* ಲಂಚ ಪಡೆಯುತ್ತಿದ್ದವರ ಬಣ್ಣ ಬಯಲು* ಟ್ರಾಫಿಕ್ ಪೊಲೀಸ್ ಅಧಿಕಾರಿಯ ಮನೆಯಲ್ಲಿ ಚಿನ್ನದ ಟಾಯ್ಲೆಟ್‌* ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ ಅಧಿಕಾರಿಗಳು

ಮಾಸ್ಕೋ(ಜು.24): ರಷ್ಯಾ ಅಧಿಕಾರಿಗಳು ಸಾವಿರಾರು ಡಾಲರ್‌ ಲಂಚ ಪಡೆಯುತ್ತಿದ್ದವರನ್ನು ಬಹಿರಂಗಪಡಿಸಿದ್ದು, ಇದರಲ್ಲಿ ಅನೇಕ ಟ್ರಾಫಿಕ್ ಪೊಲೀಸ್ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಆದರೆ ಈ ನಡುವೆ ಸಂಚಾರ ಪೊಲೀಸರ ಮುಖ್ಯಸ್ಥ ಶೌಚಾಲಯ ಮತ್ತು ಅವರ ಮನೆ ಸದ್ಯ ಎಲ್ಲರ ಗಮನ ಸೆಳೆದಿದೆ. ಹೌದು ಈ ಶೌಚಾಲಯ ಚಿನ್ನದಿಂದ ಮಾಡಲ್ಪಟ್ಟಿದೆ ಹಾಗೂ ನೆಲ ಅಮೃತಶಿಲೆಯಿಂದ ಮಾಡಲಾಗಿದೆ. ದ ಮಾಸ್ಕೋ ಟೈಮ್ಸ್ ವರದಿ ಅನ್ವಯ ಪೊಲೀಸ್ ಕರ್ನಲ್ ಅಲೆಕ್ಸಿ ಸಫೊನೊವ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಅವರು ದೋಷಿ ಎಂದು ಸಾಬೀತಾಗಿದೆ. ಹೀಗಾಗಿ ಜೈಲು ಪಾಲಾಗಿದ್ದಾರೆ. ತನಿಖಾ ಸಮಿತಿಯು ಸಫೊನೊವ್ ಮನೆ ಒಳಗಿನ ಭಾಗ ಹಾಗೂ ಐಷಾರಾಮಿ ವಾಹನಗಳನ್ನು ನಿಲ್ಲಿಸಿದ ಸೊಂಪಾದ ಹುಲ್ಲುಹಾಸುಗಳೊಂದಿಗೆ ಅವರ ಭವ್ಯ ನಿವಾಸದ ತುಣುಕನ್ನು ಬಿಡುಗಡೆ ಮಾಡಿತು.

ಈ ವಿಡಿಯೋದಲ್ಲಿ ಪೀಠೋಪಕರಣಗಳು, ವಾಲ್ ಆರ್ಟ್ ಚೌಕಟ್ಟುಗಳು ಮತ್ತು ಅಲಂಕಾರಿಕ ತುಣುಕುಗಳಲ್ಲಿ ಚಿನ್ನದ ವ್ಯಾಪಕ ಬಳಕೆಯೊಂದಿಗೆ ಅಸಾಮಾನ್ಯ ಒಳಾಂಗಣದ ದೃಶ್ಯವಿದೆ . ಅಲ್ಲದೇ ಅಡುಗೆಡ ಮನೆಯ ಪೀಠೋಪಕರಣಗಳು ಸಹ ಚಿನ್ನದಿಂದ ಮಾಡಲ್ಪಟ್ಟಿದೆ. ಮುಖ್ಯ ದ್ವಾರದ ಬದಿಯಲ್ಲಿ ಅತಿಥಿಗಳಿಗಾಗಿ ಒಂದು ಔಟ್‌ಹೌಸ್‌ ಕೂಡಾ ನಿರ್ಮಿಸಲಾಗಿದೆ.

ಹೀಗಿದ್ದರೂ ಶೌಚಾಲಯವನ್ನು ಚಿನ್ನದಿಂದ ಅಲಂಕರಿಸುವುದು ಅತ್ಯಂತ ಆಶ್ಚರ್ಯಕರ ಬಳಕೆಯಾಗಿದೆ.

YouTube video player

ಜುಲೈ 20 ರಂದು ಇದನ್ನು ನೀಡಲಾಗಿದೆ. ಐಷಾರಾಮಿ ರಿಯಲ್ ಎಸ್ಟೇಟ್ ಜಾಹೀರಾತಿನಂತೆ ಕಾಣುವ 49 ಸೆಕೆಂಡುಗಳ ಯೂಟ್ಯೂಬ್ ವಿಡಿಯೋ 3.45 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಜನರು ಸಹ ಇದರ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ.