ದುಬೈ(ಆ. 16): ದುಬೈ ರಾಜಕುಮಾರ ಹಾಗೂ ಕಾರ್ಯಕಾರಿ ಪರಿಷದ್‌ನ ಅಧ್ಯಕ್ಷ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್ ತನ್ನ ಕಾರಿನ ವಿಂಡ್‌ಶೀಲ್ಡ್‌ನಲ್ಲಿ ಹಕ್ಕಿಯೊಂದು ಗೂಡು ಕಟ್ಟಿದ ಬಳಿಕ ತನ್ನ ಮರ್ಸಿಡೀಸ್ ಎಸ್‌ಯುವಿ ಬಳಸುವುದನ್ನೇ ನಿಲ್ಲಿಸಿದ್ದಾರೆ. ಸದ್ಯ ಅವರು ತಮ್ಮ ಕಾರಿನ ವಿಡಿಯೋ ಒಂದನ್ನು ಸೇರ್ ಮಾಡಿಕೊಂಡಿದ್ದು, ಇಲ್ಲಿ ಹಕ್ಕಿ ಪುಟ್ಟ ಮರಿಗಳಿಗೆ ಜನ್ಮ ನೀಡಿ, ಆರೈಕೆ ಮಾಡುತ್ತಿರುವ ದೃಶ್ಯಗಳಿವೆ. 

ಇನ್ಸ್ಆ ಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಕ್ರೌನ್ ಪ್ರಿನ್ಸ್ ಆ ಹಕ್ಕಿ ಹಾಗೂ ಅವುಗಳ ಮರಿಯನ್ನು ತೋರಿಸಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿರುವ ರಾಜಕುಮಾರ ಶೇಖ್ ಹಮ್ದಾನ್ ಕೆಲವೊಮ್ಮೆ ಪುಟ್ಟ ಪುಟ್ಟ ವಿಚಾರಗಳೂ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಬರೆದಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ.

 
 
 
 
 
 
 
 
 
 
 
 
 
 
 

A post shared by Fazza (@faz3) on Aug 12, 2020 at 5:57am PDT

ಮೊಟ್ಟೆಯೊಳಗಿನಿಂದ ಹೊರ ಬರುವ ಮರಿಗಳು ತನ್ನ ತಾಯಿಯೊಂದಿಗೆ ಆಟವಾಡುತ್ತಿರುವ ದೃಶ್ಯಗಳು ಈ ವಿಡಿಯೋದಲ್ಲಿವೆ.

ಪಾರಿವಾಳ ರಾಜಕುಮಾರನ ಕಾರಿನ ಮೇಲೆ ಗೂಡು ಕಟ್ಟಲು ನಿರ್ಧರಿಸಿತ್ತು. ಈ ವಿಚಾರ ಗಮನಕ್ಕೆ ಬಂದ ಬೆನ್ನಲ್ಲೇ ರಾಜಕುಮಾರ ಕಾರನ್ನು ಒಂದೆಡೆ ಪಾರ್ಕ್ ಮಾಡಿಸಿದ್ದರು. ಈ ಮೂಲಕ ಹಕ್ಕಿ ಶಾಂತಿಯಿಂದ ಮಕ್ಕಳಿಗೆ ಜನ್ಮ ನೀಡಲಿ ಎಂಬ ಉದ್ದೇಶ ಅವರದ್ದಾಗಿತ್ತು.