು ಭಾರತಕ್ಕೆ ಈ ಕಾರಾರ‍ಯಚರಣೆ ಮೂಲಕ ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ.

‘ಆಪರೇಷನ್‌ ದೇವಿ ಶಕ್ತಿ’ ನಾಮಕರಣದ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್‌ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.

‘ಆಪರೇಷನ್‌ ದೇವಿ ಶಕ್ತಿ ಮುಂದುವರಿದಿದೆ. 78 ಮಂದಿ ಕಾಬೂಲ್‌ನಿಂದ ದುಶಾಂಬೆ ಮೂಲಕ ದೆಹಲಿಗೆ ಮಂಗಳವಾರ ಆಗಮಿಸಿದ್ದಾರೆ. ಭಾರತೀಯ ವಾಯುಸೇನೆ, ಏರ್‌ ಇಂಡಿಯಾಗೆ ಸಲ್ಯೂಟ್‌’ ಎಂದು ಜೈಶಂಕರ್‌ ಹೇಳಿದ್ದಾರೆ.

ಈ ಹಿಂದೆ 2015ರಲ್ಲಿ ಆಂತರಿಕ ಯುದ್ಧಪೀಡಿತ ಯೆಮೆನ್‌ನಿಂದ ಭಾರತೀಯರನ್ನು ರಕ್ಷಿಸುವ ಕಾರ್ಯಾಚರಣೆಗೆ ‘ಆಪರೇಷನ್‌ ರಾಹತ್‌’ ಎಂದು ಭಾರತ ಹೆಸರಿಟ್ಟಿತ್ತು. ಆಗ 4,640 ಭಾರತೀಯರು ಹಾಗೂ 900 ವಿದೇಶೀಯರನ್ನು ಭಾರತ ರಕ್ಷಿಸಿ ಸ್ವದೇಶಕ್ಕೆ ಕರೆತಂದಿತ್ತು. ಅಂದಿನ ವಿದೇಶಾಂಗ ಖಾತೆ ರಾಜ್ಯ ಸಚಿವ ಜ| .ಕೆ. ಸಿಂಗ್‌ ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

‘ದೇವಿ ಶಕ್ತಿ’ ಹೆಸರೇಕೆ?

ದುರ್ಗೆಯು ರಾಕ್ಷಸರಿಂದ ಅಮಾಯಕ ಜನರನ್ನು ರಕ್ಷಿಸುತ್ತಾಳೆ. ಹೀಗಾಗಿಯೇ ತಾಲಿಬಾನ್‌ ರಕ್ಕಸರಿಂದ ಅಮಾಯಕರನ್ನು ಪಾರು ಮಾಡುವ ಈ ಕಾರಾರ‍ಯಚರಣೆಗೆ ‘ಆಪರೇಷನ್‌ ದೇವಿ ಶಕ್ತಿ’ ಎಂದು ಹೆಸರಿಡಲಾಗಿದೆ ಎಂದು ಹೇಳಲಾಗಿದೆ.

Follow Us:
Download App:
  • android
  • ios