ಈಜಿಪ್ಟ್‌ನಲ್ಲೂ ಇಸ್ರೇಲಿಗಳ ಹತ್ಯೆ: ಪೊಲೀಸ್ ಸಿಬ್ಬಂದಿಯಿಂದಲೇ ಗುಂಡಿನ ದಾಳಿ
ಅಲೆಕ್ಸಾಂಡ್ರಿಯಾದಲ್ಲಿ ಇಸ್ರೇಲಿ ಪ್ರವಾಸಿಗರ ಮೇಲೆ ಈಜಿಪ್ಟ್ ಪೊಲೀಸ್ ಗುಂಡು ಹಾರಿಸಿದ್ದು, ಕನಿಷ್ಠ ಇಬ್ಬರು ಇಸ್ರೇಲಿಗಳು ಮತ್ತು ಒಬ್ಬ ಈಜಿಪ್ಟಿನವರು ಬಲಿಯಾಗಿದ್ದಾರೆ ಎಂದು ಈಜಿಪ್ಟ್‌ನ ಆಂತರಿಕ ಸಚಿವಾಲಯ ವರದಿ ಮಾಡಿದೆ.

ಕೈರೋ (ಅಕ್ಟೋಬರ್ 8, 2023): ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿ 2ನೇ ದಿನಕ್ಕೆ ಕಾಲಿಟ್ಟಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸಹ ಯುದ್ಧ ಸಾರಿದೆ. ಆದರೆ, ಈ ಎರಡು ದೇಶಗಳ ನಡುವೆ ಅಷ್ಟೇ ಅಲ್ಲದೆ, ಈಜಿಪ್ಟ್‌ನಲ್ಲೂ ಇಸ್ರೇಲಿಗರ ಮೇಲೆ ದಾಳಿಯಾಗಿದೆ. ಈ ವೇಳೆ ಮೂವರು ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈಜಿಪ್ಟ್‌ನ ಮೆಡಿಟರೇನಿಯನ್ ನಗರವಾದ ಅಲೆಕ್ಸಾಂಡ್ರಿಯಾದಲ್ಲಿ ಇಸ್ರೇಲಿ ಪ್ರವಾಸಿಗರ ಮೇಲೆ ಈಜಿಪ್ಟ್ ಪೊಲೀಸ್ ಗುಂಡು ಹಾರಿಸಿದ್ದು, ಕನಿಷ್ಠ ಇಬ್ಬರು ಇಸ್ರೇಲಿಗಳು ಮತ್ತು ಒಬ್ಬ ಈಜಿಪ್ಟಿನವರು ಬಲಿಯಾಗಿದ್ದಾರೆ ಎಂದು ಈಜಿಪ್ಟ್‌ನ ಆಂತರಿಕ ಸಚಿವಾಲಯ ವರದಿ ಮಾಡಿದೆ. ಈಜಿಪ್ಟ್ ಭದ್ರತಾ ಏಜೆನ್ಸಿಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವ ಎಕ್ಸ್‌ಟ್ರಾ ನ್ಯೂಸ್ ಟೆಲಿವಿಷನ್ ಚಾನೆಲ್, ಅಲೆಕ್ಸಾಂಡ್ರಿಯಾದ ಪಾಂಪೀಸ್ ಪಿಲ್ಲರ್ ಸೈಟ್‌ನಲ್ಲಿ ನಡೆದ ದಾಳಿಯಲ್ಲಿ ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ಅಪರಿಚಿತ ಭದ್ರತಾ ಅಧಿಕಾರಿಯನ್ನು ಉಲ್ಲೇಖಿಸಿದ್ದಾರೆ.
ಇದನ್ನು ಓದಿ: ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧ ಎಫೆಕ್ಟ್: ಚಿನ್ನಕ್ಕೆ ಡಿಮ್ಯಾಂಡ್ ಮತ್ತಷ್ಟು ಹೆಚ್ಚಳ! ಷೇರು ಮಾರುಕಟ್ಟೆ ಕತೆ ಏನು?
ಇನ್ನು, ಶಂಕಿತ ದಾಳಿಕೋರನನ್ನು ಬಂಧಿಸಲಾಗಿದೆ ಎಂದೂ ಹೇಳಿದರು. ಭದ್ರತಾ ಪಡೆಗಳು ದಾಳಿಯ ಸ್ಥಳವನ್ನು ತ್ವರಿತವಾಗಿ ಸುತ್ತುವರೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ವಿಡಿಯೋಗಳು ಕನಿಷ್ಠ ಮೂರು ಆಂಬ್ಯುಲೆನ್ಸ್‌ಗಳು ಮೃತಪಟ್ಟವರನ್ನು ಆಸ್ಪತ್ರೆಗಳಿಗೆ ಕರೆದೊಯ್ಯುತ್ತಿರುವುದನ್ನು ತೋರಿಸಿದೆ. ಜನರು ಪೊಲೀಸ್ ತಡೆಗೋಡೆಯ ಹಿಂದೆ ನೋಡುತ್ತಿರುವುದು ಸಹ ಕಂಡುಬಂದಿದೆ.
ಅಲೆಕ್ಸಾಂಡ್ರಿಯಾದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್‌ನ ಝಕಾ ರಕ್ಷಣಾ ಸೇವೆ ಸಹ ವರದಿ ಮಾಡಿದೆ. ಗಾಜಾದಿಂದ ಪ್ರಮುಖ ಆಕ್ರಮಣದ ನಂತರ ಇಸ್ರೇಲ್ ಪ್ಯಾಲೆಸ್ತೀನ್ ಉಗ್ರಗಾಮಿಗಳೊಂದಿಗೆ ಹೋರಾಡುತ್ತಿರುವಾಗ ಭಾನುವಾರದ ದಾಳಿ ನಡೆದಿದೆ. ಈಜಿಪ್ಟ್ ದಶಕಗಳ ಹಿಂದೆ ಇಸ್ರೇಲ್‌ನೊಂದಿಗೆ ಶಾಂತಿಯ ಒಪ್ಪಂದ ಮಾಡಿಕೊಂಡಿತು ಮತ್ತು ಇಸ್ರೇಲಿ - ಪ್ಯಾಲೆಸ್ತೀನ್ ಸಂಘರ್ಷದಲ್ಲಿ ಮಧ್ಯವರ್ತಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದೆ. ಆದರೆ ಈಜಿಪ್ಟ್‌ನಲ್ಲಿ, ವಿಶೇಷವಾಗಿ ಹಿಂಸಾಚಾರದ ಸಮಯದಲ್ಲಿ ಇಸ್ರೇಲಿ ವಿರೋಧಿ ಭಾವನೆ ಹೆಚ್ಚಾಗಿರುತ್ತದೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧಕ್ಕೆ 500ಕ್ಕೂ ಹೆಚ್ಚು ಜನ ಮಾರಣಹೋಮ: ಎಲ್ಲೆಲ್ಲೂ ಬೆಂಕಿಯ ಜ್ವಾಲೆ, ನಾಗರಿಕರ ಸ್ಥಿತಿ ಅಯೋಮಯ!
ಯುಕೆಯಲ್ಲೂ ಇಸ್ರೇಲ್ ಮೆಲ ಹಮಾಸ್ ದಾಳಿ ನಡೆಸಿರುವುದಕ್ಕೆ ಸಂಭ್ರಮಾಚರಣೆ ಮಾಡಿದ್ದಾರೆ ಎಂದೂ ವರದಿಯಾಗಿದೆ. ಇಸ್ರೇಲ್ ಮೇಲಿನ ದಾಳಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಪ್ರಧಾನಿ ಮೋದಿ ಸೇರಿ ಅನೇಕರು ಖಂಡಿಸಿದ್ದು, ಯಹೂದಿಗಳ ರಾಷ್ಟ್ರಕ್ಕೆ ಬೆಂಬಲವನ್ನೂ ಕೋರಿದ್ದಾರೆ.
ಇದನ್ನೂ ಓದಿ: ಇಸ್ರೇಲ್ ಮೇಲೆ ದಿಢೀರ್ ಯುದ್ಧ ಸಾರಿದ ಹಮಾಸ್ ಉಗ್ರರು: 5,000 ಕ್ಕೂ ಹೆಚ್ಚು ರಾಕೆಟ್ ಸುರಿಮಳೆ