Asianet Suvarna News Asianet Suvarna News

ಅಮೆರಿಕದಲ್ಲಿ 7 ಲಕ್ಷ ಜನರ ಸಾವು, 4.4 ಕೋಟಿ ಜನರಿಗೆ ಸೋಂಕು!

* ವಿಶ್ವದಲ್ಲಿ 50 ಲಕ್ಷ ದಾಟಿದ ಕೋವಿಡ್‌ ಮೃತರ ಸಂಖ್ಯೆ

* ಅಮೆರಿಕದಲ್ಲಿ 7 ಲಕ್ಷ ಜನರ ಸಾವು

* 4.4 ಕೋಟಿ ಜನರಿಗೆ ಸೋಂಕು, 1 ಕೋಟಿ ಸಕ್ರಿಯ ಸೋಂಕಿತರು

Global COVID 19 deaths hit 5 million US toll tops 7 lakh mark pod
Author
Bangalore, First Published Oct 3, 2021, 8:27 AM IST
  • Facebook
  • Twitter
  • Whatsapp

ವಾಷಿಂಗ್ಟನ್‌(ಅ.03): ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್‌ ಸಾಂಕ್ರಾಮಿಕಕ್ಕೆ(Covid 19) ತುತ್ತಾಗಿರುವ ಅಮೆರಿಕದಲ್ಲಿ(USA), ಸೋಂಕಿಗೆ ಬಲಿಯಾದವರ ಸಂಖ್ಯೆ ಇದೀಗ 7 ಲಕ್ಷ ದಾಟಿದೆ ಎಂದು ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ಪೈಕಿ 1 ಲಕ್ಷ ಜನರು ಕಳೆದ ಮೂರು ತಿಂಗಳಲ್ಲಿ ಸಾವನ್ನಪ್ಪಿದ್ದಾರೆ.

ಡೆಲ್ಟಾ(Delta) ಹಾವಳಿಯಿಂದಾಗಿ ದೇಶದಲ್ಲಿ ಮತ್ತೊಮ್ಮೆ ಸೋಂಕು(Covid 19) ಮತ್ತು ಸಾವು ಏರಿಕೆ ಕಂಡು, ನಿಧಾನವಾಗಿ ಇಳಿಕೆಯ ಹಾದಿಯಲ್ಲಿ ಸಾಗುತ್ತಿರುವ ಸುಳಿವುಗಳು ಲಭ್ಯವಾಗಿರುವ ಬೆನ್ನಲ್ಲೇ, 7 ಲಕ್ಷ ಜನರ ಸಾವಿನ ನೋವಿನ ಅಂಕಿ ಅಂಶಗಳು ಹೊರಬಿದ್ದಿವೆ.

ದೇಶದಲ್ಲಿ ಇದುವರೆಗೆ 4.4 ಕೋಟಿ ಜನರಿಗೆ ಸೋಂಕು ತಗುಲಿದ್ದು, 7 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಇನ್ನೂ ಅಂದಾಜು 1 ಕೋಟಿ ಸಕ್ರಿಯ ಸೋಂಕಿತರಿದ್ದಾರೆ. ಈ ಪೈಕಿ 20000 ಜನರ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆ ಇ್ನನಷ್ಟು ಏರುವ ಆತಂಕವೂ ಇದೆ.

ಈಗಲೂ ಅಮೆರಿಕದಲ್ಲಿ ನಿತ್ಯ ಸರಾಸರಿ 1.12 ಲಕ್ಷ ಕೇಸು ದಾಖಲಾಗುತ್ತಿದೆ 1800-1900 ಜನರು ಸಾವನ್ನಪ್ಪುತ್ತಿದ್ದಾರೆ. ಅಮೆರಿಕ 33 ಕೋಟಿ ಜನಸಂಖ್ಯೆ ಹೊಂದಿದ್ದು, ಇದುವರೆಗೆ 40 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ.

ವಿಶ್ವದಲ್ಲಿ 50 ಲಕ್ಷ ದಾಟಿದ ಕೋವಿಡ್‌ ಮೃತರ ಸಂಖ್ಯೆ

ವಿಶ್ವದಲ್ಲಿ ಕೋವಿಡ್‌ 19 ಸಾಂಕ್ರಾಮಿಕದಿಂದ ಸಾವೀಗೀಡಾವರ ಸಂಖ್ಯೆ 50 ಲಕ್ಷದಾಟಿದೆ. ಮೊದಲ 25 ಲಕ್ಷ ಸಾವುಗಳು ಒಂದು ವರ್ಷದ ಅವಧಿಯಲ್ಲಿ ಸಂಭವಿಸಿದ್ದರೆ, ನಂತರದ 25 ಲಕ್ಷ ಸಾವುಗಳು 8 ತಿಂಗಳಲ್ಲಿ ಘಟಿಸಿವೆ. ಕೋವಿಡ್‌ ಸೋಂಕಿನಿಂದಾಗಿ 2020ರ ಜನವರಿ 9ರಂದು ವುಹಾನ್‌ನಲ್ಲಿ ಮೊದಲ ಸಾವು ಸಂಭವಿಸಿತ್ತು. ಭಾರತದಲ್ಲಿ ಮೊದಲ ಕೋವಿಡ್‌ ಸಾವು 2020ರ ಮಾ.10ರಂದು ಕರ್ನಾಟಕದಲ್ಲಿ ಸಂಭವಿಸಿತ್ತು.

ಅತಿ ಹೆಚ್ಚಿನ ಸಾವಿನ ಟಾಪ್‌ 3 ದೇಶಗಳು

ಅಮೆರಿಕ 7.00 ಲಕ್ಷ

ಬ್ರೆಜಿಲ್‌ 5.97 ಲಕ್ಷ

ಭಾರತ 4.48 ಲಕ್ಷ

Follow Us:
Download App:
  • android
  • ios