BJP, RSS ಸಿದ್ಧಾಂತವೇ ಭಾರತಕ್ಕೆ ದೊಡ್ಡ ಬೆದರಿಕೆ ಎಂದ ಪಾಕ್ ಪ್ರಧಾನಿ
- ಪ್ರಧಾನಿ ಮೋದಿ, ಬಿಜೆಪಿ, ಆರ್‌ಎಸ್‌ಎಸ್ ಬಗ್ಗೆ ಪಾಕ್ ಪ್ರಧಾನಿ ಟೀಕೆ
- BJP, RSS ಸಿದ್ಧಾಂತವೇ ಭಾರತಕ್ಕೆ ದೊಡ್ಡ ಬೆದರಿಕೆ ಎಂದ ಇಮ್ರಾನ್ ಖಾನ್
ಇಸ್ಲಮಾಬಾದ್(ಜು.18): ಬಿಜೆಪಿ, ಆರ್‌ಎಸ್‌ಎಸ್ ಸಿದ್ಧಾಂತವೇ ಭಾರತಕ್ಕೆ ದೊಡ್ಡ ಅಪಾಯ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರಲ್ಲಿ ಚುನಾವಣೆ ರ್ಯಾಲಿಯಲ್ಲಿ ಮಾತನಾಡಿ, ಪ್ರಧಾನಿ ಮೋದಿ, ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಾಗೆಯೇ ಕಾಶ್ಮೀರಿ ಜನರಿಗೆ ತಾವೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಯಭಾರಿ ಎಂದು ಹೇಳಿಕೊಂಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ಬಾಘ್‌ನಲ್ಲಿ ಮೊದಲ ಚುನಾವಣಾ ಸಂಬಂಧಿತ ಸಭೆ ನಡೆಸಿ ಮಾತನಾಡಿದ್ದಾರೆ.
ಮಗ ಮೋದಿ ಕ್ಯಾಬಿನೆಟ್ ಸಚಿವ: ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ತಂದೆ, ತಾಯಿ!
ಬಿಜೆಪಿ ಮತ್ತು ಆರ್‌ಎಸ್‌ಎಸ್ ಭಾರತಕ್ಕೆ ದೊಡ್ಡ ಅಪಾಯ. ಅವುಗಳ ಸಿದ್ಧಾಂತದಿಂದಲೇ ಅವು ಅಪಾಯಕಾರಿಯಾಗಿವೆ. ಮುಸ್ಲಿಂ ಮಾತ್ರವಲ್ಲ, ಸಿಖ್, ಕ್ರಿಶ್ಚಿಯನ್ನರು, ಹಿಂದುಳಿದ ವರ್ಗಗಳನ್ನು ಅವರು ಸಮಾನ ಪ್ರಜೆಗಳಾಗಿ ಪರಿಗಣಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜು.25ರಂದು ನಡೆಯಲಿರುವ ಚುನಾವಣೆಯ ಭಾಗವಾಗಿ ಈ ಚುನಾವಣಾ ರ್ಯಾಲಿ ನಡೆದಿದೆ.