ಸೇನೆ ಹಿಂಪಡೀರಿ: ಮಾಲ್ಡೀವ್ಸ್ ಅಧ್ಯಕ್ಷನಿಂದ ಭಾರತಕ್ಕೆ ಸೂಚನೆ :ಹಳೆಯ ನೆರವು ಮರೆತ ಮುಯಿಜ್

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಾರನೇ ದಿನವೇ ನಿಮ್ಮ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳಿ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ ಭಾರತಕ್ಕೆ ಸೂಚಿಸಿದ್ದಾರೆ. 

forgot the old aid from India Maldives President Muiz asked India to Withdraw Indian Army akb

ಮಾಲೆ: ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಾರನೇ ದಿನವೇ ನಿಮ್ಮ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳಿ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ ಭಾರತಕ್ಕೆ ಸೂಚಿಸಿದ್ದಾರೆ. 

ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಭಾರತದ ಪ್ರತಿನಿಧಿಯಾಗಿ ಆಗಮಿಸಿದ್ದ ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಮೂಲಕ ಈ ಸಂದೇಶ ರವಾನಿಸಲಾಗಿದೆ. ಈ ಹಿಂದೆ ಸುನಾಮಿ, ಆಂತರಿಕ ಸಂಘರ್ಷ ಮೊದಲಾದ ಸಂದರ್ಭಗಳಲ್ಲಿ ಭಾರತವೇ ಮೊದಲನೆಯದಾಗಿ ಮಾಲ್ಡೀವ್ಸ್‌ಗೆಗೆ ವಿವಿಧ ರೀತಿಯ ನೆರವು ನೀಡಿತ್ತು. ಆದರೆ ಅದನ್ನು ಮರೆತಿರುವ ಮಾಲ್ಡೀವ್ಸ್‌ ನ ನೂತನ ಅಧ್ಯಕ್ಷ ಚೀನಾ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

'ಹಿಂದೂ ಮಹಾಸಾಗರದ ಆಯಕಟ್ಟಿನ ಪ್ರದೇಶದಲ್ಲಿರುವ ಮಾಲೀವ್‌ಗೆ ಭಾರತ ಹಲವು ಸೇನಾ ಕಾಪ್ಟರ್, ಕಣ್ಣಾವಲು ವಿಮಾನಗಳನ್ನು ಉಡುಗೊರೆ ನೀಡಿದೆ. ಇದರ ನಿರ್ವಹಣೆಗೆಂದೇ ಅಂದಾಜು 75 ಯೋಧರು ಮಾಲ್ಡೀವ್ಸ್‌ನಲ್ಲಿ ಬೀಡುಬಿಟ್ಟಿದ್ದಾರೆ. ಆದರೆ ಇದೀಗ ಇದು ಭದ್ರತೆಗೆ ಅಪಾಯ ಎಂಬ ಕಾರಣ ನೀಡಿದೆ.

Latest Videos
Follow Us:
Download App:
  • android
  • ios