* ಟೆಸ್ಲಾ ಸ್ಥಾಪಕ ನೀವಲ್ಲ ಎಂದಿದ್ದ* ವೈಭವ್ ಬೆಂಗಳೂರು ಟೆಕ್ಕಿ ಅನುಮಾನಕ್ಕೆ ಟೆಸ್ಲಾ ಮಾಲೀಕ ಮಸ್ಕ್ ಉತ್ತರ* ಗ್ರೋತ್‌ಸ್ಕೂಲ್ ಸಂಸ್ಥಾಪಕ ಬೆಂಗಳೂರು ಮೂಲದ ವೈಭವ್ ಸಿಸಿಂತಿ
ನ್ಯೂಯಾರ್ಕ್(ಏ.24): ಎಲಾನ್ ಮಸ್ಕ್ ಟೆಸ್ಲಾ ಕಂಪನಿಯ ಸಂಸ್ಥಾಪಕರಲ್ಲ. ಅವರು ಅದನ್ನು ಆಕ್ರಮಿಸಿಕೊಂಡರು ಎಂದು ಟ್ವೀಟ್ ಮಾಡಿದ್ದ ಬೆಂಗಳೂರು ಮೂಲದ ವ್ಯಕ್ತಿಗೆ ಸ್ವತಃ ಎಲಾನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ. ಗ್ರೋತ್‌ಸ್ಕೂಲ್ ಸಂಸ್ಥಾಪಕ ಬೆಂಗಳೂರು ಮೂಲದ ವೈಭವ್ ಸಿಸಿಂತಿ ಎಂಬವರು ‘ನೆನಪಿರಲಿ, ಎಲಾನ್ ಮಸ್ಕ್ ಟೆಸ್ಲಾದ ಸಂಸ್ಥಾಪಕರಲ್ಲ, ಅವರು ಅದನ್ನು ಸ್ವಾಧೀನಪಡಿಸಿಕೊಂಡಿದ್ದಾರಷ್ಟೇ’ ಎಂದು ಟ್ವೀಟ್ ಮಾಡಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಸ್ಕ್, ಎಲೆಕ್ಟ್ರಿಕಲ್ ವಾಹನ ತಯಾರಿಕಾ ಕಂಪನಿ ಟೆಸ್ಲಾ ಆರಂಭ ಹೇಗಾಯಿತು ಎಂದು ವಿವರಿಸಿದ್ದಾರೆ.
ಈ ಬಗ್ಗೆ ಬ್ಲಾಗ್ ಬರೆದಿರುವ ಮಸ್ಕ್ , ‘ಇದೊಂದು ಉದ್ಯೋಗಿಗಳೇ ಇರದ ಶೆಲ್ ಕಾಪ್‌ರ್ ಆಗಿತ್ತು. ಐಪಿ ಇರಲಿಲ್ಲ, ವಿನ್ಯಾಸ ಇರಲಿಲ್ಲ, ಯಾವುದೇ ಮಾದರಿಯೂ ಇರಲಿಲ್ಲ. ಅಕ್ಷರಶಃ ಏನೇನೂ ಇರಲಿಲ್ಲ, ಆದರೆ ಎಸಿ ಹೊಂದಿರುವ ಟಿ-ಜೀರೋ ಕಾರನ್ನು ಉತ್ಪಾದಿಸುವ ಯೋಚನೆ ಇತ್ತು. ಇದನ್ನು ನನಗೆ ಜೆ.ಬಿ.ಸ್ಟ್ರಾಬೆಲ್ ಪರಿಚಯಿಸಿದರು. ಟೆಸ್ಲಾ ಮೋಟಾರ್ಸ್ ಹೆಸರೂ ಸಹ ಇತರರ ಒಡೆತನದಲ್ಲಿತ್ತು!’ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಟೆಸ್ಲಾ ಕಂಪನಿಯಲ್ಲಿ ನಾನು ಹೂಡಿಕೆ ಮಾಡಿರಲಿಲ್ಲ. ಒಂದು ಟ್ರಿಲಿಯನ್ ಡಾಲರ್‌ಗಳ ಮೌಲ್ಯದೊಂದಿಗೆ ಸ್ಟ್ರಾಬೆಲ… ಮತ್ತು ಇತರರು ಒಂದು ಕಂಪನಿಯನ್ನು ಸ್ಥಾಪಿಸಿದರು. ಅದರು ಮುಂದೆ ವಿಶ್ವದ ಅತಿ ದೊಡ್ಡ ವಾಹನ ತಯಾರಿಕಾ ಕಂಪನಿಯಾಗಿ ಬೆಳೆಯಿತು ಎಂದು ತಿಳಿಸಿದ್ದಾರೆ.
3 ಲಕ್ಷ ಕೋಟಿ ರು.ಗೆ ಟ್ವೀಟರ್ ಖರೀದಿಸಲು ಮಸ್ಕ್ ಆಫರ್!
ಜಗತ್ತಿನ ನಂ.1 ಶ್ರೀಮಂತ ಎಲಾನ್ ಮಸ್‌್ಕ ಅವರು ಹೆಸರಾಂತ ಸಾಮಾಜಿಕ ಮಾಧ್ಯಮ ‘ಟ್ವೀಟರ್’ ಖರೀದಿಗೆ ಮುಂದಾಗಿದ್ದಾರೆ. ಇದಕ್ಕಾಗಿ ಅವರು ಕಂಪನಿಗೆ 3 ಲಕ್ಷ ಕೋಟಿ ರು. ನೀಡುವ ಆಫರ್ ನೀಡಿದ್ದಾರೆ.
ಪ್ರಸ್ತುತ ಟ್ವೀಟರ್‌ನಲ್ಲಿ ಶೇ.9ರಷ್ಟುಷೇರು ಹೊಂದಿರುವ ಟೆಸ್ಲಾ ಸಿಇಒ ಮಸ್‌್ಕ ಟ್ವೀಟರ್‌ನ ನಿರ್ದೇಶಕ ಮಂಡಳಿಗೆ ಸೇರಲು ನಿರಾಕರಿಸಿದ ಕೆಲವು ದಿನಗಳಲ್ಲೇ ಇಡೀ ಕಂಪನಿಯನ್ನು ಖರೀದಿಸಲು ಆಫರ್ ನೀಡಿದ್ದಾರೆ.
ಟ್ವೀಟರ್‌ನಲ್ಲಿ ಈಗಾಗಲೇ ಅತಿ ಹೆಚ್ಚು ಷೇರುಗಳನ್ನು ಹೊಂದಿರುವ ಮಸ್‌್ಕ ಉಳಿದ ಷೇರುಗಳನ್ನು ಪ್ರತಿ ಷೇರಿಗೆ 4,100 ರು. ನೀಡುವ ಮೂಲಕ ಖರೀದಿಸುವ ಆಫರ್ ನೀಡಿದ್ದಾರೆ. ‘ಈ ಬೆಲೆ ಅತ್ಯುತ್ತಮ ಮತ್ತು ಅಂತಿಮ. ಒಂದು ವೇಳೆ ನನ್ನ ಆಫರ್ ನಿರಾಕರಿಸಿದರೆ ಬೇರೆ ಯೋಚನೆ ಮಾಡಬೇಕಾದೀತು’ ಎಂದು ಎಚ್ಚರಿಕೆ ಧಾಟಿಯಲ್ಲಿ ಮಾತನಾಡಿದ್ದಾರೆ.
‘ಜಗತ್ತಿನಾದ್ಯಂತ ಮುಕ್ತ ಮಾತುಕತೆಗೆ ವೇದಿಕೆಯಾಗಬಹುದು ಎಂಬ ಕಾರಣಕ್ಕೆ ನಾನು ಟ್ವೀಟರ್‌ನಲ್ಲಿ ಹೂಡಿಕೆ ಮಾಡಿದ್ದೇನೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಮುಕ್ತ ಮಾತುಕತೆ ಅವಶ್ಯಕವಾಗಿದೆ. ಆದರೆ ಟ್ವೀಟರ್ ಈಗಿರುವ ರೂಪದಲ್ಲಿ ಈ ಸಾಮಾಜಿಕ ಅಗತ್ಯವನ್ನು ಪೂರೈಸುವುದಿಲ್ಲ. ಟ್ವೀಟರ್‌ನ್ನು ಒಂದು ಖಾಸಗಿ ಕಂಪನಿಯಾಗಿ ಪರಿವರ್ತಿಸುವ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.
