ಲಸಿಕೆ ನೀಡಲು ಸರ್ಕಾರಿ ಕ್ಲಿನಿಕ್‌ಗಳು, ಖಾಸಗಿ ವೆಚ್ಚವೂ ಸರ್ಕಾರದ್ದೇ!
* ಸರ್ಕಾರಿ ಕ್ಲಿನಿಕ್ ಗಳ ಮುಖೇನ ಲಸಿಕೆ ನೀಡಲು ಮುಂಧಾದ ಮಲೇಷಿಯಾ
* ಜೂನ್ ಅಂತ್ಯದೊಳಗೆ ದೇಶದಲ್ಲಿ ಸಾವಿರ ಕ್ಲಿನಿಕ್ ಗಳು
* ಖಾಸಗಿ ಆಸ್ಪತ್ರೆಗಳ ಮೂಲಕವೂ ಲಸಿಕೆ
* ಎಲ್ಲ ವೆಚ್ಚಗಳನ್ನು ಸರ್ಕಾರವೇ ನೋಡಿಕೊಳ್ಳಲಿದೆ
ಮಲೇಷಿಯಾ(ಮೇ 30) ಕೊರೋನಾ ಲಸಿಕೆ ವಿತರಣೆಗೆ ಮಲೇಷಿಯಾ ಸರ್ಕಾರ ದಿಟ್ಟ ಹೆಜ್ಜೆಯೊಂದನ್ನು ಇಟ್ಟಿದೆ. ಜೂನ್ 15 ರಿಂದ ದೇಶಾದ್ಯಂತ 500 ಲಸಿಕೆ ನೀಡಿಕೆ ಕ್ಲಿನಿಕ್ ಆರಂಭ ಮಾಡಲಾಗುವುದು ಎಂದು ಹೇಳಿದೆ.
ಕೊರೋನಾ ಲಸಿಕೆ ಜವಾಬ್ದಾರಿ ಹೊತ್ತಿರುವ ಸಚಿವ ಖೈರಿ ಜಮಾಲುದ್ದೀನ್ ಕ್ಲಿನಿಕ್ ಆರಂಭದ ಮಾಹಿತಿ ನೀಡಿದ್ದಾರೆ. ಜೂನ್ 30 ರೊಳಗೆ ಈ ಕ್ಲಿನಕ್ ಗಳ ಸಂಖ್ಯೆ ಸಾವಿರಕ್ಕೆ ಏರಿಸಲಾಗುವುದು ಎಂದು ತಿಳಿಸಿದ್ದಾರೆ.
ಸರ್ಕಾರಿ ಕ್ಲಿನಕ್ ಗಳ ಜತೆ ಖಾಸಗಿ ಆಸ್ಪತ್ರೆಗಳೂ ಲಸಿಕೆ ನೀಡಿಕೆ ಕೆಲಸ ಮುಂದುವರಿಸಿಕೊಂಡು ಹೋಗಲಿವೆ. ದಿನಕ್ಕೆ 40 ಸಾವಿರ ಡೋಸ್ ನೀಡಿಕೆ ಗುರಿ ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಭಾರತಕ್ಕೆ 12 ಟನ್ ಚಹಾ, ಕಾಫಿ, ನೆಲಗಡಲೆ ಕಳಿಸಿಕೊಟ್ಟ ಕೀನ್ಯಾ
ಸರ್ಕಾರವೇ ಎಲ್ಲ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ನೀಡುವ ವೆಚ್ಚವನ್ನು ನೋಡಿಕೊಳ್ಳಲಿದೆ. ಆಡಳಿತವನ್ನು ಮಾಥ್ರ ಅವರು ನೋಡಿಕೊಂಡರೆ ಸಾಕು. ಸದ್ಯ 2500 ಸರ್ಕಾರಿ ಕ್ಲಿನಿಕ್ ಗಳು ಲಸಿಕೆ ನೀಡುತ್ತಿವೆ ಎಂದು ತಿಳಿಸಿದ್ದಾರೆ.
ನೋಂದಣಿ ಮಾಡಿಕೊಳ್ಳುವ ಕ್ರಮವನ್ನು ಸುಧಾರಿಸಲಾಗಿದೆ. ಲಸಿಕಾ ಕೇಂದ್ರದಲ್ಲಿಯೇ ನೋಂದಣಿ ಮಾಡಿಕೊಂಡು ತಕ್ಷಣವೇ ಲಸಿಕೆ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
"