ಜರ್ಮನ್(ಡಿ.13): ಕೊರೋನಾಗೆ ಲಸಿಕೆಯೊಂದೇ ಪರಿಹಾರವಲ್ಲ ಎಂದು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇತ್ತ ಲಸಿಕೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಿಲ್ಲ. ಇತ್ತ ಜನರು ಸಭೆ, ಸಮಾರಂಭ, ಹಬ್ಬಗಳಲ್ಲಿ ಕೊರೋನಾ ಮಾರ್ಗದರ್ಶನ ಮರೆತು ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೋನಾ ನಿಯಂತ್ರಣಕ್ಕೆ ಜರ್ಮನಿಯಲ್ಲಿ ಮತ್ತಷ್ಟು ಕಠಿಣ ಲಾಕ್‌ಡೌನ್ ಜಾರಿ ಮಾಡಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗೆ ಕೊರೋನಾ ದೃಢ!

ಕ್ರಿಸ್ಮಸ್ ಹಾಗೂ ಹೊಸ ವರ್ಷ ಕಾರಣ ಜರ್ಮನಿಯಲ್ಲಿ ಲಾಕ್‌ಡೌನ್ ನಿಯಮ ಮತ್ತಷ್ಟು ಬಿಗಿಗೊಳಿಸಲಾಗಿದೆ. ಡಿಸೆಂಬರ್ 16 ರಿಂದ ಜರ್ಮನಿಯ ಎಲ್ಲಾ ಶಾಲೆಗಳನ್ನು, ಶಾಪಿಂಗ್ ಮಳಿಗೆ, ಡೇ ಕೇರ್ ಸೆಂಟರ್‌ಗಳನ್ನು ಮುಚ್ಚುವಂತೆ ಜರ್ಮನ್ ಚಾನ್ಸೆಲರ್ ಎಂಜಲಾ ಮಾರ್ಕೆಲ್ ಸೂಚಿಸಿದ್ದಾರೆ.

ಜರ್ಮನಿಯಲ್ಲಿ ಕೊರೋನಾ ವೈರಸ್ ಎರಡನೇ ಅಲೆ ಆರಂಭಗೊಂಡಿದೆ. ಕೊರೋನಾ ನಿಯಂತ್ರಣಕ್ಕಾಗಿ ಕಟ್ಟು ನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ. ನೂತನ ಮಾರ್ಗಸೂಚಿ ಹಾಗೂ ನಿರ್ಬಂಧಗಳು ಜನವರಿ 10ವರೆಗೆ ಜಾರಿಯಲ್ಲಿರಲಿದೆ ಎಂದು ಮಾರ್ಕೆಲ್ ಹೇಳಿದ್ದಾರೆ.

ಹೊಸ ಮಾರ್ಗಸೂಚಿ:

  • ದಿನಸಿ, ಹಣ್ಣು, ತರಕಾರಿ, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿ ಹೊರತು ಪಡಿಸಿದರೆ ಇತರ ಎಲ್ಲಾ ಅಂಗಡಿ, ಮಳಿಗೆಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ.
  • ಶಾಲಾ ಮಕ್ಕಳಿಗೆ ರಜೆ ನೀಡಲಾಗಿದೆ. ಕ್ರಿಸ್ಮಸ್ ರಜೆಯನ್ನು ಜನವರಿ 10ರ ವರೆಗೆ ವಿಸ್ತರಿಸಲಾಗಿದೆ. ಇನ್ನು ಆನ್‌ಲೈನ್ ಕ್ಲಾಸ್ ಮುಂದುವರಿಸಲು ಸೂಚಿಸಲಾಗಿದೆ. 
  • ಡೇಕೇರ್ ಸೆಂಟರ್ ಮುಚ್ಚಲು ಸೂಚಿಸಲಾಗಿದೆ.  ಇನ್ನು ಮಕ್ಕಳ ಪೋಷಕರು ವೇತನ ಸಹಿತ ರಜೆ ಪಡೆದು ಮಕ್ಕಳ ನೋಡಿಕೊಳ್ಳಲು ಸೂಚಿಸಲಾಗಿದೆ.
  • ಸಾಧ್ಯವಾದಷ್ಟು ಮನೆಯಿಂದ ಕೆಲಸ(ವರ್ಕ್ ಫ್ರಮ್ ಹೋಮ್) ಉತ್ತೇಜಿಸಲು ಹಾಗೂ ಮುಂದುವರಿಸಲು ಸೂಚಿಸಲಾಗಿದೆ
  • ಚರ್ಚ್, ಮಸೀದಿಗಳಲ್ಲಿ ಪ್ರಾರ್ಥನೆಗೆ ಕಟ್ಟು ನಿಟ್ಟಿನ ಮಾರ್ಗಸೂಚಿ ಪ್ರಕಟಿಸಿದೆ. ನಿಯಮ ಉಲ್ಲಂಘಿಸಿದರೆ ಪ್ರಾರ್ಥನೆಗೆ ಅವಕಾಶವಿಲ್ಲ