* ಹೈಟಿಯಲ್ಲಿ ಶನಿವಾರ ಸಂಭವಿಸಿದ ಭಾರಿ ಭೂಕಂಪ* ಹೈಟಿಯಲ್ಲಿ 7.4 ತೀವ್ರತೆಯ ಭೂಕಂಪ* 1,200ಕ್ಕೂ ಅಧಿಕ ಜನರ ಸಾವು

ಪೋರ್ಟ್‌-ಔ-ಪ್ರಿನ್ಸ್‌(ಆ..16): ಹೈಟಿಯಲ್ಲಿ ಶನಿವಾರ ಸಂಭವಿಸಿದ ಭಾರಿ ಭೂಕಂಪದಲ್ಲಿ 1,200ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಸುಮಾರು 2,800 ಜನರ ಗಾಯಗೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಶನಿವಾರ ರಾತ್ರಿ 6 ಬಾರಿ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 7.2ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನಕ್ಕೆ ಹೆದರಿದ ಜನರು ಮನೆಗಳು ಕುಸಿದು ಬೀಳುವ ಭಯದಿಂದ ರಸ್ತೆಗಳಲ್ಲಿ ಕಾಲ ಕಳೆದಿದ್ದಾರೆ.

ಈ ಭೂಕಂಪದ ಕೇಂದ್ರಬಿಂದು ರಾಜಧಾನಿಯಿಂದ 125 ಕಿ.ಮೀ ದೂರದಲ್ಲಿ ದಾಖಲಾಗಿತ್ತು ಎಂದು ಅಮೆರಿಕದ ಭೂ ವಿಜ್ಞಾನ ಸಂಸ್ಥೆ ತಿಳಿಸಿದೆ.

ಹೈಟಿಯ ಪ್ರಧಾನಿ ದ್ವೀಪದಾತ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ್ದು ಗಾಯಾಳುಗಳನ್ನು ರಕ್ಷಿಸಲಾಗುತ್ತಿದೆ ಎಂದು ಹೇಳಿದ್ದಾರೆ.