Asianet Suvarna News Asianet Suvarna News

Swiss approved painless death: ಸಾಯುವುದು ಇನ್ನು ಭಾರೀ ಸುಲಭ, ಮಾತ್ರೆ ತೆಗೆದುಕೊಂಡರೆ ಸರಿ!

  • ಇಚ್ಛಾಮರಣ ಪ್ರಾಪ್ತಿಗೆ ನೆರವಾಗುವ ಕ್ಯಾಪ್ಸೂಲ್‌ಗೆ ಸ್ವಿಜರ್ಲೆಂಡ್‌ ಓಕೆ
  • ಕ್ಯಾಪ್ಸೂಲ್‌ ಒಳಗೆ ಪ್ರವೇಶಿಸಿದ 1 ನಿಮಿಷದಲ್ಲಿ ಸಾವು
  • ಮುಂದಿನ ವರ್ಷದಿಂದಲೇ ಈ ‘ಸೇವೆ’ ಜನರಿಗೆ ಲಭ್ಯ ಸಾಧ್ಯತೆ
for painless death Sarco machine passing legal scrutiny in Switzerland akb
Author
Bangalore, First Published Dec 8, 2021, 6:48 AM IST

ಬರ್ನ್‌(ಡಿ.8): ಅತ್ತ ಬದುಕಲೂ ಆಗದೆ, ಇತ್ತ ಸಾಯುವ ಹಾದಿ ಸಿಗದೆ  ಪರಿತಪಿಸುವ ಜೀವಗಳು ಕೊನೆಗೆ ‘ದಯಾಮರಣ’ ಎಂಬ ಕನ್ನಡಿಯೊಳಗಿನ ಗಂಟನ್ನು ಹುಡುಕುತ್ತಾ ಹೊರಡುತ್ತವೆ. 'ಸಾವಿನ ಭಿಕ್ಷೆ' ಬೇಡುತ್ತಾ ಹೊರಟವರಿಗೆ ಗೌರವಯುತ ಸಾವು ಸಿಗುವುದು ಭಾರತ ಸಹಿತ ಹಲವು ದೇಶಗಳ ಕಾನೂನಿನಲ್ಲಿ ಸಾಧ್ಯವೇ ಇಲ್ಲ. ಆದರೆ ಸ್ವಿಜರ್ಲೆಂಡ್‌(Switzerland)ನಲ್ಲಿ ಇದು ಸಾಧ್ಯವಿದೆ. ಯಾವುದೇ ನೋವು, ತೊಳಲಾಟವಿಲ್ಲದೆ ಕೇವಲ ಒಂದೇ ನಿಮಿಷದಲ್ಲಿ ಸುಖವಾದ ಸಾವು ಕಾಣಬೇಕೇ? ಹಾಗಿದ್ದರೆ, ಸ್ವಿಜರ್ಲೆಂಡ್‌ಗೆ ಹೋಗಬೇಕು. ಏಕೆಂದರೆ, ‘ಇಚ್ಛಾ’ ಮರಣ ಸಾಧ್ಯವಾಗಿಸುವ ‘ಕಾಫಿನ್‌’ ಮಾದರಿಯ ಸಾರ್ಕೊ(Sarco) ಕ್ಯಾಪ್ಸೂಲ್‌ಗೆ ಸ್ವಿಜರ್ಲೆಂಡ್‌ನಲ್ಲಿ ಈಗ ಕಾನೂನು ಮಾನ್ಯತೆ ಸಿಕ್ಕಿದೆ. ಹೌದು. ಅಚ್ಚರಿ ಎನ್ನಿಸಿದರೂ ನಿಜ. ಈಗಾಗಲೇ ಎಲ್ಲಾ ಕಾನೂನು ಪರೀಕ್ಷೆಗಳಲ್ಲಿ ಪಾಸ್‌ ಆಗಿರುವ ಈ ಸಾಧನದ ಸೇವೆ ಮುಂದಿನ ವರ್ಷದಿಂದಲೇ ಸಾರ್ವಜನಿಕರಿಗೆ ಲಭ್ಯವಾಗುವ ಸಾಧ್ಯತೆಯಿದೆ.

ಕ್ಯಾಪ್ಸೂಲ್‌ ಕೆಲಸ ಹೇಗೆ?:

ಇಚ್ಛಾ ಮರಣಕ್ಕೆ ಇಚ್ಛಿಸುವ ವ್ಯಕ್ತಿಗಳು ಸಾರ್ಕೊ ಹೆಸರಿನ ಕ್ಯಾಪ್ಸೂಲ್‌ ಸೇವಿಸಿದ ಬಳಿಕ ಉಸಿರಾಡಲು ದೇಹದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ. ತನ್ಮೂಲಕ ರಕ್ತದಲ್ಲಿ ಕಾರ್ಬನ್‌ ಡೈ ಆಕ್ಸೈಡ್‌(Carbon dioxide) ಅನ್ನು ಈ ಕ್ಯಾಪ್ಸೂಲ್‌ ಹೆಚ್ಚಿಸುತ್ತದೆ. ಇದರಿಂದ ವ್ಯಕ್ತಿಯ ಸರಳ ಸಾವು ಸಂಭವಿಸುತ್ತದೆ. ಈ ಪ್ರಕ್ರಿಯೆ ಕೇವಲ ಒಂದೇ ನಿಮಿಷದಲ್ಲಿ ಮುಕ್ತಾಯವಾಗುತ್ತದೆ. ಹೀಗಾಗಿ ಈ ಸಾಧನದಲ್ಲಿ ಯಾವುದೇ ನೋವು ಮತ್ತು ತೊಳಲಾಟವಿಲ್ಲದೆ ಸಾವು ಸಂಭವಿಸುತ್ತದೆ ಎಂಬುದು ಈ ಸಾಧನ ಅಭಿವೃದ್ಧಿಪಡಿಸಿದವರ ಹೇಳಿಕೆ.

1300 ಜನರ ಇಚ್ಛಾಮರಣ!:

ವಿಶ್ವದ ಹಲವು ದೇಶಗಳಲ್ಲಿ ದಯಾಮರಣ, ಇಚ್ಛಾ ಮರಣ ಹಾಗೂ ಇವು ಸಂಭವಿಸಲು ನೆರವಾಗುವ ಸಾಧನಗಳ ಬಗ್ಗೆ ಒಂದೆಡೆ ಚರ್ಚೆ ನಡೆಯುತ್ತಿದೆ. ಇದೇ ವೇಳೆ, ಸುದೀರ್ಘ ಅನಾರೋಗ್ಯ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಬಳಲುವವರಿಗೆ ವೈದ್ಯರ ಸಲಹೆ ಮೇರೆಗೆ ಅಥವಾ ಇಚ್ಛಾ ಮರಣಕ್ಕೆ ಕೆಲ ದೇಶಗಳಲ್ಲಿ ಅನುಮತಿಯಿದೆ. ಸ್ವಿಜರ್ಲೆಂಡ್‌ನಲ್ಲಿ ವೈದ್ಯರ ಸಲಹೆಯೊಂದಿಗೆ ಇಚ್ಛಾ ಮರಣಕ್ಕೆ ಕಾನೂನು ಮಾನ್ಯತೆಯಿದೆ. ಕಳೆದ ವರ್ಷವೊಂದರಲ್ಲೇ ಸ್ವಿಜರ್ಲೆಂಡ್‌ನಲ್ಲಿ ಸುಮಾರು 1300 ಮಂದಿ ಈ ಸೇವೆ ಪಡೆದಿದ್ದಾರೆ.

ಕ್ಯಾಪ್ಸೂಲ್‌ ಶೋಧಿಸಿದ್ದು ಯಾರು?:

‘ಡಾ. ಡೆತ್‌’ ಎಂದೇ ಜನಪ್ರಿಯರಾಗಿದ್ದ ಡಾ.ಫಿಲಿಪ್‌ ನಿಟ್‌ಶ್ಕೇ(Dr. Philip Nitschke) ಅವರು ಈ ‘ಸಾರ್ಕೊ ಕ್ಯಾಪ್ಸೂಲ್‌’ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಇದರ ಮೇಲ್ಭಾಗದ ನೋಟವು ಸಮಾಧಿಯಂತಿದೆ. ಈ ಕ್ಯಾಪ್ಸೂಲ್‌ ಆಮ್ಲಜನಕವನ್ನು ಸ್ಥಳಾಂತರಿಸುವ ಸಾರಜನಕವನ್ನು ಒಳಗೊಂಡಿದೆ. ಹೀಗಾಗಿ ಈ ಕ್ಯಾಪ್ಸೂಲ್‌ ಸೇವಿಸುವ ವ್ಯಕ್ತಿ ಕೇವಲ ಒಂದು ನಿಮಿಷದಲ್ಲಿ ಸಾವಿಗೀಡಾಗುತ್ತೇನೆ.

3 ವರ್ಷದ ಹಿಂದೆ 104 ವರ್ಷದ ವಿಜ್ಞಾನಿ ಇಚ್ಛಾಮರಣ!

2018ರಲ್ಲಿ ಆಸ್ಪ್ರೇಲಿಯಾದ 104 ವರ್ಷದ ವಿಜ್ಞಾನಿ ಡೇವಿಡ್‌ ಗುಡಾಲ್‌(David Goodall) ಇಚ್ಛಾಮರಣಕ್ಕೆಂದೇ ಕಾನೂನುಬದ್ಧ ಅವಕಾಶವಿರುವ ಸ್ವಿಜರ್ಲೆಂಡ್‌ಗೆ ಬಂದಿದ್ದರು. ಆತ್ಮಹತ್ಯಾ ಕ್ಲಿನಿಕ್‌ಗೆ 8 ಲಕ್ಷ ರೂ. (8000 ಪೌಂಡ್‌) ಶುಲ್ಕ ನೀಡಿ ವಿಷದ ಇಂಜೆಕ್ಷನ್‌ ಪಡೆದು ಸಾವನ್ನಪ್ಪಿದ್ದರು.  102  ವರ್ಷದವರೆಗೆ ಸಂಶೋಧನಾ  ಕ್ಷೇತ್ರದಲ್ಲಿ ಕೆಲಸ ಮಾಡಿ ನಿವೃತ್ತರಾದ ಡಾ| ಗುಡಾಲ್ ಅವರಿಗೆ 104 ನೇ ವರ್ಷದಲ್ಲಿ ಜೀವನ ಸಾಕು ಎನ್ನಿಸಿದೆ. ಆರೋಗ್ಯದ ಸಮಸ್ಯೆಯಿರುವುದರಿಂದ ಅವರು  ಮರಣಹೊಂದಲು ಬಯಸಿದ್ದರು. 

ಆದರೆ, ಆಸ್ಟ್ರೇಲಿಯಾ ಸರ್ಕಾರ ಅನುಮತಿ ನೀಡಲಿಲ್ಲ. ಹೀಗಾಗಿ ಇಚ್ಛಾಮರಣಕ್ಕೆ ಕಾನೂನುಬದ್ಧವಾಗಿ ಅವಕಾಶವಿರುವ ಸ್ವಿಜರ್‌ಲೆಂಡ್‌ಗೆ ಬಂದು ಆತ್ಮಹತ್ಯಾ ಕ್ಲಿನಿಕ್ ಗೆ 7 ಲಕ್ಷ ರು. (8000 ಪೌಂಡ್) ಶುಲ್ಕ ನೀಡಿ ಸಾವನ್ನಪ್ಪಿದ್ದಾರೆ. ಆಸ್ಟ್ರೇಲಿಯಾದಿಂದ ಇಲ್ಲಿಗೆ ಬರುವುದೂ ಸೇರಿದಂತೆ ಒಟ್ಟಾರೆ ಅವರು 9 (10 ಸಾವಿರ ಪೌಂಡ್) ಲಕ್ಷ ರು. ವೆಚ್ಚ ಮಾಡಿದ್ದಾರೆ. ಈ ಹಣವನ್ನು ಅವರು ಕ್ರೌಡ್ ಫಂಡಿಂಗ್(Crowd Funding) ಮೂಲಕ ಸಂಗ್ರಹಿಸಿದ್ದರು. ಲೀಸಲ್‌ನಲ್ಲಿರುವ ಕ್ಲಿನಿಕ್‌ನಲ್ಲಿ ನೆಂಬುಟಾಲ್(Nembutal) ಎಂಬ ತೀವ್ರ ವಿಷದ ಇಂಜೆಕ್ಷನ್‌ ಅನ್ನು ಗುಡಾಲ್ ಅವರಿಗೆ ನೀಡಿ ಅವರ ಜೀವನವನ್ನು ಕೊನೆಗೊಳಿಸಲಾಗಿತ್ತು.

Follow Us:
Download App:
  • android
  • ios