Computer Science ವಿದ್ಯಾರ್ಥಿನಿಯರಿಗೆ Googleನಿಂದ ಸ್ಕಾಲರ್‌ಶಿಪ್: ಇಲ್ಲಿದೆ ವಿವರ!

*2022-2023 ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿ ವೇತನ
*ಕಂಪ್ಯೂಟರ್‌ ಸೈನ್ಸ್‌ ಕೋರ್ಸ್‌ನಲ್ಲಿ ದಾಖಲಾದವರಿಗೆ ಅವಕಾಶ
*ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿರದವರಿಗೆ ಆದ್ಯತೆ

Google launches scholarship for women pursuing computer science degree

ಅಮೆರಿಕಾ (ನ.7) : ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಜಗತ್ತಿನ ಸುಪ್ರಸಿದ್ಧ ಟೆಕ್-ದೈತ್ಯ ಗೂಗಲ್ (Tech giant Google) ವಿದ್ಯಾರ್ಥಿ ವೇತನ ನೀಡುವ ಯೋಜನೆ ಆರಂಭಿಸಿದೆ. ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ (Computer Science) ವೃತ್ತಿಜೀವನವನ್ನು ಮುಂದುವರಿಸಲು ಬಯಸುವ ಮಹಿಳೆಯರಿಂದ ವಿದ್ಯಾರ್ಥಿವೇತನ  ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಜನರೇಷನ್ ಗೂಗಲ್ ಸ್ಕಾಲರ್‌ಶಿಪ್ ಫಾರ್‌ ವುಮೆನ್‌ (Generation Google Scholarship) ಇನ್  ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ವೇತನವು ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ  ಪದವಿಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ ನೆರವಾಗಲಿದೆ. 

ವೈದ್ಯಕೀಯ ಕೋರ್ಸುಗಳ ಶುಲ್ಕ ಏರಿಕೆ..? ಸರ್ಕಾರದ ಮುಂದೆ ಪ್ರಸ್ತಾವನೆ

ಆಯ್ಕೆಯಾದ ವಿದ್ಯಾರ್ಥಿಗಳು 2022-2023 ಶೈಕ್ಷಣಿಕ ವರ್ಷಕ್ಕೆ ಸುಮಾರು 75,000 ರೂ. ($1,000) ವಿದ್ಯಾರ್ಥಿ ವೇತನವನ್ನು ಪಡೆಯುತ್ತಾರೆ. ವಿದ್ಯಾರ್ಥಿಯ  ಶೈಕ್ಷಣಿಕ ಕಾರ್ಯಕ್ಷಮತೆ (Academic performance) ಆಧಾರದ ಮೇಲೆ ಸ್ಕಾಲರ್‌ಶಿಪ್ ನೀಡಲಾಗುತ್ತಿದೆ. ಅರ್ಜಿದಾರರು 2021-2022 ಶೈಕ್ಷಣಿಕ ವರ್ಷಕ್ಕೆ ಸ್ನಾತಕ ಪದವಿಯಲ್ಲಿ (Bachelor's Degree) ಪೂರ್ಣ ಸಮಯದ (Full time) ವಿದ್ಯಾರ್ಥಿಯಾಗಿ ದಾಖಲಾಗಿರಬೇಕು ಮತ್ತು ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಪೂರ್ಣಗೊಳಿಸುವಾಗ ಏಷ್ಯಾ ಪೆಸಿಫಿಕ್ (Asia Pacific) ದೇಶದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ಅಧ್ಯಯನದಲ್ಲಿರಬೇಕು.

ವಿದ್ಯಾರ್ಥಿ ವೇತನಕ್ಕೆ ಯಾರು ಅರ್ಜಿ ಹಾಕಬಹುದು?

*2021-2022 ಶೈಕ್ಷಣಿಕ ವರ್ಷಕ್ಕೆ (2021-2022  School Year) ಸ್ನಾತಕ  ಪದವಿಯಲ್ಲಿ ಪೂರ್ಣ ಸಮಯದ ವಿದ್ಯಾರ್ಥಿಯಾಗಿ ದಾಖಲಾಗಿರಬೇಕು
*ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಪೂರ್ಣಗೊಳಿಸುವಾಗ ಏಷ್ಯಾ ಪೆಸಿಫಿಕ್ ದೇಶದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ಅಧ್ಯಯನದಲ್ಲಿರಬೇಕು.
*ಕಂಪ್ಯೂಟರ್‌ ಸೈನ್ಸ್‌, ಕಂಪ್ಯೂಟರ್‌ ಇಂಜೀನಿಯರಿಂಗ್ (Engineering) ಅಥವಾ ಕಂಪ್ಯೂಟರ್‌ ಕ್ಷೇತ್ರಕ್ಕೆ ಸಂಬಂಧಪಟ್ಟ ಪದವಿ ಕೋರ್ಸ್‌ಗಳಲ್ಲಿ ದಾಖಲಾಗಿರಬೇಕು
*ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿರಬೇಕು ಹಾಗೂ ಶಾಲಾ-ಕಾಲೇಜು ಪರೀಕ್ಷೆಗಳಲ್ಲಿ ಕೂಡ ಅತ್ಯುತ್ತಮ ಪ್ರದರ್ಶನ ನೀಡಿರಬೇಕು
*ಉತ್ತಮ ನಾಯಕತ್ವ ಗುಣ ಮತ್ತು ಕಂಪ್ಯೂಟರ್‌ ವಿಜ್ಞಾನ ಕ್ಷೇತ್ರದಲ್ಲಿ ಹಿಂದುಳಿದಿರುವವರಿಗೆ ಬೆಂಬಲವಾಗಿ ನಿಲ್ಲಬಲ್ಲ ಇಚ್ಛಾಶಕ್ತಿ ಹೊಂದಿರಬೇಕು.

ಅರ್ಜಿ ಹಾಕುವುದು ಹೇಗೆ?

ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಈ  ದಾಖಲೆಗಳನ್ನು ನೀಡುವ ಮೂಲಕ ಗೂಗಲ್‌ನ ಅಧಿಕೃತ ವೆಬ್‌ಸೈಟ್ನಲ್ಲಿ (Website) ಅರ್ಜಿ ಸಲ್ಲಿಸಬಹುದು

*ಅಭ್ಯರ್ಥಿಯ ಬಗೆಗಿನ ಸಾಮಾನ್ಯ ಮಾಹಿತಿ ( ವಿದ್ಯಾಭ್ಯಾಸ ಮಾಡುತ್ತಿರುವ ಕಾಲೇಜು, ಮನೆ ವಿಳಾಸ ಮತ್ತು ಇತರ ಮಾಹಿತಿ)
*ಅಭ್ಯರ್ಥಿಯು ಈವರೆಗೂ ಭಾಗವಹಿಸಿರುವ ಪ್ರೋಜೆಕ್ಟ (Project) ಬಗ್ಗೆ ಮಾಹಿತಿ ಜತೆಗೆ ರೆಸ್ಯೂಮೆ (Resume)
*ಈಗ ವಿದ್ಯಾಭ್ಯಾಸ ಮಾಡುತ್ತಿರುವ ಸಂಸ್ಥೆ ಮತ್ತು ಈ ಹಿಂದೆ ಕಲಿತ ಕಾಲೇಜುಗಳ ಅಂಕ ಪಟ್ಟಿ (Marks Card)

NEET ಪರೀಕ್ಷೆಯಲ್ಲಿ ಪುತ್ತೂರಿನ ಸಿಂಚನಾ ಲಕ್ಷ್ಮೀ ಸಾಧನೆ, ರಾಘವೇಶ್ವರ ಶ್ರೀಗಳಿಂದ ಸನ್ಮಾನ

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕುವ ಅಭ್ಯರ್ಥಿಗಳು ಗೂಗಲ್‌ ಕೇಳುವ ಎರಡು ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಈ ಹಂತದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಗೂಗಲ್‌ ಮೀಟ್‌ (Google Meet) ಮೂಲಕ 15 ನಿಮಿಷದ ಸಂದರ್ಶನದಲ್ಲಿ ಭಾಗವಹಿಸಬೇಕು. ಜತೆಗೆ ಗೂಗಲ್‌ ಆನಲೈನ್‌ ಚಾಲೆಂಜ್‌ನ್ನು (Online Challenge) ಕೂಡ ಪೂರ್ಣಗೊಳಿಸಬೇಕು. ಅರ್ಜಿ ಸಲ್ಲಿಸಿದ 5 ರಿಂದ 7 ದಿನಗಳ ಒಳಗಾಗಿ ಈ ಚಾಲೆಂಜ್‌ ಅನ್ನು ಅಭ್ಯರ್ಥಿಗಳಿಗೆ ಕಳುಹಿಸಿ ಕೊಡಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ (last date for application) ದಿನಾಂಕ ಡಿಸೆಂಬರ್ 10‌, ಶುಕ್ರವಾರ ಎಂದು ಗೂಗಲ್‌ ತಿಳಿಸಿದೆ. ಹಾಗಾಗಿ ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 10, 2021 ರ ಮೊದಲು ' buildyourfuture.withgoogle.com/scholarships/generation-google-scholarship-apac ' ನಲ್ಲಿ ಅರ್ಜಿ ಸಲ್ಲಿಸಬಹದು. ಈ ಎಲ್ಲ ಹಂತಗಳನ್ನು ದಾಟಿ ಉತ್ತೀರ್ಣರಾಗುವ ಅಭ್ಯರ್ಥಿಗಳಿಗೆ ಗೂಗಲ್‌ ಸ್ಕಾಲರ್‌ಶಿಪ್ ಸಿಗಲಿದೆ.

Latest Videos
Follow Us:
Download App:
  • android
  • ios