ಸೌರಮಂಡಲದಾಚೆಯಿಂದ ಮೊದಲ ರೇಡಿಯೋ ಸಿಗ್ನಲ್!| ನೆದರ್ಲೆಂಡ್ ಟೆಲಿಸ್ಕೋಪ್‌ನಿಂದ ಶೋಧ
ವಾಷಿಂಗ್ಟನ್(ಡಿ.19): ಸೌರ ಮಂಡಲದ ಆಚೆ ಇರುವ ಗ್ರಹವೊಂದರಿಂದ ಸಂಭಾವ್ಯ ರೇಡಿಯೋ ಸಿಗ್ನಲ್‌ವೊಂದು ಬರುತ್ತಿರುವುದನ್ನು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಪತ್ತೆ ಹಚ್ಚಿದೆ. ಈ ರೇಡಿಯೋ ಸಿಗ್ನಲ್‌ನ ಮೂಲ 51 ಜ್ಯೋತಿರ್ವರ್ಷಗಳಷ್ಟುದೂರವಿದೆ ಎಂದು ಅಂದಾಜಿಸಲಾಗಿದೆ.
ನೆದರ್ಲೆಂಡ್‌ನಲ್ಲಿರುವ ‘ಲೋ ಫ್ರೀಕ್ವೆನ್ಸಿ ಅರ್ರೆ’ (ಲೋಫಾರ್) ಎಂಬ ರೇಡಿಯೋ ಟೆಲಿಸ್ಕೋಪ್ ಬಳಸಿ ಟೌ ಬೂಟ್ಸ್ ಎಂಬ ನಕ್ಷತ್ರ ವ್ಯವಸ್ಥೆಯಿಂದ ರೇಡಿಯೋ ಸಿಗ್ನಲ್ ಬರುತ್ತಿದೆ ಎಂಬುದನ್ನು ವಿಜ್ಞಾನಿಗಳು ಶೋಧಿಸಿದ್ದಾರೆ.
ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ಸಂಶೋಧಕರು ಬೇರೊಂದು ಕಡೆಯಿಂದ ರೇಡಿಯೋ ಸಿಗ್ನಲ್ ಬರುತ್ತಿದೆ ಎಂದು ಹೇಳಿದ್ದರು. ಆದರೆ ಖಗೋಳಶಾಸ್ತ್ರ ಹಾಗೂ ಖಭೌತಶಾಸ್ತ್ರ ಜರ್ನಲ್‌ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯ ಪ್ರಕಾರ, ಈ ರೇಡಿಯೋ ಸಿಗ್ನಲ್ ಬರುತ್ತಿರುವುದು ಸೌರ ಮಂಡಲದಾಚೆ ಇರುವ ಟೌ ಬೂಟ್ಸ್ ಎಂಬ ವ್ಯವಸ್ಥೆಯಿಂದ ಎಂದು ಹೇಳಲಾಗಿದೆ.
