ವಿಶ್ವದ ಶ್ರೀಮಂತ ಎಲಾನ್ ಮಸ್ಕ್ ಇದೀಗ ಮಹತ್ವದ ಘೋಷಣೆ ಮಾಡಿದ್ದಾರೆ. ಎಲಾನ್ ಮಸ್ಕ್ ಸ್ಪೇಸ್ಎಕ್ಸ್ ಸಂಸ್ಥೆ ಷೇರುಗಳ ಮೌಲ್ಯ ಗಗನಕ್ಕೇರುತ್ತಿದೆ. ಇದರ ಬೆನ್ನಲ್ಲೇ ಮುಂದಿನ ವರ್ಷ ಪ್ರತಿ ಮಗುವಿಗೆ ಸ್ಪೇಸ್ಎಕ್ಸ್ ಷೇರು ಹಂಚುವುದಾಗಿ ಘೋಷಿಸಿದ್ದಾರೆ.

ನ್ಯೂಯಾರ್ಕ್ (ಅ.19) ಎಲಾನ್ ಮಸ್ಕ್ ಇತ್ತೀಚೆಗೆ ಭಾರತದಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. ಸ್ಟಾರ್ ಲಿಂಕ್ ಭಾರತ ಪ್ರವೇಶ ಕುರಿತು ಮಾಡಿದ ಟ್ವೀಟ್ ಕೋಲಾಹಲ ಸೃಷ್ಟಿಸಿತ್ತು. ಇದೀಗ ಎಲಾನ್ ಮಸ್ಕ್ ಮಾಡಿದ ಘೋಷಣೆ ವಿಶ್ವದಲ್ಲೇ ಭಾರಿ ಸಂಚಲನ ಸೃಷ್ಟಿಸಿದೆ. ಮುಂದಿನ ವರ್ಷದಿಂದ ಎಲಾನ್ ಮಸ್ಕ್, ಪ್ರತಿ ಮಗುವಿಗೆ ಸ್ಪೇಸ್ಎಕ್ಸ್ ಸಂಸ್ಥೆಯ ಒಂದು ಷೇರು ಉಚಿತವಾಗಿ ಪಡೆಯಲಿದ್ದಾರೆ. ಒಂದು ಕಂಡೀಷನ್ ಅಂದರೆ ಅಮೆರಿಕದ ಮಗುವಿಗೆ ಈ ಆಫರ್ ನೀಡಲಾಗಿದೆ.

ಎಕ್ಸ್ ಮೂಲಕ ಸ್ಪೇಸ್ ಎಕ್ಸ್ ಷೇರು ಹಂಚಿಕೆ ಘೋಷಣೆ

ಸ್ಪೇಸ್ಎಕ್ಸ್ ಸಂಸ್ಥೆಯ ಒಂದು ಷೇರನ್ನು ಅಮೆರಿಕ ಪ್ರತಿ ಮಗುವಿಗೆ ಮುಂದಿನ ವರ್ಷ ನೀಡಲಾಗುತ್ತಿದೆ. ಇತಿಹಾಸದಲ್ಲೇ ಮೊದಲ ಪ್ರಯತ್ನ ಎಂದು ಎಲಾನ್ ಮಸ್ಕ್ ಹೇಳಿಕೊಂಡಿದ್ದಾರೆ. ಸದ್ಯ ಅಮೆರಿಕದಲ್ಲಿ 18 ವರ್ಷದೊಳಗಿನ 72 ಮಿಲಿಯನ್ ಮಕ್ಕಳಿದ್ದಾರೆ. ಪ್ರತಿ ಮಗುವಿಗೆ ಒಂದು ಎದರೂ 72 ಮಿಲಿಯನ್ ಷೇರುಗಳು ಹಂಚಬೇಕಿದೆ.

ಸ್ಪೇಸ್ಎಕ್ಸ್ ಜೂನ್ 12ರಂದು ಷೇರುಮಾರುಕಟ್ಟೆಯಲ್ಲಿ ಹಂಗಾಮ ಸೃಷ್ಟಿಸಿತ್ತು. ಸ್ಪೆಸ್ಎಕ್ಸ್‌ನಲ್ಲಿ ಎಲಾನ್ ಮಸ್ಕ್ 6.42 ಬಿಲಿಯನ್ ಷೇರು ಹೊಂದಿದ್ದಾರೆ. ಎಲಾನ್ ಮಸ್ಕ್ ಸ್ಪೆಸ್ಎಕ್ಸ್ ಶೇಕಡಾ 82ರಷ್ಟು ವೋಟಿಂಗ್ ಪವರ್ ಹೊಂದಿದ್ದಾರೆ. ಕಾರಣ ಸ್ಪೇಸ್ ಎಕ್ಸ್ ಸಂಸ್ಥೆಯಲ್ಲಿ ಎಲಾನ್ ಮಸ್ಕ್ ಷೇರುಗಳು. ಷೇರುಗಳ ಪೈಕಿ 849.5 ಮಿಲಿಯನ್ ಕ್ಲಾಸ್ ಎ ಷೇರುಗಳು, 3.92 ಬಿಲಿಯನ್ ಕ್ಲಾಸ್ ಬಿ ಷೇರುಗಳು, 1.30 ಬಿಲಿಯನ್ ನಿರ್ಬಂಧಿತ ಕ್ಲಾಸ್ ಬಿ ಷೇರು ಹಾಗೂ 250 ಮಿಲಿಯನ್ ಕ್ಲಾಸ್ ಬಿ ಷೇರುಗಳನ್ನು ಹೊಂದಿದ್ದಾರೆ. ಸ್ಪೇಸ್ ಎಕ್ಸ್ ಮಾರುಕಟ್ಟೆ ಮೌಲ್ಯ 2 ಟ್ರಿಲಿಯನ್ ಅಮೆರಿಕನ್ ಡಾಲರ್.

ಕ್ಲೌಡ್ ಎಐ ಮಾತೃಸಂಸ್ಥೆ ಆ್ಯಂಥ್ರೋಪಿಕ್ ಇತ್ತೀಚೆಗೆ ತನ್ನ ಸಂಸ್ಥೆಯ ಈಕ್ವಿಟಿಯನ್ನು ಸಾರ್ವಜನಿಕರಿಗೆ ಹಂಚುವುದಾಗಿ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಎಲಾನ್ ಮಸ್ಕ್ ವಿಶೇಷ ಘೋಷಣೆ ಮೂಲಕ ಮಕ್ಕಳಿಗೆ ಸ್ಪೇಸ್ ಎಕ್ಸ್ ಷೇರು ಹಂಚುವುದಾಗಿ ಹೇಳಿದ್ದಾರೆ. ಎಲಾನ್ ಮಸ್ಕ್ ಘೋಷಣೆಯಿಂದ ಅಮೆರಿಕದ ಮಕ್ಕಳ ಫೋಷಕರು ಖುಷಿಯಾಗಿದ್ದಾರೆ. ದೈತ್ಯ ಸ್ಪೇಸ್ ಎಕ್ಸ್‌ನಲ್ಲಿ ಒಂದು ಷೇರು ಅತ್ಯಂತ ಮೌಲ್ಯುತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂಟರ್ನೆಟ್‌ನಲ್ಲಿ ಹರಿದಾಡಿದ ಮೀಮ್ಸ್

ಎಲಾನ್ ಮಸ್ಕ್ ಘೋಷಣೆ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ ಹರಿದಾಡುತ್ತಿದೆ. ಈ ಕುರಿತು ಹಲವರು ನಾನು ಈಗಲೂ ಅಮೆರಿಕದಲ್ಲಿ ಮಗುವಾಗಿದ್ದೇನೆ ಎಂದು ಕಮೆಂಟ್ಸ್ ಮಾಡಿದ್ದಾರೆ. ಇದೇ ವೇಳೆ ಎಲಾನ್ ಮಸ್ಕ್ ಸ್ಮಾರ್ಟ್ ಇದ್ದಾರೆ. ಮುಂದಿನ ಅಮೆರಿಕ ಚುನಾವಣೆ ಮುಂದಿಟ್ಟು ಹೊಸ ತಂತ್ರ ಮಾಡಿದ್ದಾರೆ. ಮತ ಕೊಡಿ ಎಂದು ಕೇಳಲಿಲ್ಲ. ಕೇವಲ ಒಂದು ಷೇರು ನೀಡಿ ಇಡೀ ಅಮೆರಿಕದ ಮತ ಗಳಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.