Asianet Suvarna News Asianet Suvarna News

Decline In Population: ಶತಮಾನದಗಳಲ್ಲೇ ಮೊದಲ ಬಾರಿ ವಿಶ್ವದ ಜನಸಂಖ್ಯೆ ಇಳಿಮುಖ!

* ಶತಮಾನದಲ್ಲೇ ಮೊದಲ ಬಾರಿ ಜನಸಂಖ್ಯೆಯಲ್ಲಿ ಕುಸಿತ

* 2100 ರ ವೇಳೆಗೆ 8.8 ಶತಕೋಟಿಗೆ ಇಳಿಯುತ್ತದೆ ಎಂದ ವರದಿ

* ಅಂದು ಕಪ್ಪು ಪ್ಲೇಗ್ ಕಾರಣದಿಂದ ಕುಸಿದಿತ್ತು ಜನಸಂಖ್ಯೆ

For The First Time In Centuries, The World Population Is Set To Decline pod
Author
Bangalore, First Published Dec 8, 2021, 9:25 AM IST

ನವದೆಹಲಿ(ಡಿ.08): ಶತಮಾನಗಳಲ್ಲಿ ಮೊದಲ ಬಾರಿಗೆ, ವಿಶ್ವದ ಜನಸಂಖ್ಯೆಯು (Decline In Population) ಕೆಲವು ದಶಕಗಳಲ್ಲಿ ಅವನತಿಯ ಹಾದಿಯಲ್ಲಿದೆ. ಪ್ರಸ್ತುತ, ಜಗತ್ತಿನಲ್ಲಿ ಸುಮಾರು 7.8 ಶತಕೋಟಿ ಜನರಿದ್ದಾರೆ ಮತ್ತು 2064 ರಲ್ಲಿ ಈ ಸಂಖ್ಯೆಯು ಗರಿಷ್ಠ ಮಟ್ಟವನ್ನು ತಲುಪುವ ನಿರೀಕ್ಷೆಯಿದೆ. ದಿ ಲ್ಯಾನ್ಸೆಟ್‌ನಲ್ಲಿ (The Lancet) ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ಗರಿಷ್ಠ ಸರಿಸುಮಾರು 9.7 ಬಿಲಿಯನ್ ಆಗಿರುತ್ತದೆ ಮತ್ತು 2100 ರ ವೇಳೆಗೆ 8.8 ಶತಕೋಟಿಗೆ ಇಳಿಯುತ್ತದೆ.

ಲೀಡ್ ಅಧ್ಯಯನ ಲೇಖಕ ಮತ್ತು ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನ (IHME) ನಲ್ಲಿ ಗ್ಲೋಬಲ್ ಹೆಲ್ತ್ ಪ್ರೊಫೆಸರ್, ಸ್ಟೀನ್ ಎಮಿಲ್ ವೋಲ್ಸೆಟ್, IFLScience ಗೆ ಈ ಬಗ್ಗೆ ಮಾಹಿತಿ ನೀಡುತ್ತಾ, "ಕಳೆದ ಬಾರಿ ಜಾಗತಿಕ ಜನಸಂಖ್ಯೆಯು 14 ನೇ ಶತಮಾನದ ಮಧ್ಯಭಾಗದಲ್ಲಿ ಕಪ್ಪು ಪ್ಲೇಗ್ ಕಾರಣದಿಂದ ಕುಸಿದಿತ್ತು. ನಮ್ಮ ಮುನ್ಸೂಚನೆ ಸರಿಯಾಗಿದೆ, ಸಾಂಕ್ರಾಮಿಕ ಅಥವಾ ಕ್ಷಾಮದಂತಹ ಘಟನೆಗಳಿಗೆ ವಿರುದ್ಧವಾಗಿ, ಫಲವತ್ತತೆಯ ಕುಸಿತದಿಂದ ಮೊದಲ ಬಾರಿ ಜನಸಂಖ್ಯೆ ಕುಸಿತವಾಗುತ್ತದೆ' ಎಂದಿದ್ದಾರೆ.

World Inequality Report 2022: ಭಾರತ ವಿಶ್ವದ ಅತೀ ಹೆಚ್ಚು ಅಸಮಾನತೆ ಹೊಂದಿರುವ ದೇಶ!

23 ದೇಶಗಳ ಜನಸಂಖ್ಯೆಯು ಅರ್ಧಕ್ಕಿಂತ ಹೆಚ್ಚು ಕುಗ್ಗಬಹುದು ಎಂದು ವರದಿ ಉಲ್ಲೇಖಿಸಿದೆ. ಜಪಾನ್, ಥೈಲ್ಯಾಂಡ್, ಸ್ಪೇನ್, ಇಟಲಿ, ಪೋರ್ಚುಗಲ್ ಮತ್ತು ದಕ್ಷಿಣ ಕೊರಿಯಾ ಇದರಲ್ಲಿ ಅಗ್ರ ಸ್ಥಾನದಲ್ಲಿವೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ಕೂಡ 2017 ರಲ್ಲಿ 1.4 ಶತಕೋಟಿ ಜನರಿಂದ 2100 ರಲ್ಲಿ 732 ಮಿಲಿಯನ್‌ಗೆ ಇಳಿಯಬಹುದು.

"ಆಧುನಿಕ ಗರ್ಭನಿರೋಧಕಗಳ ಪ್ರವೇಶದಲ್ಲಿ ಸುಧಾರಣೆಗಳು ಮತ್ತು ಹುಡುಗಿಯರು ಮತ್ತು ಮಹಿಳೆಯರ ಶಿಕ್ಷಣ ಇದರ ಎರಡು ಪ್ರಮುಖ ಅಂಶಗಳಾಗುವೆ" ಎಂದಿ ವೋಲ್ಸೆಟ್ ಹೇಳಿದರು.

ಈ ಅಂಶಗಳು ಫಲವತ್ತತೆಯ ದರವನ್ನು ಹೆಚ್ಚಿಸುತ್ತವೆ 

"ಮಹಿಳೆಯು ತನ್ನ ಜೀವಿತಾವಧಿಯಲ್ಲಿ ಪಡೆದ ಮಕ್ಕಳ ಸರಾಸರಿ ಸಂಖ್ಯೆಯು ಜನಸಂಖ್ಯೆಯ ಅತಿದೊಡ್ಡ ನಿರ್ಣಾಯಕವಾಗಿದೆ. ಜಾಗತಿಕ ಒಟ್ಟು ಫಲವತ್ತತೆ ದರವು 2017 ರಲ್ಲಿ 2.37 ರಿಂದ 2100 ರಲ್ಲಿ 1.66 ಕ್ಕೆ ಸ್ಥಿರವಾಗಿ ಕುಸಿಯುತ್ತದೆ ಎಂದು ಊಹಿಸಲಾಗಿದೆ. ಜನಸಂಖ್ಯೆಯ ಸಂಖ್ಯೆಯನ್ನು ಕಾಪಾಡಿಕೊಳ್ಳಲು ಕನಿಷ್ಠ ದರ (ಪ್ರತಿ ಮಹಿಳೆಗೆ 2.1 ಜೀವಂತ ಜನನಗಳು) ಅಗತ್ಯವೆಂದು ಪರಿಗಣಿಸಲಾಗಿದೆ" ಎಂದು ಅವರು ಹೇಳಿದರು. 

ಲ್ಯಾನ್ಸೆಟ್‌ನ ಪ್ರಧಾನ ಸಂಪಾದಕ ಡಾ ರಿಚರ್ಡ್ ಹಾರ್ಟನ್ ಹೇಳಿಕೆಯಲ್ಲಿ "21 ನೇ ಶತಮಾನವು ನಮ್ಮ ಮಾನವ ನಾಗರಿಕತೆಯ ಕಥೆಯಲ್ಲಿ ಕ್ರಾಂತಿಯನ್ನು ನೋಡುತ್ತದೆ. ಆಫ್ರಿಕಾ ಮತ್ತು ಅರಬ್ ಪ್ರಪಂಚವು ನಮ್ಮ ಭವಿಷ್ಯವನ್ನು ರೂಪಿಸುತ್ತದೆ, ಆದರೆ ಯುರೋಪ್ ಮತ್ತು ಏಷ್ಯಾ ಹಿಮ್ಮೆಟ್ಟುತ್ತದೆ. ಅವರ ಪ್ರಭಾವದಿಂದ, ಶತಮಾನದ ಅಂತ್ಯದ ವೇಳೆಗೆ, ಪ್ರಪಂಚವು ಬಹು ಧ್ರುವೀಯವಾಗಿರುತ್ತದೆ, ಭಾರತ, ನೈಜೀರಿಯಾ, ಚೀನಾ ಮತ್ತು ಯುಎಸ್ ಪ್ರಬಲ ಶಕ್ತಿಗಳಾಗುತ್ತವೆ. ಇದು ನಿಜವಾಗಿಯೂ ಹೊಸ ಜಗತ್ತಾಗಿರುತ್ತದೆ, ನಾವು ಇಂದು ಈ ನಿಟ್ಟಿನಲ್ಲಿ ತಯಾರಿ ನಡೆಸಬೇಕು" ಎಂದಿದ್ದಾರೆ.

ಜನಸಂಖ್ಯೆ ಕುಸಿತ ಭೀತಿ: ಚೀನಾದಲ್ಲಿ ಇನ್ನು 3 ಮಕ್ಕಳ ಹೆರುವ ಅವಕಾಶ!

 

ಜನಸಂಖ್ಯೆ ಹೆಚ್ಚಾಗಿ 1980ರ ದಶಕದಲ್ಲಿ ಕುಟುಂಬಕ್ಕೆ ಒಂದೇ ಮಗು ನೀತಿ ಜಾರಿಗೆ ತಂದಿದ್ದ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶ ಚೀನಾದಲ್ಲಿ ಇದೀಗ ಜನಸಂಖ್ಯೆ ಕೊರತೆ ಭೀತಿ ಎದುರಾಗಿದೆ. ಹೀಗಾಗಿ 5 ವರ್ಷಗಳ ಹಿಂದೆ ದೇಶದ ಬಹುತೇಕ ದಂಪತಿಗೆ 2 ಮಗು ಹೊಂದಲು ಅವಕಾಶ ಕಲ್ಪಿಸಿದ್ದ ಸರ್ಕಾರ, ಇದೀಗ ಆ ಮಿತಿಯನ್ನು ಮೂರಕ್ಕೆ ಹೆಚ್ಚಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಸೋಮವಾರ ಇಲ್ಲಿ ನಡೆದ ಪಕ್ಷದ ಪಾಲಿಟ್‌ ಬ್ಯೂರೋ ಸಭೆಯಲ್ಲಿ ಇಂಥದ್ದೊಂದು ನಿರ್ಧಾರ ಕೈಗೊಳ್ಳಲಾಗಿದೆ.. ಜೊತೆಗೆ 3 ಮಕ್ಕಳನ್ನು ಹೆರುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದೂ ಹೇಳಿದೆ.

ನಂ.1 ಚೀನಾಕ್ಕೆ ಇದೀಗ ಜನಸಂಖ್ಯೆ ಕುಸಿತ ಭೀತಿ!

ನೀತಿಗೆ ಕಾರಣ ಏನು?:

1980ರ ದಶಕದಲ್ಲಿ ಚೀನಾ ಜನಸಂಖ್ಯೆ 100 ಕೋಟಿ ಸಮೀಪಕ್ಕೆ ಬಂದಾಗ, ಸರ್ಕಾರ ಕುಟುಂಬಕ್ಕೆ ಒಂದೇ ಮಗು ನೀತಿ ಜಾರಿಗೆ ತಂದಿತ್ತು. ಪರಿಣಾಮ, ನಂತರದ ವರ್ಷಗಳಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗಿ ಯುವಸಮೂಹದ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಪ್ರಸ್ತಕ 140 ಕೋಟಿ ಜನಸಂಖ್ಯೆ ಹೊಂದಿರುವ ಚೀನಾ 2022ರ ವೇಳೆಗೆ ತನ್ನ ಗರಿಷ್ಠ ಮಟ್ಟಮುಟ್ಟಿ, ಬಳಿಕ ಜನಸಂಖ್ಯೆಯಲ್ಲಿ ಇಳಿಕೆ ಕಾಣಲಿದೆ. ಇದು ಭವಿಷ್ಯದಲ್ಲಿ ಭಾರೀ ಸಮಸ್ಯೆಗೆ ಕಾರಣವಾಗಲಿದೆ ಎಂದು ಇತ್ತೀಚಿನ ವರದಿಯೊಂದು ಎಚ್ಚರಿಸಿತ್ತು. ದಶಕದ ಹಿಂದೆ ದುಡಿಯುವ ವರ್ಗ ಎಂದು ಗುರುತಿಸಲಾಗುವ 15-59ರ ವಯೋಮಿತಿ ಜನರ ಪ್ರಮಾಣವು ಒಟ್ಟು ಜನಸಂಖ್ಯೆಯಲ್ಲಿ ಶೇ.70ರಷ್ಟುಇದ್ದಿದ್ದು, ಕಳೆದ ವರ್ಷ ಶೇ.63ಕ್ಕೆ ಇಳಿದಿತ್ತು. ಇನ್ನು ಇದೇ ಅವಧಿಯಲ್ಲಿ 65 ವರ್ಷ ಮೇಲ್ಪಟ್ಟವರ ಪ್ರಮಾಣವು ಶೇ.8.9ರಿಂದ ಶೇ.13.5ಕ್ಕೆ ಹೆಚ್ಚಿತ್ತು.

ಹುಟ್ಟೋ ಮೂರನೇ ಮಗುವಿಗೆ ದಂಡ ಹಾಕಿ, ಜೈಲಿಗೆ ಕಳ್ಸಿ ಎಂದ ಕಂಗನಾ

ಈ ಹಿನ್ನೆಲೆಯಲ್ಲಿ 2016ರಲ್ಲಿ 2 ಮಗು ಹೊಂದಲು ಅವಕಾಶ ಕಲ್ಪಿಸಿದ್ದ ಸರ್ಕಾರ, ಅದನ್ನು 3ಕ್ಕೆ ಹೆಚ್ಚಿಸುವ ನಿರ್ಧಾರಕ್ಕೆ ಬಂದಿದೆ. ಅಲ್ಲದೆ ಉದ್ಯೋಗ ಕುಸಿತ, ಮಕ್ಕಳ ಪೋಷಣೆ ಹೊರಲಾರದೇ ಬಹುತೇಕ ಯುವಜೋಡಿಗಳು 1 ಮಗುವಿಗೆ ಸೀಮಿತವಾಗುತ್ತಿರುವ ಹಿನ್ನೆಲೆಯಲ್ಲಿ 2 ಮತ್ತು ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೆರುವ ದಂಪತಿಗೆ ಆರ್ಥಿಕ ನೆರವನ್ನೂ ನೀಡಲು ಸರ್ಕಾರ ನಿರ್ಧರಿಸಿದೆ.

Follow Us:
Download App:
  • android
  • ios